ಪುಟ:ಬೆಳಗಿದ ದೀಪಗಳು.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಸಪುಟನ

೧೦೩

ಕೆಯು ಮಿತ್ರ ಸಂಘದವರನ್ನು ಕೂಡಿಕೊಂಡು ಜರ್ಮನಿಯ ವಿರುದ್ಧವಾಗಿ ಯುದ್ಧವನ್ನು ಸಾರುವಾಗ, ಅಲ್ಲಿಯ ಪ್ರೆಸಿಡೆಂಟರಾದ ಮಿ. ಉಡ್ರೋ ವಿಲ್ಸನ್ ಇವರು, ಜಗತ್ತಿನೊಳಗಿನ ಏಕಮುಖಿಯಾದ ರಾಜಸತ್ತೆಯನ್ನು ಮರ್ಯಾದಿತ ಮಾಡಿ ಬಹುಮುಖಿಯಾದ ಲೋಕಸತ್ತೆಯನ್ನು ಪ್ರಸ್ಥಾಪಿಸ ಮಾಡುವದಕ್ಕಾಗಿಯೇ ಈ ಯುದ್ಧವು ಪ್ರಾರಂಭವಾಗಿದೆಂದು ಹೇಳಿ, ಸಾಮಾನ್ಯರಾದ ಜನರ ದೃಷ್ಟಿಗೆ ಅಗೋಚರವಾಗಿ ಬೆಳೆಯುತ್ತಿರುವ ಈ ತತ್ವದ ಸ್ವರೂಪವನ್ನು ತಿಳಿಸಿಕೊಟ್ಟರು. ರಶಿಯಾದಲ್ಲಿ ರಾಜ್ಯ ಕ್ರಾಂತಿಯಾಗಿ ರಶಿಯನ್ ರಾವಣನಾದ ರುವಾರನು ಪದಭ್ರಷ್ಟನಾಗಿ ಅಲ್ಲಿ ಲೋಕಸತ್ತಾತ್ಮಕ ರಾಜ್ಯ ಪದ್ಧತಿಯ ಉದಯವಾದಾಗ ಇಂಗ್ಲಂಡದ ಮುಖ್ಯ ಪ್ರಧಾನರಾದ ಲಾಯಿಡ್ ಜಾರ್ಜ ರವರು ರಶಿಯನ್ ಡೂಮಾರವರನ್ನು ಅಭಿನಂದಿಸುವ ಕಾಲಕ್ಕೆ ಈ ಮೇಲ್ಕಂಡ ತತ್ವದ ವಿಶ್ವ ವ್ಯಾಪಕತ್ವವನ್ನು ಜಗತ್ತಿಗೆ ತೋರಿಸಿದರು.

ಸದ್ಯಕ್ಕೆ ಈ ವಿಚಾರಕ್ಕೆ ಮಹತ್ವ ಬರಲು ಕಾರಣವಾದ ರಶಿಯನ್ ರಾಜ್ಯ ಕ್ರಾಂತಿಯಲ್ಲಿ ಮೊದಲನೆಯ ಆಹುತಿಯಾಗಿ ಬಿದ್ದ ರಾಸಪುಟವನ ಕುಟಿಲನೀತಿ ಆಚಾರ- ವಿಚಾರಗಳ ಇತಿವೃತ್ಯವನ್ನೇ ಹೇಳುವದು ನಮ್ಮ ಉದ್ದೇಶವಾಗಿರುವದರಿಂದ, ಏಕಸತ್ತಾತ್ಮಕವಾದ ರಾಜ್ಯ ಪದ್ಧತಿಗಿಂತಲೂ ಲೋಕ ನಿಯಂತ್ರಿತವಾದ ರಾಜ್ಯ ಪದ್ಧತಿಯು ಲೋಕಕ್ಕೆ ಏಕೆ ಹಿತಕರವಾದದ್ದೆಂಬದನ್ನು ಹೇಳುವ ಉದ್ಯೋಗಕ್ಕೆ ನಾವು ಇಲ್ಲಿ ಬೀಳುವದಿಲ್ಲ. ರಶಿಯಾದೊಳಗಿನ ಕ್ರಾಂತಿಕಾರಕ ಪಕ್ಷದವರು ತಮ್ಮ ಉದ್ದೇಶವು ಸಫಲವಾಗಬೇಕೆಂದು ಈಗ್ಗೆ ಎಷ್ಟೋ ವರ್ಷಗಳಿಂದ ಅವ್ಯಾಹತವಾಗಿ ಪ್ರಯತ್ನ ಪಡುತ್ತಿದ್ದರು. ಹೀಗೆ ಪ್ರಯತ್ನವನ್ನು ಮಾಡುತ್ತಿರುವವರಲ್ಲಿ ಸಾವಿರಾರು ಜನರು ಝಾರನ ಕೊಧಾಗ್ನಿಯಿಂದ ಮುಡಿದುಹೋದರು. ಲೋಕಹಿತವಾದಿಗಳಾದ ಈ ಜನರ ಹತ್ಯೆಯ ಪಾಪದ ಭಾರದಿಂದ ರಾರನ ಏಕಮುಖೀ ರಾಜ ಸತ್ತೆಯ ಮಂದಿರವು ವಿಶೃಲಿತವಾಗಿಹೋಗಿತ್ತು. ಪರರಾಷ್ಟ್ರಗಳ ಯುದ್ಧವನ್ನು ಮಾಡುವದರಲ್ಲಿ ರಾಜಸತ್ತೆಯು ತೊಡಗಿತೆಂದರೆ, ಕ್ರಾಂತಿಕಾರಕ ಜನರಿಗೆ ಅದೊಂದು ಸುಸಂಧಿಯು ಪ್ರಾಪ್ತವಾದಂತಾಗುತ್ತದೆ. ಇಂಥ ಸುಸಂಧಿಯಂ ರಶಿಯನ್ ಕ್ರಾಂತಿಕಾರರಿಗೆ ರುಸೋಜಪಾನಿ ಯುದ್ಧದಲ್ಲಿ ಮೊದಲನೆಯ ಸಾರೆ ದೊರೆಯಿತು. ಈ ಸುಸಂದಿಯ ಲಾಭವನ್ನು ಕ್ರಾಂತಿಕಾರಕ ಪಕ್ಷದವರು ತೆಗೆದು