ಪುಟ:ಬೆಳಗಿದ ದೀಪಗಳು.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ಸಂಪೂರ್ಣ-ಕಥೆಗಳು

ಕೊಂಡಿದ್ದರಿಂದ, ಲೋಕಸತ್ತೆಯ ಜಯದ ಚಿಹ್ನವಾದ ಡ್ಯೂಮಾಸಭೆಯ ಸ್ಥಾಪನೆಯು ಆ ಕಾಲಕ್ಕಾಯಿತು. ಆದರೆ, ಡ್ರೈಮಾಸಭೆಗೆ ಝಾರನು ಯಾವದೇರೀತಿಯಾಗಿ ಮಯ್ಯಾದೆಯನ್ನು ತೋರಿಸದ್ದರಿಂದ ಪ್ರಚಲಿತ ಮಹಾಯುದ್ಧದ ಸಂಧಿಯನ್ನು ಸಾಧಿಸಿ, ಕ್ರಾಂತಿಕಾರಕ ಪಕ್ಷದವರು ಮತ್ತೆ ತಮ್ಮ ಧ್ವಜವನ್ನು ನಿಲ್ಲಿಸಿ, ಈ ಸಾರೆ ತಮಗೆ ಸಂಪೂರ್ಣವಾದ ಜಯವನ್ನು ಪ್ರಾಪ್ತ ಮಾಡಿಕೊಂಡರು. ಕ್ರಾಂತಿಕಾರಕ ಪಕ್ಷದವರಿಗೆ ಒಬ್ಬ ಝಾರನಿಂದಲೇ ಭೀತಿ ಇರದೆ, ಏಕಮುಖಿಯಾದ ಸತ್ತೆಯ ಮೂಲಕವಾಗಿ ಜನ್ಮ ಹೊಂದಿದ ಝಾರನ ಆನುಷಂಗಿಗಳಾದ ಡ್ಯೂಕರೇ ಮೊದಲಾದ ರಾಜವಂಶಸ್ಥರ ಭೀತಿಯಾದರೂ ಇದ್ದೆ ಇದ್ದಿತು. ಯಾಕೆಂದರೆ, ಇವರೆಲ್ಲರ ಏಕತಂತ್ರವಾದ ಸತ್ತೆಯ ಪ್ರತಿಬಿಂಬವಾಗಿದ್ದು, ಬಲಶಾಲಿಗಳೂ ಸತ್ತಾಧಿಕಾರಿಗಳೂ ಆಗಿದ್ದರು. ಆದರೆ ಈ ಜನರೆಲ್ಲ ಯುದ್ಧದಲ್ಲಿ ತೊಡಕಿ, ರಾಜಧಾನಿಯನ್ನು ಬಿಟ್ಟು, ಸಾವಿರಾರು ಮೈಲುಗಳ ಅಂತರದ ಮೇಲೆ ಹೋಗಿರುವದನ್ನು ಕಂಡು, ಕ್ರಾಂತಿಕಾರಕ ಪಕ್ಷದವರು ಈ ಸಂಧಿಯನ್ನು ಸಾಧಿಸಿದರು. ಝಾರನ ಹತ್ತಿರದಲ್ಲಿದ್ದ ಸೈನ್ಯವೆಲ್ಲ ಫಿತೂರಿ, ಕ್ರಾಂತಿಕಾರಕ ಪಕ್ಷದವರಿಗೆ ಬಲಾಡ್ಯ ಶತ್ರುವೂ ರಾಜಪಕ್ಷದವರಿಗೆ ದೊಡ್ಡ ಬೆಂಬಲನೂ ಝಾರ ಹಾಗೂ ಅವನ ಪತ್ನಿಯರಾದ ಝಾರೀನಾ ಇವರನ್ನು ಆರಂಭ ಮಾಡಿಕೊಂಡು, ಯಃಕಶ್ಚಿತನಾದ ಮನುಷ್ಯನ ವರೆಗೆ ತನ್ನ ಅಧಿಕಾರವನ್ನು ನಡಿಸಿದವನೂ ಆದ ಮಂಕರ ರಾಸಪುಟನ ಎಂಬವನ ಕೊಲೆಯನ್ನು ಕ್ರಾಂತಿಕಾರಕ ಪಕ್ಷದವರು ದಿಸೆ೦ಬರದ ಕೊನೆಯ ವಾರದಲ್ಲಿ ಮಾಡಿದರು. ರುಧಿರಪ್ರಿಯಳಾದ ಕ್ರಾಂತಿಯ ದೇವತೆಗೆ ಕೊಡಲ್ಪಟ್ಟ ಬಲಿಗಳಲ್ಲಿ ಇವನೇ ಮೊದಲನೆಯವನು, ಈ ವ್ಯಕ್ತಿಯ ಚರಿತ್ರವು ವಿಚಿತ್ರವಾಗಿರುವದರಿಂದ ಅದನ್ನು ಇಲ್ಲಿ ಅಲ್ಪಶಃ ಕೊಡುತ್ತೇವೆ.

ಸಾಯಬಿರಿಯಾ ಪ್ರಾಂತದಲ್ಲಿ ಟೇಬೋಲಸ್ಯದಲ್ಲಿ ರಾಸಪುಟನನ ಜನ್ಮವಾಯಿತು. ಆಯುಷ್ಯದ ಮೊದಲನೆಯ ಮೂವತ್ತು ವರ್ಷಗಳನ್ನು ಇವನು ಒಕ್ಕಲತನದ ವ್ಯವಸಾಯದಲ್ಲಿಯೇ ಕಳೆದನು. ರಾಸಪುಟನನು ಮಹತ್ವಾಕಾಂಕ್ಷಿಯ ಧೈರ್ಯಶಾಲಿಯ ಬುದ್ಧಿವಂತನೂ ಆಗಿದ್ದಂತೆಯೇ ವಿಷಯೋಪಭೋಗಿಯ ಲೋಭಿಯೂ ಆಗಿದ್ದನು. ಅಮಿತವಾದ ದ್ರವ್ಯವನ್ನು ಅಧಿಕಾರವನ್ನೂ ಸಂಪಾದಿಸುವ ಮಹತ್ವಾಕಾಂಕ್ಷೆಯು ಇವನಲ್ಲಿ