ಪುಟ:ಬೆಳಗಿದ ದೀಪಗಳು.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಸಪುಟನ

೧೦೫

ಅನಿವಾರ್ಯವಾಗಿತ್ತು. ಈ ಗುಣಗಳು ಅವನನ್ನು ಸುಮ್ಮನೆ ಕೂಡಗೊಡಲಿಲ್ಲ, ಸಾಧು ಸಂತರ ಅಥವಾ ಸನ್ಯಾಸಿಗಳ ವೇಷವನ್ನು ತೊಟ್ಟು, ಮೂಢಭಕ್ತರನ್ನು ಮೋಸಗೊಳಿಸುತ್ತ ಧರ್ಮಜಾಗೃತಿಯನ್ನು ಮಾಡುವ ವಿಷದಿಂದ ದೇಶ ಸಂಚಾರವನ್ನು ಮಾಡುತ್ತಿರುವ ಅನೇಕ ಜನರನ್ನು ನಮ್ಮಲ್ಲಿ ಈ ಜನರಂತೆಯೇ ರಾಸಪುಟವನಿಗಾದರೂ ವಿಷಯಗಳಲ್ಲಿ ವೈರಾಗ್ಯವುಂಟಾಗಿ ಧರ್ಮಜಾಗೃತಿಯನ್ನು ಮಾಡುವ ಬುದ್ಧಿಯುಂಟಾಯಿತು. ಮಠ-ಮಠಾಂತರಗಳಲ್ಲಿ ಸಂಚರಿಸುತ್ತ ಅಲ್ಲಿ ಪ್ರಚಲಿತವಾಗಿದ್ದ ಕ್ರಿಸ್ತಮತದ ಮೇಲೆ ಟೀಕೆಯನ್ನು ಮಾಡುವದೇ ಅವನ ಪ್ರಾರಂಭದ ಕಾರ್ಯವಾಗಿತ್ತು. ಇದೇ ಮಾರ್ಗದಿಂದಲೇ ಅವನು ಸರ್ವತ್ರದಲ್ಲಿ ತನ್ನ ವರ್ಚಸ್ಸನ್ನು ಸ್ಥಾಪಿಸಿದನು. ಬರುಬಬತ್ತೆ ರಾಸಪುತಿನನು ಧರ್ಮದ ರಾಜ್ಯದಲ್ಲಿ ಪ್ರಸಿದ್ಧನಾದ ವ್ಯಕ್ತಿಯೇ ಆಗಿ ಕುಳಿತನು.

ಸಾಯಬಿರಿಯಾ ಪ್ರಾಂತದ ಜನರು ಮೊದಲೇ ಸಶಕ್ತರು. ಅದರಲ್ಲಿಯೂ ರಾಸಪುಟಿನನು, ಹಗಲಿರುಳು ಹೊಲದಲ್ಲಿ ದುಡಿಯುವ ತಂದೆತಾಯಿಗಳ ಹೊಟ್ಟೆ ಯಲ್ಲಿ ಹುಟ್ಟಿದವನಾದ್ದರಿಂದ ಇವನು ಶರೀರದಿಂದ ಭವ್ಯನೂ ಸಶಕ್ತನೂ ಆಗಿದ್ದನು. ಸುಂದರವೂ ಚಿತ್ತಾಕರ್ಷಕವೂ ಇವನ ಮುಖಮುದ್ರೆ, ಉಚ್ಚವಾದ ಭಾಲ ಪ್ರದೇಶ, ತೇಜಃಪುಂಜವಾದ ನೇತ್ರಯುಗ್ಮ, ವಿಸ್ತಾರವಾದ ಹೃದಯ ಮುಂತಾದವುಗಳ ಪರಿಣಾಮವು ಅವನನ್ನು ನೋಡುವವರ ಮೇಲೆ ವಿಲಕ್ಷಣವಾಗಿ ಆಗುತ್ತಿತ್ತು. ಅವನ ಮಾತು ಕಥೆಗಳಲ್ಲಾದರೂ ಒಂದು ಪ್ರಕಾರದ ಮೋಹಕತನವಿತ್ತು. ಇಂಥ ಅನೇಕವಾದ ಗುಣಗಳ ಸಹಾಯವು ಅವನಿಗೆ ಇದ್ದ ದರಿಂದ ರಾಸಪುಟನನ ವರ್ಚಸ್ಸು ದಿನೇ ದಿನೇ ಬೆಳೆಯಹತ್ತಿತು. ಸ್ತ್ರೀಯರ ಮೇಲಂತೂ ಅವನ ಅಂಗ ಸೌಂದರ್ಯದ ಹಾಗೂ ಧಾರ್ಮಿಕ ಉಪದೇಶದ ಪರಿಣಾಮವು ಒಳಿತಾಗಿಯೇ ಆಗಹತ್ತಿತು. ಸಾಯಬಿಡಿಯಾದಿಂದ ಹೊರಟ ಆವನ ಧಾರ್ಮಿಕ ಮತದ ತೆರೆಗಳು ರಶಿಯಾದ ರಾಜಧಾನಿಯಾದ ಸೆಂಟಿಪಿಟರ್ಸಬರ್ಗದ ಬಾಗಿಲಕ್ಕೆ ಬಂದು ಅಪ್ಪಳಿಸ ಹತ್ತಿದವು. ತನ್ನ ಅಮೋಘವಾದ ವಕ್ತತ್ವದ ಬಲದಿಂದ ಸಾಯ ಬಿರಿಯಾದೊಳಗಿನ "ಪುರಾಣಮಿತ್ಯೇವ ಹಿ ಸಾಧು ಸರ್ವಂ" ಎಂದು ಪ್ರತಿಪಾದಿಸುವ ಕ್ರಿಸ್ತಿ ಮತಾಭಿಮಾನಿಗಳ ನಾಲಿಗೆಯನ್ನು ಕಟ್ಟಿದನು. ರಾಸಪುಟನನ ಈ