ಪುಟ:ಬೆಳಗಿದ ದೀಪಗಳು.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಸಪುಟನ

೧೦೭

ಪ್ರಸಾದದಿಂದಲೂ ತಮಗೆ ಇಂಥ ಮಗನು ಹುಟ್ಟಿದನೆಂಬ ಸಂಪೂರ್ಣವಾದ ಶ್ರದ್ಧೆಯು. ರಾಣಿಯವರಲ್ಲಿ ನೆಲೆಗೊಂಡಿದ್ದರಿಂದ ಇದರ ಪರಿಣಾಮವು ಝಾರರ ಮೇಲಾದರೂ ಒಳಿತಾಗಿಯೇ ಆಯಿತು. ಇದರಿಂದ ರಾಸಪುಟನನು ದರಬಾರದೊಳಗಿನ ಒಬ್ಬ ಪ್ರಮುಖನಾಡ ಗೃಹಸ್ಥನಾಗಿ ಅವನ ವರ್ಚಸ್ಸು ಝಾರರ ಮೇಲೆ ವಿಶೇಷವಾಗಿ ಬೆಳೆಯಿತು. ಝಾರರ ಯುವರಾಜನಾದ ರಾಗವಿಚ್ಚನು ವ್ಯಂಗನಾಗಿಯೇ ಹುಟ್ಟಿದ್ದರಿಂದ ಈ ವ್ಯಂಗವನ್ನು ಕಳೆಯುವದಕ್ಕಾಗಿ ಯುರೋಪದೊಳಗಿನ ಪ್ರಖ್ಯಾತರಾದ ಡಾಕ್ಟರರೆಲ್ಲರೂ ಪ್ರಯತ್ನ ಪಟ್ಟರೂ ಅವರ ಪ್ರಯತ್ನವು ಸಿದ್ಧಿಗೆ ಹೋಗಲಿಲ್ಲ. ಆಗ್ಗೆ ಝರೀನಾ ಇವರ ಆಗ್ರಹದ ಮೂಲಕವಾಗಿ ರಾಸಪುಟವನನ್ನು ಕರೆತಂದು ರಾಜಮಂದಿರದಲ್ಲಿಯೇ ಅವನಿಗೆ ಇರಹೇಳಿದರು. ಅವನ ಅದ್ಭುತವಾದ ಸಾಮರ್ಥ್ಯದಿಂದಲೇ ಸ್ವಲ್ಪಾವಕಾಶದಲ್ಲಿ ಝಾರವಿಚ್ಚನ ಕಾಲೊಳಗಿನ ವ್ಯಂಗವು ಇಲ್ಲದಂತಾಗಿ ಅವನು ನಡೆಯು ಹತ್ತಿದನು. ಝಾರವಿಚ್ಚನು ವಾಸಿಯಾದ ಬಳಿಕ ರಾಸಪುಟಿನನಿಂದ ಅವನು ಆಗಲಿಸಲ್ಪಟ್ಟನು. ಆದರೆ, ಚಮತ್ಕಾರದ ಸಂಗತಿಯೆಂದರೆ, ರಾರವಿಚ್ಚನ ದೇಹವು ಪೂರ್ವವತ್‌ ನಿರ್ಬಲವಾಯಿತು. ಅದಕ್ಕಾಗಿ ರಾಸಪುಟವನನ್ನು ಮತ್ತೆ ಕರತರಬೇಕಾಯಿತು. ಈ ರೀತಿಯಾಗಿ ರಾಸಪುಟನನು ಝಾರರ ಮನೆಯೊಳಗೆ ಅವಶ್ಯಕನಾದ ಗೃಹಸ್ಥನೊಬ್ಬನಾದ್ದರಿಂದಲೂ ಅವನ ಸಾಮರ್ಥ್ಯದ ವಿಷಯಕವಾಗಿ ರಾಜದಂಪತಿಯರ ವಿಶ್ವಾಸವಿದ್ದದರಿ೦ದಲೂ ಕಾಲಾನುಕ್ರಮವಾಗಿ ಝಾರನು ಪ್ರತಿಯೊಂದು ಸಂಗತಿಯಲ್ಲಿ ಅವನನ್ನು ವಿಚಾರಿಸಹತ್ತಿದನು. ಇದನ್ನು ಕಂಡು ಅಧಿಕಾರ೮ಾಲಸರಾದ ಅಧಿಕಾರೀ ವರ್ಗದವರೆಲ್ಲ ತಮಗೆ ಬೇಕಾದ ಸಂಗತಿಗಳನ್ನು ರಾಸಪುಟವನ ಮುಖಾಂತರವಾಗಿ ಮಾಡಿಸಿಕೊಳ್ಳಹತ್ತಿದರು. ಈ ರೀತಿಯಾಗಿ ರಾಸಪುಟನನು ಅಧಿಕಾರಿ ವರ್ಗಕ್ಕೆ ಪ್ರಿಯನಾಗಹತ್ತಿದಂತೆ, ಕ್ರಾಂತಿಕಾರಕ ಪಕ್ಷದವರಿಗೆ ಬಲಾಡ್ಯನಾದ ಶತ್ರುವಾಗಿ ಕುಳಿತನು.

“ಸಂಪೂರ್ಣವಾದ ರಶಿಯಾದ ಪವಿತ್ರ ನಾದ ಝಾರ"ನು ಈ ಗೃಹಸ್ಥನ ವಶನಾಗಿದ್ದರಿಂದ ಇವನು ತನ್ನ ಮನಸ್ಸಿಗೆ ಬಂದ ಕಾರಭಾರಗಳನ್ನು ಮಾಡಹತ್ತಿದನು. ಜನರ ಕಡೆಯಿಂದ ಅನ್ಯಾಯವಾಗಿ ದ್ರವ್ಯವನ್ನು ಸೆಳೆಯುವದೇ ಇವನ ಕೆಲಸವಾಗಿರದೆ, ತನ್ನ ಸ್ವಭಾವಕ್ಕನುಸರಿಸಿ, ಸುಂದರರು