ಪುಟ:ಬೆಳಗಿದ ದೀಪಗಳು.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ಸಂಪೂಣ೯-ಕಥೆಗಳು

ಆದರೆ ಅನಾಥರಾದ ಸ್ತ್ರೀಯರ ಮೇಲೆ ಅನನ್ವಿತವಾದ ಜುಲುಮೆಗಳನ್ನು ಮಾಡಲಾರಂಭಿಸಿದನು. ನೂರಾರು ಸ್ತ್ರೀಯರನ್ನು ಅವನು ಭ್ರಷ್ಟ ಮಾಡಿದನು. ನೃಪಾಂಗಣಗತನಾದ ಈ ಖಲನು ಶಲ್ಯದಂತೆ ಸರ್ವರಿಗೂ ಶಾಪದಾಯಕನಾದನು. ಇವನನ್ನು ದೇಶಬಿಡಿಸಿ ಹೊರಗೆ ಹಾಕಬೇಕೆಂದು ಅನೇಕ ವಾದ ಪ್ರಯತ್ನಗಳು ಮಾಡಲ್ಪಟ್ಟವು ಪೆಟ್ರೋಗಾಡದ ಧರ್ಮಾಧಿಕಾರಿಗಳಾದರೂ ಪ್ರಯತ್ನ ಪಟ್ಟರು. ಆದರೆ, ಝಾರನ ಆರಭ್ಯ ಕನಿಷ್ಟ ಅಧಿಕಾರಿಯವರೆಗಿನ ಪ್ರತಿಯೊಬ್ಬ ಅಧಿಕಾರಿಯ ಬೆಂಬಲವು ಇವನಿಗಿದ್ದದರಿಂದ ಜನರ ಪ್ರಯತ್ನಗಳೆಲ್ಲ ವ್ಯರ್ಥವಾದವು. ಪ್ರಮುಖರಾದ ಸೇನಾಪತಿಗಳೂ ಮಧ್ಯಾಹ್ನ ಕೈ ಅಭಾವವಾದ ದರಿದ್ರರೂ ಕೂಡಿಯೇ ಇವರ ಧರ್ಮಾಲಯಕ್ಕೆ ಬರುತ್ತಿದ್ದರು. ರಾಜಧಾನಿಯೊಳಗಿನ ವಿಲಾಸಿನಿಯರು ಕೂಡ ಈ ಧರ್ಮಾಲಯವನ್ನೇ ತಮ್ಮ ವಿಶ್ರಾಂತಿ ಸ್ಥಾನವನ್ನಾಗಿ ಕಲ್ಪಿಸಿಕೊಂಡರು ರಾಸಪುಟನ ಧರ್ಮಾಲಯವು, ಶ್ರೀಮಂತರೂ ವಿಷಯಲೋಲುಪರೂ ದುಂದುಗಾರರೂ ಆದ ಜನರ ಕೇಲಿಸ್ಥಾನವಾದಂತೆ, ಅನಾಥ ಸ್ತ್ರೀಯರ ಮಾನಹಾನಿಯ ನರಕವಾಗಿತ್ತು. ಝಾರವಿಚ್ಚನ ವಿಷಯಕವಾಗಿ ಆದರೂ ಜನರ ಪ್ರವಾದಗಳು ಕೇಳಿಬರಹತ್ತಿದವು. ಇದಕ್ಕಾಗಿ ರಾಸಪುಟನನು ಹದ್ದು ಪಾರು ಮಾಡಲ್ಪಟ್ಟನು.

ಅಪಮಾನವನ್ನು ಸಹಿಸಿ ಹದ್ಧಸಾರನಾಗಿ ಇರುವದು ರಾಸಪುಟಿನನ ಸ್ವಭಾವವಾಗಿದ್ದಿಲ್ಲ. ರಾಜರಾಣಿಯರಿಗೆ ತನ್ನ ದೈವೀಸಾಮರ್ಥ್ಯದ ಹೆದರಿಕೆಯನ್ನು ತೋರಿಸಿ, ಅವರಿಗೆ ಕ್ಷಮೆಯನ್ನು ಪಡೆದು ಕೊಂಡು ೧೯೧೩ನೆಯ ಇಸ್ವಿಯ ಕೊನೆಯಲ್ಲಿ ಇವನು ಮತ್ತೆ ರಾಜಧಾನಿಗೆ ಬಂದನು ಇದೇ ಸುಮಾರಕ್ಕೆ ಮಾಸಭೆಯೊಳಗಿನ ಸಭಾಸದರು ಇವನನ್ನು ಬಹಿರಂಗವಾಗಿ ನಿಂದಿಸಿ, ರಾಜಧಾನಿಯಲ್ಲಿರಲು ಇವನು ಅಯೋಗ್ಯನಾದ ಪುರುಷನೆಂದು ಗೊತ್ತು ಪಡಿಸಿದರೂ ಇವನನ್ನು ಹೊರಗೆ ಹಾಕುವದು ಅಸಾಧ್ಯವಾಯಿತು. ಆದರೆ, ಪಾಪದ ಪ್ರಾಯಶ್ಚಿತ್ತವು ಒಂದಿಲ್ಲೊಂದು ವಾರದಿಂದ ದೊರೆಯುವದು ನಿಶ್ಚಯವಾದ ವಸತಿ ೧೯೧೪ನೆಯ ಇಸ್ವಿಯ ಜುಲೈ ತಿಂಗಳಿನಲ್ಲಿ ಜುಲಿಯಾ ಮ್ಯುಸೇವಾ ಎಂಬ ಸ್ತ್ರೀಯೋರ್ವಳು ಇವನನ್ನು ಕೊಲ್ಲುವ ಉದ್ದೇಶದಿಂದ ಇವನ ಮೇಲೆ ಶಸ್ತಾಘಾತವನ್ನು ಮಾಡಿದಳು.