ಪುಟ:ಬೆಳಗಿದ ದೀಪಗಳು.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಸಪುಟನ

೧೦೯

ಆದರೆ, ಆ ಕಾಲಕ್ಕೆ ಇವನು ಭಯಂಕರವಾದ ಗಾಯವನ್ನು ಹೊಂದಿದನೇ ಹೊರತಾಗಿ ಮರಣಹೊಂದಲಿಲ್ಲ, ಜುಲಿಯಾ ಇವಳು ಮಾಡಿದ ಸಾಹಸಕ್ಕಾಗಿ ಅವಳನ್ನು ನ್ಯಾಯಾಸನದ ಮುಂದೆ ನಿಲ್ಲಿಸಿದಾಗ ಇವಳು ಹೇಳಿದ್ದೇನಂದರೆ, “ರಾಸಪುಟಿನನು ಅನಾಥರಾದ ಆನೇಕ ಸ್ತ್ರೀಯರ ಪಾತಿವ್ರತ್ಯವನ್ನು ಭಂಗಮಾಡಿದ್ದರಿಂದ ಅವನಿಗೆ ದೇಹಾಂತ ಶಿಕ್ಷೆಯನ್ನು ಕೊಡುವದು ಯೋಗ್ಯವಾದದ್ದು. ಆದರೆ ಅನಾಮಯವಾದ ಈ ರಾಜ್ಯದಲ್ಲಿ ಅದು ಆಗುವದು ಶಕ್ಯವಿಲ್ಲದ್ದರಿಂದ ನಾನು ಅವನ ಕಲೆಯನ್ನು ಮಾಡುವ ಪ್ರಯತ್ನವನ್ನು ಮಾಡಿದೆನು."

ಮೇಲೆ ಹೇಳಿದ ಗಾಯದಿಂದಲೇ ಇವನು ಹಾಸಿಗೆಯನ್ನು ಹಿಡಿದಾಗ ರಶಿಯಾ ಝಾರನು ಜರ್ಮನಿಯ ವಿರುದ್ಧವಾಗಿ ಯುದ್ಧವನ್ನು ಸಾರಿದನು. ಜರ್ಮನಿಯ ಗುಪ್ತ ಚಾರರದೂ ಇವನದೂ ಸಂಬಂಧವಿತ್ತೆಂತಲೂ ಯುದ್ಧಾರಂಭದಲ್ಲಿ ಇವನು ದೃಢಾಂಗನಾಗಿದ್ದರೆ ಜರ್ಮನಿಯ ವಿರುದ್ಧವಾಗಿ ಯುದ್ಧ ಮಾಡಲು ಝಾರನನ್ನು ಪ್ರೋತ್ಸಾಹಿಸುತ್ತಿದ್ದಿಲ್ಲೆಂತಲೂ ಜನರು ಅನ್ನುತ್ತಾರೆ. ಮೇಲೆ ವರ್ಣಿತವಾದ ಕೊಲೆಯ ಪ್ರಯತ್ನವು ಯಶಸ್ವಿಯಾಗದ್ದರಿಂದಂತೂ ತನ್ನ ದೈವೀಸಾಮರ್ಥ್ಯದ ಪ್ರೌಢಿಯನ್ನು ಮೆರೆಯಿಸುವ ಅವಕಾಶವು ಇವನಿಗೆ ವಿಶೇಷವಾಗಿ ದೊರೆಯಿತು. ಮನುಷ್ಯನು ಒಮ್ಮೆ ನಾಚಿಕೆಯನ್ನು ಬಿಟ್ಟು ಕೊಟ್ಟನೆಂದರೆ, ಅವನ ಅವನತಿಗೆ ಮರ್ಯಾದೆಯೇ ಉಳಿಯುವದಿಲ್ಲ. ರಾಸಪುಟವನು ತನ್ನ ಆತ್ಮ ಸ್ತುತಿ ಮಾಡಿಕೊಳ್ಳುವಾಗ ಎರಡು ಮೂರುವರ್ಷಗಳ ಪೂರ್ವದಲ್ಲಿ ತಾನು ಎಷ್ಟು ಸ್ತ್ರೀಯರನ್ನು ಅಂಕಿತನಾಡಿಕೊಂಡಿದ್ದೆನೆಂಬ ವರ್ಣನೆಯನ್ನು ನಿರ್ಲಜ್ಜತೆಯಿಂದ “ನೋವ್ಹೆ ರ್ಹೇಮ್ಯ" ಎಂಬ ಪತ್ರದಲ್ಲಿ ಪ್ರಸಿದ್ಧ ಮಾಡಿದ್ದಾನೆ.

ಈ ರೀತಿಯಾಗಿ ಪ್ರಬಲನೂ ಸಾಮರ್ಥ್ಯವಾನನೂ ದೈವೀಗುಣದ ಮಿಥ್ಯಾಪ್ರದರ್ಶಕನೂ ಅನಾಥ ಸ್ತ್ರೀಯರ ಮಾನಹಾರಕನೂ ಆದ ಈ ಅಧವ್ಯನನ್ನು ಜಗತ್ತಿನಲ್ಲಿ ಇಲ್ಲದಂತೆ ಮಾಡುವದು ಕ್ರಾಂತಿಕಾರಕ ಪಕ್ಷದವರ ಆದು ಕರ್ತವ್ಯವಾಗಿತ್ತು. ರಶಿಯಾದೊಳಗಿನ ಸರದಾರರ ಮನೆತನಕ್ಕೆ ಹೊಂದಿದ ಆರು ಜನ ಗೃಹಸ್ಥರು ಈ ಕಾರ್ಯವನ್ನು ವಹಿಸಿಕೊಂಡರು. ಇವರಲ್ಲಿ ಪ್ರಿನ್ಸ್ ಫೆಲಿಕ್ಸಿಯುಸುಪೋವ ಎಂಬ ಸರದಾರನು ಇವನಿಗೆ ತನ್ನ ಮನೆಗೆ