ಪುಟ:ಬೆಳಗಿದ ದೀಪಗಳು.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

ಒಂದಾನೊಂದು ಕ್ಷೇತ್ರದಲ್ಲಿಯ ಒಂದು ಶಾಂತವಾದ ಮಠದಲ್ಲಿ ಒಬ್ಬ ಬ್ರಹ್ಮಚಾರಿಯು ಇರುತ್ತಿದ್ದನು. ಬ್ರಾಹ್ಮ ಮುಹೂರ್ತದಲ್ಲಿ ತೀರ್ಥೋದಕದಲ್ಲಿ ಸ್ನಾನ, ಮಧ್ಯಾಹ್ನ ಕಾಲದಲ್ಲಿ ಮಧುಕರ ವೃತ್ತಿ, ಉಳಿದ ಕಾಲದಲ್ಲಿ ವೇದಾಧ್ಯಯನ, ಶಾಸ್ತ್ರಾಧ್ಯಯನ, ಕಾವ್ಯ ಪರಿಶೀಲನ, ಭಗವಚ್ಚಿಂತನ, ಮುಂತಾದ ಸತ್ಕರ್ಮಗಳಿಂದ ಆ ಬ್ರಹ್ಮಚಾರಿಯು ಸತ್ತುಲಕ್ಷೇಪವನ್ನು ಮಾಡುತ್ತಿದ್ದನು. ಅವನ ಮೈ ಕಟ್ಟು ಸುದೃಢವಾಗಿಯ. ಶರೀರಯಷ್ಟಿಯು ಉಚ್ಚವಾಗಿಯ ವರ್ಣವು ಗೌತವಾಗಿಯೂ ಮಗು ಸರಲವಾಗಿಯೂ ಕಣ್ಣುಗಳು ವಿಶಾಲವಾಗಿಯೂ ಇದ್ದು ಅವನ ಮುಖಕಾಂತಿಯು ಒಳ್ಳೇ ತೇಜಃಪುಂಜವಾದದ್ದಾಗಿತ್ತು. ಜನ್ಮದಾರಭ್ಯ ಅವನ ಆಚರಣವು ಶುದ್ಧವಾಗಿದ್ದು, ಮರಣಾಂತಿಕವಾದ ಸಂಕಟಗಳು ಬಂದೊದಗಿದರೂ ತನ್ನ ಆಚರಣಗಳಿಂದ ತಾನು ಭ್ರಷ್ಟನಾಗಕೂಡದೆಂದು ಅವನು ಮನಸಾ ನಿಶ್ಚಯ ಮಾಡಿದ್ದನು. ಅವನ ತಂದೆತಾಯಿಗಳು ಬಡವರಾಗಿದ್ದು ಅವನು ಚಿಕ್ಕವನಿರುವಾಗಲೇ ಮಡಿದುಹೋಗಿದ್ದರು. ಅದರಿಂದ ದಾರಿದ್ರವು ಅವನ ನಿಸರ್ಗಸಿದ್ಧವಾದ ಅವಸ್ಥೆಯೇ ಆಗಿತ್ತು. ಆದರೂ ಇದಕ್ಕಾಗಿ ಅವನು ಎಂದೂ ಖೇದಪಡುತ್ತಿದ್ದಿಲ್ಲ. ಅವನು ಯಾವಾಗಲೂ ಸಮಾಧಾನವುಳ್ಳವನಾಗಿದ್ದನು. ಅವನು ಪೂರ್ಣನಾದ ನಿರ್ಲೋಭಿಯ ದ್ರವ್ಯವೆಂದರೆ, ಅವನಿಗೆ ದ್ವೇಷವು ಹುಟ್ಟುತ್ತಿತ್ತು. ಈ ರೀತಿಯಾಗಿ ಅವನು ತನ್ನ ಆಯುಷ್ಯದ ಪೂರ್ವ ಭಾಗವನ್ನು ಸುಖದಲ್ಲಿಯೂ, ಸಮಾಧಾನದಲ್ಲಿಯೂ ಕಳೆಯುತ್ತಿರಲು, ಒಂದು ದಿನ ರಾತ್ರಿಯ ಕೊನೆಯ ಯಾಮದಲ್ಲಿ ಅವನಿಗೊಂದು ಸ್ವಪ್ನವು ಬಿದ್ದಿತು. ಸ್ವಪ್ನದಲ್ಲಿ ಯಾವನೋ ಒಬ್ಬ ಪುರುಷನು ಅವನ ಹತ್ತಿರ ಬಂದು ಅವನನ್ನುದ್ದೇಶಿಸಿ, "ಏಳು, ಮಲಗಿರುವೇನು ? ನಿನ್ನನ್ನು ನಾನು ಈಗ ಧನಿಕನನ್ನಾಗಿ ಮಾಡತಕ್ಕವನಿದ್ದೇನೆ. ” ಧರ್ಮಪರಾಯಣತೆಯಲ್ಲಿಯೂ, ಮಧುಕರ ವೃತ್ತಿಯಲ್ಲಿಯೂ ಬೆಳೆದ ಆ ಬ್ರಹ್ಮಚಾರಿಗೆ ಧನಿಕನಾಗುವ ಕಲ್ಪನೆಯು ಸ್ವಪ್ನದಲ್ಲಿ ಸಹ ರುಚಿಸಲಿಲ್ಲ. ಅವನು ಒಳ್ಳೆ ಆವೇಶದಿಂದ