ಪುಟ:ಬೆಳಗಿದ ದೀಪಗಳು.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ಸಂಪೂರ್ಣ-ಕಥೆಗಳು

ಅಂದದ್ದು : "ಧನಿಕನಾಗಲು ನಾನು ಇಚ್ಚಿಸುವದಿಲ್ಲ.”

ಪುರುಷನು : ಅದೇಕೆ ?

ಬ್ರಹ್ಮಚಾರಿಯು : ಧನದಲ್ಲಿ ನನಗೆ ಪ್ರೀತಿಯಿಲ್ಲ.

ಪುರುಷನು : ರೂಢಿಯಿಂದ ಎಲ್ಲ ವಸ್ತುಗಳು ಪ್ರಿಯಕರವಾಗುತ್ತವೆ. ಈ ನಿನ್ನ ಮಧುಕರವೃತ್ತಿಯ ಬ್ರಹ್ಮಚರ್ಯಾಶ್ರಮವೂ ನಿನಗೆ ಪ್ರಿಯವಾಗಬೇಕಾದರೆ, ರೂಢಿಯಲ್ಲದೆ ಮತ್ಯಾವ ಕಾರಣವು ರೂಢಿಯ ಹೊರತು ಅನ್ಯವಾವದೂ ಅಲ್ಲ. ಬಿಕ್ಕೆಯನ್ನು ಬೇಡುವ ಹಾಗೂ ಸ್ತ್ರೀ ಸುಖಕ್ಕೆ ಎರವಾಗುವ ಸಂಗತಿಗಳು ಎಲ್ಲರಿಗೂ ದುಃಸಹವಾಗಿದ್ದರೂ ರೂಢಿಯು ನಿನಗೆ ಅವುಗಳಲ್ಲಿ ಇಷ್ಟು ಪ್ರೀತಿಯನ್ನುಂಟುಮಾಡಿದೆಂದ ಮೇಲೆ ವಿಪುಲವಾದ ಸಂಪತ್ತೂ, ಸುಂದರರಾದ ಸ್ತ್ರೀಯರೂ, ನಾನಾ ಪ್ರಕಾರದ ಸುಖೋಪಭೋಗಗಳ ರೂಢಿಯಿಂದ ನಿನಗೆ ಪ್ರಿಯಕರವಾಗಲಿಕ್ಕಿಲ್ಲೆಂಬ ಮಾತು ಎಂದಾದರೂ ಸಂಭವಿಸುವದೇ?

ಬ್ರಹ್ಮ: ರೂಢಿಯು ಮನುಷ್ಯನಿಂದ ಬೇಕಾದ ಕೆಲಸವನ್ನು ಮಾಡಿಸಬಲ್ಲದೆಂಬ ಸಂಗತಿಯನ್ನು ನಾನಾದರೂ ಒಪ್ಪಿಕೊಳ್ಳುತ್ತೇನೆ. ರೂಢಿಯು ವಿಷವನ್ನು ಮಧುರವಾಗಿಯೂ, ಅಮೃತವನ್ನು ಕಹಿಯಾಗಿಯೂ ಮಾಡಬಹುದು. ಆದರೆ, ವಿಚಾರವಂತನಾದವನು ,ಏಷವು ಮಧುರವಾದದ್ದೆಂದು ಮನ್ನಿಸುವ ರೂಢಿಯನ್ನು ಆದರಿಸಬೇಕೋ ಅನಾದರಿಸಬೇಕೋ ಎಂಬದೇ ಮುಖ್ಯವಾದ ಪ್ರಶ್ನವಾಗಿದೆ. ಶಾಂತ ಸಮಾಧಾನಾದಿ ಗುಣಗಳಿಂದ ಪೂರಿತವಾದ ಈ ವೈರಾಗ್ಯಾ ಮೃತವನ್ನು ಬಿಟ್ಟು ವಿಷಮಯವಾದ ಪ್ರಾಪಂಚಿಕ ಸುಖದ ವ್ಯಸನವನ್ನು ಹಚ್ಚಿಕೊಳ್ಳುವದಕ್ಕೆ ನಾನಂತೂ ಇಚ್ಛಿಸುವದಿಲ್ಲ.

ಪು : ನಾನಂತೂ ಇಚ್ಛಿಸುವದಿಲ್ಲ! 'ನಾನು' ಎಂಬುವದರಲ್ಲಿ ಅಭಿಮಾನವಾದರೂ ಎಷ್ಟು! ನಿನ್ನ ಇಚ್ಛೆಯನ್ನು ಕೇಳುವವರಾರು? ನಿನ್ನ ಇಚ್ಛೆಯಿಂದಲೇ ಈ ಜಗತ್ತು ನಡೆದಿರುವದೆಂದು ನೀನು ತಿಳಿದಿರುವಿಯಾ ? ಈ ರೀತಿಯಾಗಿ ಪ್ರತಿಯೊಬ್ಬನ ಇಚ್ಛೆಗನುಸಾರವಾಗಿ ಈ ಜಗತ್ತು ನಡೆಯ ಹತ್ತಿದರೆ, ಅದು ಕ್ಷಣಮಾತ್ರವಾದರೂ ನಡೆಯಲಾರದು.

ಬ್ರಹ್ಮ: ನಡೆಯದಿದ್ದರೆ ಇಲ್ಲ; ಅದರಿಂದ ನನ್ನದೇನು ಅಡ್ಡಗಾಣಿಸುವದು? ಬೇಕಾದರೆ ಈ ಜಗತ್ತು ಇಂದಿಗೇ ಲಯಹೊಂದಲಿ. ಇಂಥ