ಪುಟ:ಬೆಳಗಿದ ದೀಪಗಳು.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವ ಜನ್ಮದ ನಿಧಿಯು ತಾ ಬೆನ್ನು ಬಿಡದು

೧೧೩

ದುಃಖದಾಯಕವಾದ ಜಗತ್ತು ನಡೆಯುವದಕ್ಕಿಂತ ಅದು ನಿಂತುಹೋಗುವದೇ ಒಳಿತಾದದ್ದು. ಆದರೆ ಈ ಜಗತ್ತು ನಿಂತು ಬಿಡುವದು ಇಲ್ಲವೆ ನಡೆಯುವದು ಅದೇನು ನನ್ನ ಕೈಯೊಳಗಿನ ಮಾತಲ್ಲ. ಆದರೆ ನನ್ನ ಇಚ್ಛೆಯು ಮಾತ್ರ ಪೂರ್ಣವಾಗಿ ನನ್ನ ಕೈಯೊಳಗಿನ ಮಾತಾಗಿದೆ.

ಪು : ಇಲ್ಲ! ಅದಾದರೂ ನಿನ್ನ ಕೈಯೊಳಗಿನ ಮಾತಾಗಿಲ್ಲ. ಈಗಿನ ನಿನ್ನ ಇಚ್ಛೆಯು ನಿನ್ನ ಪೂರ್ವಜನ್ಮದ ಅನೇಕ ಇಚ್ಛೆಗಳಿಂದ ನಿಯಂತ್ರಿತವಾಗಿದೆ. ಹಾಗೂ ನಿನ್ನ ಭಾವೀ ಸಂಸತ್ತಿನ ಅವಸ್ಥೆಯಾದರೂ ನೀನು, ಪೂರ್ವ ಜನ್ಮದ ಕರ್ಮಗಳಿಂದ ನಿಶ್ಚಿತವಾಗಿದೆ. ಅದನ್ನು ನೀನು ತಪ್ಪಿಸಲರಿಯೆ. ಒಂದು ಜನ್ಮದಲ್ಲಿ ನೀನು ಅಸಂಖ್ಯಾತವಾದ ದ್ರವ್ಯವನ್ನು ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿರುವಿ, ಆ ಕರ್ಮವು ಈಗ್ಗೆ ಪರಿಪಕ್ವವಾಗಿ ಫಲೋನ್ಮುಖವಾಗಿದೆ. ಅದನ್ನು ಸ್ವೀಕರಿಸದ ಹೊರತು ನಿನಗೆ ಗತ್ಯಂತರವಿಲ್ಲ. ನೀನು ಧನಿಕನಾಗಲೇ ಬೇಕು, ಇಂಥ ಸ್ಥಿತಿಯು ಬಂದೊದಗಿದೆ.

ಬ್ರಹ್ಮ: ಈ ಪ್ರಸಂಗವು ನನ್ನ ಮೇಲೆ ಒದಗದಿದ್ದರೆ, ಬಹಳ ಒಳಿತಾಗುವದು. ಮೇಲಾಗಿ ನಾನು ಧನಿಕನಾಗುವದಕ್ಕೆ, ಒಂದು ಮಹತ್ವದ ಕಾರಣದ ಸಲುವಾಗಿ, ತೀರ ಅಯೋಗ್ಯನಿರುತ್ತೇನೆಂದು ನಿಮಗೆ ಅನಿಸುವದಿಲ್ಲವೋ ?

ಪು: ಅಂಥ ಕಾರಣವಾದರೂ ಯಾವದು ?

ಬ್ರಹ್ಮ: ಆ ಕಾರಣವೆಂದರೆ ನನ್ನಲ್ಲಿ ವಿದ್ವತ್ತೆಯು ನೆಲೆಗೊಂಡಿದೆ. ವೇದಾಧ್ಯಯನವನ್ನು ನಾನು ಪೂರ್ಣವಾಗಿ ಮುಗಿಸಿದ್ದೆ ಆನೆ. ಶಾಸ್ತ್ರದಲ್ಲಂತೂ ನನ್ನ ಗತಿಯು ಅಪ್ರತಿ ಶತವಾಗಿದ್ದು, ನನ್ನ ಕೈಯನ್ನು ಹಿಡಿಯುವವರು ಈ ಇಡೀ ಕ್ಷೇತ್ರದಲ್ಲಿ ಯಾರೂ ಇಲ್ಲ, ಕಾವ್ಯಾದಿಗಳ ಪರಿಶೀಲನದಿಂದಲೂ ವ್ಯವಹಾರದ ಪ್ರತ್ಯಕ್ಷವಾದ ಅನುಭವದಿಂದಲೂ ಅವಶ್ಯವಾದ ಜಾಣತನವು ನನ್ನಲ್ಲಿ ಬಂದಿದೆ. ಅಂದಮೇಲೆ ನಾನು ಧನಿಕನಾಗುವದು ಹೇಗೆ ? ಶ್ರೀಮಂತರಿಗೆ ಮುಖ್ಯವಾಗಿ ಬೇಕಾಗಿರುವ ಗುಣಗಳ ಅಭಾವವೇ ನನ್ನಲ್ಲಿದ್ದ ಬಳಿಕ, ನೀವು ನನ್ನನ್ನು ಜುಲುಮೆಯಿಂದ ಶ್ರೀಮಂತನನ್ನಾಗಿ ಮಾಡಿದರೂ ನನ್ನನ್ನು ಶ್ರೀಮಂತನೆಂದು ಕರೆಯುವವರಾರು ? ಈ ವಿದ್ಯೆಯ ತೊಂದರೆಗಳ ಮೂಲಕವಾಗಿ, ಶ್ರೀಮಂತರಲ್ಲಿರುವ ಗುಣಗಳ ಒಂದಾದರೂ ಲಕ್ಷಣವನ್ನು ತೋರಿ