ಪುಟ:ಬೆಳಗಿದ ದೀಪಗಳು.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೧೫

ಹುಟ್ಟುವದಿಲ್ಲವೆ?ಕರುಣಾಸಮುದ್ರನಾದ ದೇವರೇ, ನೀನಾದರೂ ನನ್ನನ್ನು ದರ್ಯಾರ್ದ್ರ ದೃಷ್ಟಿಯಿಂದ ನೋಡು, ನಾನು ೬೦ಥ ಯಾವ ಅಘೋರವಾದ ಪಾಶಕವನ್ನು ಮಾಡಿರುವೆನೆಂದು ನೀನು ನನಗೆ ಶ್ರೀಮಂತನಾಗುವ ಶಿಕ್ಷೆಯನ್ನು ವಿಧಿಸುವಿ? ನನಗೆ ತಿಳಿಯಹತ್ತಿದಂದಿನಿಂದ ನಾನು ಧರ್ಮಾಚರಣವನ್ನೇ ಮಾಡುತ್ತ ಬಂದೆನೆಂದು ನನಗೆ ಈ ಪ್ರಾಯಶ್ಚಿತ್ತವೆ?

ಹೀಗೆ ಮಾತಾಡುತ್ತ ಮಾತಾಡುತ್ತ ಆ ಬ್ರಹ್ಮಚಾರಿಯು ಸ್ವಪ್ನದಲ್ಲಿ ರೋದನ ಮಾಡಹತ್ತಿದನು. “ನಿಷ್ಕಾರಣವಾಗಿ ನನ್ನ ಮೇಲೆ ಸಂಪತ್ತಿನ ಬೆಟ್ಟವನ್ನು ಉರುಳಿಸುವ ನಿರ್ದಯ ಹಾಗೂ ಕಠೋರನಾದ ಪುರುಷನೆ, ನೀನು ಯಾರು?” ಹೀಗೆ ಅವನು ಅಳುತ್ತ ಅಳುತ್ತ ಅವನನ್ನು ಕೇಳಹತ್ತಿದನು. ಈ ಪ್ರಶ್ನಕ್ಕೆ, “ನಾನು ಕರ್ಮಾಧಿಕಾರಿಯು” ಎಂಬ ಅಸ್ಪಷ್ಟವಾದ ಉತ್ತರವನ್ನು ಕೊಟ್ಟು, ಆ ಪುರುಷಾಕೃತಿಯು ಮೆಲ್ಲಮೆಲ್ಲನೆ ಅಂತರ್ಧಾನವನ್ನು ಹೊಂದಿದ ಕೂಡಲೆ, ಬ್ರಹ್ಮಚಾರಿಯು ಕಳವಳಿಸಿ ಎಚ್ಚರಗೊಂಡನು ಪೂರ್ವ ದಿಕ್ಕಿಗೆ ನಕ್ಷತ್ರ ರಾಜನಾದ ಶುಕ್ರನು ಆಗಲೇ ಉದಯನಾಗಿ ಮೇಲಕ್ಕೆ ಹತ್ತಿದ್ದನು. ಅದನ್ನು ಕಂಡು ಅವನು ಪ್ರಸನ್ನ ಚಿತ್ತವುಳ್ಳವನಾಗಿ, ಸ್ವಪ್ನ ದೊಳಗಿನ ಸಂಗತಿಯನ್ನು ಮರೆತು ನಿತ್ಯದ ಕರ್ಮವನ್ನು ಸಾಧಿಸಲುದ್ಯುಕ್ತನಾದನು.

****

ಪ್ರಖ್ಯಾತಿಯನ್ನು ಹೊಂದಿದ ಒಂದು ಪಟ್ಟಣದಲ್ಲಿ ಒಬ್ಬ ವೃದ್ಧನಿರುತ್ತಿದ್ದನು. ಸಂತತಿಯ ಅಭಾವದ ಹೊರತು ಆವನ ಯಾವ ಸುಖಕ್ಕೂ ಕೊರತೆಯಿದ್ದಿಲ್ಲ. ಪುತ್ರ ಪ್ರಾಪ್ತಿಯ ಸಲುವಾಗಿ ಶಕ್ಯವಾಗಿದ್ದ ಎಲ್ಲ ಪ್ರಯತ್ನಗಳನ್ನು ಅವನು ಮಾಡಿದರೂ ದುರ್ದೈವದಿಂದ ಅವನಿಗೆ ಯಶವು ದೊರೆಯಲಿಲ್ಲ. ಮೂವರು ಪತ್ನಿಯರು ನಿಪುತ್ರಿಕರಾಗಿ ಮರಣಹೊಂದಿದ್ದರಿಂದ, ಐದಾರು ವರ್ಷಗಳ ಪೂರ್ವದಲ್ಲಿ ಅವನು ನಾಲ್ಕನೆಯವಳನ್ನು ಮದುವೆಯಾಗಿದ್ದನು. ಆದರೂ ಪುತ್ರ ಮುಖವನ್ನು ನೋಡುವ ಸುಯೋಗವು ಅವನಿಗೆ ಪ್ರಾಪ್ತವಾಗಲಿಲ್ಲ. ಹೆರವರ ಮಗನನ್ನು ದತ್ತಕ ತೆಗೆದುಕೊಳ್ಳದ ಹೊರತು ಅನ್ಯವಾದ ಮಾರ್ಗವು ಉಳಿಯಲಿಲ್ಲ. ಅವನ ವಂಶಕ್ಕೆ ಹೊಂದಿದವನು ಯಾವನಾದರೂ ಇದ್ದರೆ, ಅವನನ್ನು ಗೊತ್ತು ಹಚ್ಚ ಬೇಕೆಂದು, ಆ ವೃದ್ಧನ ಪುರೋಹಿತನು ಶೋಧ ಮಾಡುತ್ತ ಮಾಡುತ್ತೆ ಈ ಬ್ರಹ್ಮಚಾರಿಯು ವಾಸಮಾಡಿರುವ