ಪುಟ:ಬೆಳಗಿದ ದೀಪಗಳು.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೧೭

ವಾಗಿಯೇ ಹೌದಲ್ಲವೆ ? ಎಂದಮೇಲೆ ಪರೋಪಕಾರಕ್ಕೆ ಸರಿಯಾದ ಮತ್ತ್ಯಾವದಾದರೂ ಪುಣ್ಯವುಂಟೇ ? ನಿಮ್ಮ ಕುಲದಲ್ಲಿ ಜನ್ಮತಾಳಿದ ಒಬ್ಬ ವೃದ್ಧ ಮನುಷ್ಯನು ಮರಣೆಮ್ಮುಖನಾ ಪುತ್ರ ಪುತ್ರ ಎಂದು ಏಕ ಪ್ರಕಾರವಾಗಿ ದುಃಖಬಡುತ್ತಲಿದ್ದಾನೆ. ಔಂಸಪುತ್ರನ ಮುಖಾವಲೋಕನವನ್ನು ಮಾಡುವ ಸುಖವು ಅವನ ದೈವದಲ್ಲಿಲ್ಲ. ದತ್ತ ಕಪುತ್ರನಾದಲಭಿಸಿ ಅವನು ತನ್ನ ಮನೆತನದ ಹೆಸರು ನಡೆಸ ಬೇಕಂತಲಣ ತನ್ನ ಮರಣದ ನಂತರ ಅವನಿಂದ ಮಾಡಲ್ಪಡುವ ಪಿಂಡದಾನದಿಂದ ತಾನೂ ತನ್ನ ಪೂರ್ವಜರೂ ಉದ್ಧಾರರಾಬೇಕೆ೦ತಲೂ ಅವನ ಇಚ್ಛೆಯುಂಟು, ಇಂಥ ಮನುಷ್ಯನ ಮೇಲೆ ಉಪಕಾರವನ್ನು ಮಾಡುವ ಸಾಧನವು ನಿಮ್ಮ ಒಬ್ಬರ ಕೈಯಲ್ಲಿಯೇ ಇರುತ್ತದೆ. ಉಳಿದ ಉಪಕಾರಗಳು ಇಹಲೋಕದ ಮಟ್ಟಿಗೆ ಮಾತ್ರ ಇರುತ್ತವೆ. ಆದರೆ, ಈ ಉಪಕಾರದಿಂದ ನಿಮ್ಮ ಕೀರ್ತಿಯು ಪರಲೋಕಕ್ಕೆ ಮುಟ್ಟುವದು. ಈ ಎಲ್ಲ ಸಂಗತಿಗಳನ್ನು ನೀವು ನಿಮ್ಮ ಲಕ್ಷ್ಯದಲ್ಲಿ ತರಬೇಕು. ತಮಗೆ ಹಾನಿಯಾದರೂ ಚಿಂತೆಯಿಲ್ಲ, ಪರೋಪಕಾರವನ್ನು ಸಾಧಿಸುವ ಸುಸಂಧಿಯು ತಮಗೆ ಪ್ರಾಪ್ತವಾದರೆ ಸಾಕೆಂದು ಜನರು ಅಪೇಕ್ಷಿಸುತ್ತಾರೆ ; ಆದರೆ, ಹಾನಿಯ ಮಾತಂತೂ ಒಟ್ಟಗುಳಿದು, ನಿಮಗೆ ಲಾಭವನ್ನು ಮಾಡಿಕೊಡುವ ಈ ಪರೋಪಕಾರದ ಪ್ರಸಂಗವು ತಾನಾಗಿಯೇ ನಿಮ್ಮೆದುರು ಬಂದು ನಿಂತಿದೆ. ನೀವು ಇದರ ಅನಾದರವನ್ನು ಮಾಡಿದರೆ, ಯಾವ ಧರ್ಮಾಚರಣ ವನ್ನು ಸಾಧಿಸಿದಂತಾಗುವದು ? ಇ೦ಥ ಸುಪ್ರಸಂಗದಲ್ಲಿ ಕೂಡ ಪರೋಪಕಾರವನ್ನು ಮಾಡದವರು ವರ ಕಂ ಭಾಗಿಯಾಗುವನು. ಈ ನಿಮ್ಮ ನಿಷ್ಟುರತೆಯ ಸ್ವಭಾವಕ್ಕಾಗಿ ದೇವರು ನಿಮ್ಮನ್ನು ಕ್ಷಮಿಸುವನೆಂದು ನನಗೇನು ತೋರುವದಿಲ್ಲ. ಪಿತೃಲೋಕದಲ್ಲಿ ವಾಸಿಸುವ ನಿಮ್ಮ ಪೂರ್ವಜರು ನಿಮಗೇನನ್ನುವರು ? ಹಾಗೂ ಮುಂದೆ ಎಂದಾದರೂ ಎಲ್ಲಿಯಾದರೂ ಅವರು ನಿಮ್ಮನ್ನು ಕಂಡರೆ, ನಿಮ್ಮ ಸ್ವಾಗತವನ್ನು ಯಾವ ಬಗೆಯಿಂದ ಮಾಡುವರೆಂಬ ಕಲ್ಪನೆಗಳನ್ನು ನೀವು ನಿಮ್ಮ ತಲೆಯಲ್ಲಿ ತಂದು ವಿಚಾರ ಮಾಡಿರಿ. ಈಗಾದರೂ ಕದಾಚಿತ್-ಇಬೇ ಕಾಲದಲ್ಲಿ-ನಾನು ನಿಮ್ಮ ಸಂಗಡ ವಾತಾಡುತ್ತ ಕುಳಿತಿರುವ ಕಾಲದಲ್ಲಿ- ನಿಮ್ಮ ಪೂರ್ವಜರು ನೀವು ಏನು ಉತ್ತರವನ್ನು ಕೊಡುವಿರೆಂಬದನ್ನು ಕೇಳುವದಕ್ಕೆ ಉತ್ಕಂಠಿತರಾಗಿ,