ಪುಟ:ಬೆಳಗಿದ ದೀಪಗಳು.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೦೯

ನ್ನಿಟ್ಟು, ನಿಷ್ಕ ಪಟವಾದ ಭಾವದಿಂದ ಆಕೆ ಯ ಕೂಡ ನಡೆದುಕೊಳ್ಳುತ್ತಿ ದ್ದನು. ಆದರೆ, ಭೋಲಾನಾಥನ ಪತ್ನಿ ಯು ಬಾಹ್ಯ ಸ್ವರೂಪದಲ್ಲಿ ಸುಂದರ ೪ಾಗಿದ್ದಂತೆ ಆಕೆಯ ಅಂತರಂಗವು ಚನ್ನಾಗಿದ್ದಿದ್ದಿಲ್ಲ. ಅವಳು ಪ್ರತಿಯೊಂದು ಮಾತಿಗೆ ಸಂಶಯವನ್ನು ಸತುವ ಸ್ವಭಾವದವಳಾಗಿದ್ದಳು. ಅತ್ತೆಯು ಸೊಸೆಗಿಂತಲೂ ಎರಡೇ ವರ್ಷಗಳಿಂದ ಹಿರಿಯಳಾಗಿದ್ದಳು. ಇಬ್ಬರೂ ತರುಣಿಯ: ರು ಸಮಾನ ರೂಪವುಳ್ಳವರಾಗಿದ್ದರೂ ಅವರ ಸ್ವಭಾವವು ಭಿನ್ನ ವಾಗಿತ್ತು. ಈ ಸ್ಥಿತಿಯ ಮೂಲಕವಾಗಿ ಮತ್ತು ಪುತ್ರರ ಪರಸ್ಪರರ ವರ್ತನ ಇಲ್ಲಿಯ ಸರಲವಾದ ಹಾಗೂ ಸ್ವಾಭಾವಿಕವಾದ ಎಷ್ಟೋ ಸಂಗತಿಗಳ ಸಂಬಂಧವಾಗಿ ಭೋಲಾನಾಥನ ಪತ್ನಿಯ ಮನಸ್ಸಿನಲ್ಲಿ ಉತ್ಪನ್ನವಾದ ಇಲ್ಲದ ಕುತರ್ಕಗಳು ದೃಢವಾಗುತ್ತ ನಡೆದವು. ಭೋಲಾನಾಥನಿಗಾಗಲಿ, ಅವನ ತಾಯಿಗಾಗಲಿ ಇದರ ಕಲ್ಪನೆಯು ಕೂಡ ಇಲ್ಲದ್ದರಿಂದ, ಮಾತಾಪುತ್ರರಲ್ಲಿದ್ದ ಪ್ರೇಮದ ಮೂಲಕವಾಗಿ ಆ ಉಭಯ ತರು ಪರಸ್ಪರರನ್ನು ಸ್ನೇಹಿತರಂತೆ ಭಾವಿಸುತ್ತಿದ್ದರು. ಆದರೆ ಸಂಶಯದಿಂದ ಗ್ರಸ್ತಳಾದ ಗಿರಿಜಾಬಾಯಿಯ ದೃಷ್ಟಿಗೆ ಈ ಸಂಗತಿಗಳೆಲ್ಲ ಏಪರೀತವಾಗಿ ತೋರಹತ್ತಿದವು. ಗಿರಿಜಾ ಬಾಯಿಯ ಹೃದಯದಲ್ಲಿದ್ದ ಮರವೆಂಬ ರಾವುಗನ್ನಡಿಯಲ್ಲಿ ನಿಷ್ಕಪಟವು ಕಪಟವಾಗಿಯೂ ಮಾತೃಪ್ರೇಮವು ವಿಷಯಾಂಧತೆಯಾಗಿಯ ಸಹಜವಾದ ವೃತ್ತಿಯು ನಿರ್ಲಜ್ಜತೆಯಾಗಿಯ ಕಾಣಹತ್ತಿದವು. ಇರಲಿ,

****

ಭೋಲಾನಾಥನ ದತ್ತಕ ತಂದೆಯ ಹುಚ್ಚು ದಿವಸ ದಿವಸಕ್ಕೆ ಹೆಚ ಗುತ್ತ ನಡೆಯಿತು. ಇವನಂತೆಯೇ ಇವನ ತಂದೆ, ಅಜ್ಜ ಮುತ್ತಂದಿರು ಹುಚ್ಚರಾಗಿದ್ದರು, ಹಾಗೂ ಅದರಿಂದಲೇ ಅವರು ಮರಣವನ್ನು ಹೊಂದಿ ದ್ದರೆಂಬ ತನ್ನ ಮನೆತನದ ಈ ಪೂರ್ವೆತಿಹಾಸವು ಭೋಲಾನಾಥನಿಗೆ ಗೊತ್ತಾಗಿತ್ತು. ಅದರಿಂದ ಅವನ ಮನಸ್ಸಿನ ಮೇಲೆ ಈ ಪೂರ್ವ ಪರಂ ಪರೆಯ ಪರಿಣಾಮವು ಬಹು ವಿಲಕ್ಷಣವಾಗಿ ಆಗಹತ್ತಿತ್ತು. ಈ ಕುಟುಂಬಕ್ಕೆ ಹೊಂದಿದ್ದರಿಂದ ನಾನಾದರೂ ವೃದ್ಧಾಪ್ಯ ಕಾಲದಲ್ಲಿ ಹುಚ್ಚನಾಗುವನೋ ಏನೋ ' ಎಂಬ ಭೀತಿಯಿಂದ ಅವನು ತಾರುಣ್ಯದಲ್ಲಿಯೇ ಹುಚ್ಚು ಹಿಡಿದವ ನಂತೆ ಮಾಡ ಹತ್ತಿದ್ದನು. ಈ ಆನುವಂಶಿಕವಾದ ಹುಚ್ಚಿನ ಬಾಧೆಯು