ಪುಟ:ಬೆಳಗಿದ ದೀಪಗಳು.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೨೧


ಕರೆದುಕೊಂಡು ಹೋಗುತ್ತಲಿದ್ದೇನೆ. ನಿನಗೆ ಹಣವು ಬೇಕಾದರೆ ಅದು. ಹುಣ್ಣಿಮೆ ಅಮಾಸೆಗೆ ಮಾತ್ರ ದೊರೆಯುವದು."

ಹೀಗೆ ಮಾತಾಡುತ್ತ ವೃದ್ಧನು ಮುಂದೆ ಸಾಗಿದನು ಲಕ್ಷ ಕೊಟ್ಟು ಇದನ್ನೆಲ್ಲ ಕೇಳಿದ ಭೋಲಾನಾಥನು ಆಶ್ಚರ್ಯಚಕಿತನಾಗಿ ಒಂದು ಶಬ್ದ ವನ್ನಾದರೂ ಉಚ್ಚರಿಸದೆ ಆವನ ಬೆನ್ನು ಹತ್ತಿ ನಡೆದನು. ಮುದುಕನು .ಆ ಕಟ್ಟಡದ ಹೊರಗಿನ ಬಾಗಿಲವನ್ನು ತೆರೆದನು. ಒಳಗೆ ಹೋದ ಬಳಿಕ ನೆಲ ಮನೆಯು ಹತ್ತಿತು. ನೆಲಮನೆಯ ಕಲ್ಲಿನ ಗೋಡೆಯಲ್ಲಿ ಒಂದು ಗುಪ್ತ ದ್ವಾರವಿತ್ತು. ಮೊದಲೇ ಅಲ್ಲಿ ಸಿದ್ಧ ಮಾಡಿಡಲ್ಪಟ್ಟ ಯಾವದೋ ಒಂದು ಕೃತ್ರಿಮ ಸಾಧನದಿಂದ ೪ ದ್ವಾರವನ್ನು ಒಂದು ಮಗ್ಗಲಿಗೆ ಸರಿಸಿ ಉಭಯ ತರೂ ಒಳ ಹೊಕ್ಕರು ಅಲ್ಲಿದ್ದ ಕೆಲವು ಪಾವಟಣಿಗೆಗಳನ್ನು ಇಳಿದು ಹೋದ ಬಳಿಕ ಆ ಮುದಕನು ಮಿಣಿಮಿಣಿ ಉರಿಯುವ ಒಂದು ದೀಪವನ್ನು ಹಚ್ಚಿ ದನು, ಆ ದೀಪದ ಬೆಳಕಿನಲ್ಲಿ ಇಲ್ಲಿ ಕಾಣುತ್ತಿದ್ದ ಒಂದು ಕೋಣೆಯ ಬಾಗಿಲವನ್ನು ಆ ಮುದುಕನು ತೆರೆದನು. ಈ ಬಾಗಿಲವನ್ನು ತೆರೆಯುವಾಗ ಮುದುಕನ ಕೈ ಕಾಲುಗಳು ತೀರ ನಡುಗಹತ್ತಿದವು. ಅವನ ಕೈಯಲ್ಲಿದ್ದ ಕರ ದೀಪವು ನೆಲಕ್ಕೆ ಬೀಳುತ್ತಿತ್ತು; ಆದರೆ ಭೋಲಾನಾಥನು ಅದನ್ನು ಅವಸರ ಮಾಡಿ ತನ್ನ ಕೈಯಲ್ಲಿ ಹಿಡಿದನು, ಮುದುಕನು ತೀರ ಗಾಬರಿrಟ್ಟು ಹೋಗಿ, ದ್ದ ರೂ ಅಂಜಬೇಡ, ಗಾಬರಿಗೊಳ್ಳಬೇಡ ! 'ನಿನ್ನ ಮೈಯಲ್ಲಿ ಬೆವರು ಯಾಕೆ ಬಿಟ್ಟಿದೆ ? ಇಕೊ ಇಲ್ಲಿ ನೋಡು, ನಮ್ಮ ಸಂಪತ್ತೆಲ್ಲ ಈ ಸ್ಥಳದಲ್ಲಿ ಸಂಚಿತವಾಗಿದೆ," ಎಂದು ತನ್ನ ಮಗನಿಗೆ ಹೇಳುತ್ತಿದ್ದನು. ಈ ಶಬ್ದಗ ಳನ್ನು ಕೇಳುತ್ತಿರುವಾಗ ಭೋಲಾನಾಥನ ಲಕ್ಷ್ಯವು ಆಂಧವಾದ ದೀಪದ ಪ್ರಕಾಶದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಆ ಕೋಣೆಯೊಳಗಿನ ಭಯಂಕರ ವಾದ ನೋಟದ ಕಡೆಗೆ ಹೋಯಿತು, ಆ ಕೋಣೆಯಲ್ಲಿ ಬಂಗಾರದ ಮೋಹರಗಳಿಂದ ತುಂಬಿದ ದೊಡ್ಡ ದೊಡ್ಡ ಹರಿವೆಗಳು ಅನೇಕವಿದ್ದವು. ಆದರೆ, ಆ ಹರಿವೆಗಳ ಕಡೆಗೆ ತನ್ನ ದೃಷ್ಟಿಯನ್ನು ಚಲ್ಲಲು ಭೋಲಾನಾಥನು ಅಲ್ಲಿ ಏನು ನೋಡಿದನು ? ಪ್ರತಿಯೊಂದು ಹರಿವೆಯ ಮೇಲೆ, ಭಯಾನಕ ವಾದ ಹಾಗೂ ಆಕಾಳ ವಿಕ್ರಾಳ ಸ್ವರೂಪವನ್ನು ಧಾರಣಮಾಡಿದ

ಒಂದೊಂದು ಪಿಶಾಚಿಯನ್ನು ಅವನು ನೋಡಿದನು, ಈ ಪಿಶಾಚಿಗಳ

೧೬