ಪುಟ:ಬೆಳಗಿದ ದೀಪಗಳು.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೨

ಸಂಪೂರ್ಣಿ-ಕಥೆಗಳು

ಸ್ವರೂಪಗಳಾದರೂ ನಾನಾವಿಧವಾಗಿದ್ದವು. ಎಲುಬಿನ ಹಂದರದಂತೆ ತೋರುವ ವೃದ್ಧ ಪುರುಷರ ರೂಪಗಳನ್ನು ಧಾರಣಮಾಡಿದ ಪಿಶಾಚಿಗಳು ಕೆಲವು ಹರಿವೆಗಳ ಮೇಲೆ ಅಂಟಿಕೊಂಡು ಕುಳಿತಿದ್ದವು, ಅನಾಥರಾದ ವಿಧ ವೆಯರ ರೂಪಗಳನ್ನು ಧಾರಣ ಮಾಡಿದ ಪಿಶಾಚಿಗಳು ದೀನರಂತೆ ರೋದನ ಮಾಡುತ್ತ ತಮ್ಮ ಎದೆಗಳನ್ನು ಬಡೆದುಕೊಳ್ಳುತ್ತ ಕೆಲವು ಹರಿವೆಗಳ ಮೇಲೆ ಕುಳಿತಿದ್ದವು. ನಿಷಪ್ರಯೋಗದಿಂದ ಕಾಡಿಗೆಯಂತೆ ಕಪ್ಪಾದ ಹಾಗೂ ಚೂರಿಯ ಗಾಯದ ರಕ್ತ ದಿಂದ ಮಲಿನವಾದ ಅರ್ಭಕರ ರೂಪಗಳನ್ನು ಧಾರಣಮಾಡಿದ ಪಿಶಾಚಿಗಳು ದೊಡ್ಡ ಧ್ವನಿಯಿಂದ ಚೀರುತ್ತ ಕೆಲವು ಹರಿವೆಗಳ ಮೇಲೆ ಕುಳಿತಿದ್ದ ವು. ಆ ಭವ್ಯವಾದ ಕೋಣೆಯು ಭೂತಪ್ರೇತ ಪಿಶಾಚ್ಛಾದಿ ಗಳಿಂದ ದಟಿತವಾಗಿತ್ತು. ಮೈಮೇಲೆ ಗೇಣು ಗೇಣು ಉದ್ದ ಕೂದಲು ಬೆಳೆದ, ಕಣ್ಣುಗಳೊಳಗಿಂದ ಕಿಡಿಗಳನ್ನು ಉದುರಿಸುವ ಹಾಗೂ ಆನೆಯ ಸೊಂಡಿಲದಂತೆ ಪುಷ್ಟವಾದ ಮಹಾಭುಜಂಗಗಳು ತಮ್ಮ ಹೆಡೆಗಳನ್ನು ತೆಗೆದು ಪೂತ್ಕಾರಗಳನ್ನಿಕ್ಕುತ್ತ ಕೆಲವು ಹರಿವೆಗಳ ಮೇಲೆ ಸುರಳೆಯನ್ನು ಸುತ್ತಿಕೊಂಡು ಕುಳಿತಿದ್ದವು. ಕೆಲವು ಹರಿವೆಗಳಿಂದ ಅಗ್ನಿ ಯ ಜ್ವಾಲೆಗಳು ಹೊರಬೀಳುತ್ತಿದ್ದವು. ಕೆಲವು ಹರಿವೆಗಳೊಳಗಿನ ಮೋಹರಗಳು ಒಂದು ಕ್ಷಣಹೊತ್ತು ಭಂಗಾರದವಾಗಿ ತೋರಿದರೆ, ಮತ್ತೊಂದು ಕ್ಷಣದಲ್ಲಿ ಇದ್ದಲೆ ಯಂತೆ ತೋರುತ್ತಿದ್ದವು ಆ ಕಲ್ಲಿನ ಕೋಣೆಯ ಬಾಗಿಲನು ತೆರದ ಕೂಡಲೆ, `ಅಲ್ಲಿದ್ದ ಪಿಶಾಚಿಗಳೆಲ್ಲ ಈ ದುಷ್ಟರು ನಮ್ಮ ದ್ರವ್ಯವನ್ನು ಹರಣ ಮಾಡುವ ದಕ್ಕಾಗಿ ಬಂದರೆಂದು ಕೆಲವು ಚೀರಾಡಹತ್ತಿದವು; ಕೆಲವು ಭಯಂಕರವಾದ ಧ್ವನಿಯನ್ನು ತೆಗೆದು ಆಕ್ರೋಶಮಾಡಹತ್ತಿದವು; ಹಾಗೂ ಕೆಲವು ಹೊರಗಿ ನವರು ಒಳಗೆ ಬರಬಾರದೆಂದು ಮೈಮೇಲೆ ಎಚ್ಚರವಿಲ್ಲದಂತೆ ಓಡಿಬಂದು ಬಾಗಿಲವನ್ನು ಅಡ್ಡಗಟ್ಟಿದವು. ಮುದುಕನ ನಾಲಿಗೆಯು ಗಾಬರಿಯಿಂದ ತೊದಲಹತ್ತಿತು. ಅವನು ಅಸ್ಪಷ್ಟವಾದ ಶಬ್ದಗಳಿಂದ ತನ್ನ ಮಗನಿಗೆ ಅಂದದ್ದು : "ಹೂಂ ಮುಂದೆ ಆಗು ; ಯಾವದಾದ ಕೊಂದು ಕೊಪ್ಪರಿಗೆಯಲ್ಲಿ ಕೈ ಹಾಕಿ ನಿನ್ನ ಬೊಗಸೆ ತುಂಬ ಮೋಹರಗಳನ್ನು ತ್ವರಿತವಾಗಿ ತೆಗೆದುಕೊಂಡು ಈ ಪಿಶಾಚಿಗಳು ನಿನ್ನ ಮೈಮೇಲೆ ಬಂದರೆ, ನೀನು ಅವುಗಳಿಗೆ ಹೆದರಬೇಡ ; ಅವುಗಳ ಕಡೆ ಹೊಡೆದಾಡಿ