ಪುಟ:ಬೆಳಗಿದ ದೀಪಗಳು.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೨೩

ಬಡೆದಾಡಿ ಅವುಗಳನ್ನು ಒಂದು ಮಗ್ಗಲಿಗೆ ನೂಕಿ, ಕೊಪ್ಪರಿಗೆಯಲ್ಲಿಯ ದ್ರವ್ಯವನ್ನು ತೆಗೆದುಕೊಂಡು ಬಾ. ತಂದೆಯು ಹೀಗೆ ಹೇಳಿದರೂ ಮಗ ನಿಗೆ ಧೈರ್ಯವು ಸಾಲಲೊಲ್ಲದು. ಕಲ್ಲಿನಂತೆ ಸ್ತಬ್ಧವಾಗಿಯೂ ಪ್ರೇತದಂತೆ ತಣ್ಣಗಾಗಿಯೂ ನಿಂತಿದ್ದ ಮಗನನ್ನು. ನೋಡಿ ಕೊನೆಗೆ ಮುದುಕನೇ ಮುಂದಾಗಿ ಒಂದು ಕೊಪ್ಪರಿಗೆಯಲ್ಲಿ ಕೈ ಹಾಕಿದನು. ಕೂಡಲೆ, ಅಲ್ಲಿದ್ದ ಪಿಶಾಚಿಗಳೆಲ್ಲ ಮುದುಕನನ್ನು ಸುತ್ತು ಗಟ್ಟ ಆವನ ಕೈ ಕಾಲು ಚಂಡಿಕೆ ಗಳನ್ನು ಹಿಡಿದು ಅವನನ್ನು ದರದರ ಎಳೆಯಹತ್ತಿದವು. ಇದನ್ನು ನೋಡಿದ ಕೂಡಲೆ ಭೋಲಾನಾಥನು ತೀರ ಮೃತಪ್ರಾಯನಾದನು, ಆದರೆ, ಅವನು ಕೂಡಲೆ, ಎಚ್ಚರವನ್ನು ಹೊಂದಿ ತನ್ನ ತಂದೆಯನ್ನು ತನ್ನ ಕೈವಶ ಮಾಡಿ ಕೊಳ್ಳಲು ಪ್ರಯತ್ನಿಸಹತ್ತಿದನು. ಮುದುಕನ ಒಂದು ಕೈಯನ್ನು ಹಿಡಿದು ಪಿಶಾಚಿಗಳು ಅವನನ್ನು ಒಳಗೆ ಜಗ್ಗುತ್ತಿದ್ದವು ; ಮಗನು ಅವನ ಮತ್ತೊಂದು ಕೈಯನ್ನು ಹಿಡಿದು ಹೊರಗೆ ಜಗ್ಗುತ್ತಿದ್ದನು. ಈ ಜಗಳಾಟ ದಲ್ಲಿ ಮಗನು ಹಾಗೂ ಹೀಗೂ ಮಾಡಿ ತಂದೆಯನ್ನು ಕೋಣೆಯ ಹೊರಗೆ ಜಗ್ಗಿ ತಂದು, ಕೋಣೆಯ ಬಾಗಿಲವನ್ನು ಗಟ್ಟಿಯಾಗಿ ಮುಚ್ಚಿಕೊಂಡನು. ಕೆಲವು ಹೊತ್ತಿನ ಮೇಲೆ ತಂದೆಯು ಎಚ್ಚರಗೊಂಡು, ತಾನು ಎಷ್ಟು ಮೊಹರಗಳನ್ನು ತಂದಿರುವೆನೆಂಬದನ್ನು ಎಣಿಸಿ, ಅವುಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು, ಮಗನ ಹೆಗಲಮೇಲೆ ಕುತ್ತಿಗೆಯನ್ನು ಚೆಲ್ಲಿ ಬಂದ ಹಾದಿ ಯನ್ನು ಹಿಡಿದು ಹಿಂದಿರುಗಿದನು. ಮಗನು ತಂದೆಯನ್ನು ವಿಸ್ತರಿಸುತ್ತ ನಿಸ್ಕರಿಸುತ್ತ ಆ ಕಟ್ಟಡವನ್ನು ಬಿಟ್ಟು ಹೊರಬೀಳಲು, ತಾನು ಪೂರ್ವದಲ್ಲಿ ತನ್ನ ಸ್ವಪ್ನದಲ್ಲಿ ಕಂಡ ಪುರುಷಾಕೃತಿಯು ತನ್ನ ಎದುರಿನಲ್ಲಿ ನಿಂತು ತನ್ನನ್ನು ದಿಟ್ಟಿಸಿ ನೋಡುವದನ್ನು ಅವನು ಕಂಡನು.

ತಾಯಿಯು: ಈಗ ಇವರು ಬೇನೆ ಬಿದ್ದಂತೆ ಪ್ರತಿ ಅಮಾಸೆ ಹುಣ್ಣಿವಿಗೆ ಬೇನೆ ಬೀಳುತ್ತಿದ್ದರು, ಪ್ರತಿ ಅಮಾಸೆ ಹುಣ್ಣಿಮೆಯ ದಿವಸ ಮಧ್ಯ ರಾತ್ರಿಯಲ್ಲಿ ಎದ್ದು ಹೊರಗೆ ಹೋಗಿ ಮೋಹರಗಳನ್ನು ತೆಗೆದು ಕಂಡು ಬರುತ್ತಿದ್ದರು. ಆದರೆ, ಇವರು ಎಲ್ಲಿ ಹೋಗುತ್ತಾರೆಂಬ ಮೋಹರಗಳನ್ನು ಎಲ್ಲಿಂದ ತರುತ್ತಾರೆಂಬ ನನಗೆ ಗೊತ್ತಾಗುತ್ತಿದ್ದಿಲ್ಲ.