ಪುಟ:ಬೆಳಗಿದ ದೀಪಗಳು.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪

ಸಂಪೂರ್ಣ ಕಥೆಗಳು


ವಹರಗಳನ್ನು ತೆಗೆದುಕೊಂಡು ಬಂದರೆಂದರೆ, ಇವರ ಕೈ ಕಾಲುಗಳು ನಡುಗುತ್ತಿದ್ದವು, ಮೈಯೆಲ್ಲ ಬೆವರಿನಿಂದ ತಪತಪ ತೊಯ್ಯುತ್ತಿತ್ತು, ಹಾಗೂ ಆ ಬಳಿಕ ಮೈಯಲ್ಲಿ ಚಳಿ ತುಂಬಿ ಹಾಸಿಗೆಯನ್ನು ಹಿಡಿದು ಮಲಗು ಜ್ವರದ ಸಂತಾಪದಿಂದ ಬಡಬಡಿಸಹತ್ತಿದರೆಂದರೆ, ದೆಲ್ಲಿ ಭೂತ ಪಿಶಾಚಾದಿಗಳ ಸುದ್ದಿ ಈಗಿನ ವರೆಗೆ ನನಗೆ ಇದರ ಗೂಢ ರೇ ತಿಳಿದಿಲ್ಲ. ಆದರೆ ಭೋಲಾನಾಥನೆ, ನೀನು ಈಗ ಹೇಳುತ್ತಿರುವ ಭಯಂ ಕರವಾದ ಸುದ್ದಿಯಿಂದ ಎಲ್ಲ ಸಂಗತಿಗಳು ಚನ್ನಾಗಿ ನನ್ನ ಅಕ್ಷದಲ್ಲಿ ಬಂದಿವೆ. ಭೋಲಾನಾಥ : ತಾಯಿಯ ಭಯಂಕರವಾದ ಸುದ್ದಿ ಯೆ೦ದು ಏನು ಹೇಳಲಿ! ಪಿಕಾಚಿರೂಪಗಳನ್ನು ಧರಿಸಿದ ಮನುಷ್ಯರು ಸತ್ತು ಹೋಗಿ ರೂ ಆವಗ ವಾಸನೆಗಳು ಜೀವಂತವಾಗಿವೆ. ಸುಟ್ಟು ಬೂದಿಯಾದ ಶರೀರಿಗಳು ಭಯಾನಕವಾದ ಬೀಭತ್ಸ ರೂಪಾಂತರಗಳನ್ನು ಹೊಂದಿವೆ. ಇಂಥ ನಟ ವನ್ನು ಯಾರೂ ನೋಡಿರಲಿಕ್ಕಿಲ್ಲೆಂದು ನನಗಂತೂ ತೋರುತ್ತದೆ. ಆದರ ಸ್ಮರಣವಾಗುವದೂ ಕೂಡ ನನಗೆ ಬೇಡ, ಇಡೀ ಜಗತ್ತಿನಲ್ಲಿ ಸಂಚಿತ ವಾಗಿರುವ ಪ್ರವ್ಯವನ್ನು ಕೊಡುವೆನೆಂದು ಯಾವನಾದರೂ ನನಗೆ ಹೇಳಿ ದರೂ ಕೂಡ ನಾನು ಅಲ್ಲಿಗೆ ಹೋಗಲಿಕ್ಕಿಲ್ಲ. ಇಕೋ, ಎದುರಿನಲ್ಲಿ ಕಾಣು ತಿರುವ ಕಟ್ಟಡದಲ್ಲಿ ಪಿಶಾಚಿಗಳ ರೂಪಗಳನ್ನು ಧಾರಣ ಮಾಡಿಕೊಂಡು ಕೋಶಗಳನ್ನು ಪಡುತ್ತಿರುವವರ ದ್ರವ್ಯವನ್ನು, ನಮ್ಮ ಪೂರ್ವಜರಲ್ಲೊಬ್ಬನು ಅವರನ್ನು ಅನ್ಯಾಯದಿಂದ ಘಾತಿಸಿ, ಅವರಿ೦ವ ಸುಲಿದುಕೊಂಡಿರಲೇಬೇಕು. ದ್ರವ್ಯದ ಹಂಬಲವಾದರೂ ಎಷ್ಟು ? ಒಂದು ಕುಟುಂಬದವರ ಸಲುವಾಗಿ ಯಃಕಶ್ಚಿತನಾದ ಒಬ್ಬ ಮಾನವೀ ಪ್ರಾಣಿಯ ಕ್ಷಣಿಕ ಸುಖದ ಸಲುವಾಗಿ- ನೂರಾರು ಕುಟುಂಬದವರನ್ನು ದಾರಿದ್ರದ ಸಂಕದಲ್ಲಿ ಕೊಳೆಹಾಕಿ, ಬಂಗಾ ರದ ಮೊಹರಗಳಿಂದ ತುಂಬಿದ ಇಷ್ಟು ಕೊಪ್ಪರಿಗೆಗಳನ್ನು ಒಂದು ಸ್ಥಳದಲ್ಲಿ ಕೂಡಿ ಹಾಕುವದರಿಂದ ಲಾಭವಾದರೂ ಯಾವದು ? ತನ್ನ ಗೇಣು ಹೊಟ್ಟೆ ಗಾಗಿ, ಉಳಿದ ಸಾವಿರಾರು ಜನರನ್ನು ಉಪವಾಸದ ಪಥಕ್ಕೆ ಹಚ್ಚಿ ಅವರ ಪ್ರಾಣಗಳನ್ನು ಹಿಂಡಿ ಹಿಪ್ಪೆ ಮಾಡಿದವನ ವಂಶದಲ್ಲಿ ಮುಂದ ಔರಸ ಸಂತ ಶಿಯಂ ಹುಟ್ಟದಿದ್ದರೆ, ಅದರಲ್ಲಿ ಯಾವ ಆಶ್ಚರ್ಯವು ? ಅನೇಕರ ಗೋಣು ಗಳನ್ನು ಮುರಿದು ಅವರ ದ್ರವ್ಯವನ್ನೆಲ್ಲ ನಾನೊಬ್ಬನೇ ನನ್ನ ಕೊಪ್ಪರಿಗೆಯ