ಪುಟ:ಬೆಳಗಿದ ದೀಪಗಳು.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

೧೨೭

ಕಾರದ ಸಲುವಾಗಿ ನಾನು ಯಾವದೇ ಸಂಕಟವನ್ನು ಸಹಿಸಲು ಸಿದ್ಧನಿದ್ದೇನೆ.

ತಾಯಿಯು : ನೀನು ಒಳ್ಳೆ ಮಾತುಗಳನ್ನಾಡಿದೆ. ನನಗೆ ಮಗನು ಹುಟ್ಟಿದರೆ, ಅವನಿಗೆ ಈ ಭಯಂಕರವಾದ ಯಾತನೆಗಳನ್ನು ಅನುಭೋಗಿಸುವ ಪ್ರಸಂಗವು ಎಂದೂ ಬರಬಾರದೆಂಬದರ ಸಲುವಾಗಿ, ಈ ಆನುವಂಶಿಕ ದುಃಖದ ಭಾರವನ್ನು ನೀನು ನಿನ್ನ ತಲೆಯ ಮೇಲೆ ಹೊತ್ತು, ಅವನು ಈ ಕುಲಕ್ಕೆ ಹೊಂದಿದವನೆಂದು ಯಾವ ಪಿಶಾಚವೂ ಅರಿಯದಂತೆ ಅವನನ್ನು ಎಲ್ಲಾದರೂ ಒಂದು ಏಕಾ೦ತಸ್ಥಲದಲ್ಲಿ ಸುರಕ್ಷಿತವಾಗಿ ಇಡು. ನೀನು ಗೋಣು ಹಾಕುವದರಿಂದ ನನ್ನ ಸಮಾಧಾನವಾಗದು. ನನ್ನ ಶಬ್ದವನ್ನು ನಡೆಸುವೆನೆಂದು ನನಗೆ ವಚನವನ್ನು ಕೊಡು.

ಭೋಲಾನಾಥ : ತಾಯಿಯೆ, ಧನಲೋಭದಿಂದ ಪ್ರೇರಿತನಾಗಿ ತಮ್ಮನನ್ನು ಮುಳುಗಿಸುವ ಉದ್ದೇಶದಿಂದ ಅವನನ್ನು ಏಕಾಂತವಾದದೊಂದು ಪ್ರದೇಶದಲ್ಲಿಟ್ಟು ತಾನು ತನ್ನ ಮಾರ್ಗವನ್ನು ನಿಷ್ಕಂಟಕವುಳ್ಳದ್ದಾಗಿ ಮಾಡಿದನೆಂದು ಜನರು ನನ್ನನ್ನು ದೂಷಿಸುವರು; ಆದರೂ ನಿನ್ನ ಸಲುವಾಗಿ ಹಾಗೂ ಪರೋಪಕಾರದ ಸಲುವಾಗಿ ನಿನ್ನ ಮುಂದೆ ಮೊಣಕಾಲುಗಳನ್ನೂ, ನಿನ್ನ ಪಾದಸಾಕ್ಷಿಯಾಗಿ ಹೇಳುವದೇನಂದರೆ, ನಿನ್ನ ಇಚ್ಛಾನುಸಾರವಾಗಿ ನಾನು ಸುವ್ಯವಸ್ಥೆಯನ್ನು ಮಾಡುವೆನು. ಹುಣ್ಣಿಮೆ ಅಮಾಸೆಗಳ ಮಧ್ಯರಾತ್ರಿಗಳಲ್ಲಿ ಭೂತಗಳ ಕತಡ ಯುದ್ಧವನ್ನು ಮಾಡುವ ಹಾಗೂ ಹುಚ್ಚು ಹಿಡಿದು ಬಡಬಡಿಸುವ ಯಾತನೆಗಳಿಂದ ನಿನ್ನ ಮಗನನ್ನು ಮುಕ್ತ ಮಾಡುವೆನು.

ಶಾಯಿಯು : ದೇವರು ನಿನಗೆ ಕಲ್ಯಾಣವನ್ನೀಯಲಿ!

ನನ್ನ ಗಂಡನೂ, ಅತ್ತೆಯ ಏಕಾಂತಸ್ಥಳದಲ್ಲಿ ಕುಳಿತುಕೊಂಡು ನಡೆಸಿರುವ ಆಲೋಚನೆಯಾದರೂ ಯಾವದು ? ಇವರಿಗೆ ಮನಲಜ್ಜೆಯಿಲ್ಲದಿದ್ದರೂ ಜನಲಜ್ಜೆಯಾದರೂ ಇರಬಾರದೆ ? ಹೀಗೆ ತನ್ನಷ್ಟಕ್ಕೆ ತಾನೇ ಮಾತಾಡುತ್ತ ಮತ್ಸರದಿಂದ ಕಲುಷಿತಳಾದ ಗಿರಿಜಾಬಾಯಿಯು, ತಾಯಿಯ ಮಗನೂ ಏಕಾಂತದಲ್ಲಿ ಮಾತಾಡುತ್ತ ಕುಳಿತಿರುವ ಕೋಣೆಯ ಬಾಗಿಲ ಸಂದಿಯಲ್ಲಿ ನಿಂತು ನೋಡಹತ್ತಿದ್ದಳು. ಭೋಲಾನಾಥನು ತನ್ನ ತಾಯಿಯ ಮುಂದೆ ಮೊಣಕಾಲುಗಳನ್ನೂ ರಿಕೊಂಡು ಅವಳ ಪ್ರಾರ್ಥನೆಯನ್ನು ಮಾಡುವ ಸ್ಥಿತಿಯಲ್ಲಿ ಗಿರಿಜಾಬಾಯಿಯ ದೃಷ್ಟಿಗೆ ಬಿದ್ದನು. ಆಗಂತೂ ಅವಳ