ಪುಟ:ಬೆಳಗಿದ ದೀಪಗಳು.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಗುಂದದ ಸಾವಿತ್ರಿಬಾಯಿ

ಬೆಂಕಿಹಚ್ಚಿದರು. ಸುಲಿಗೆಯೇ ಅದು, ಯಾರಿಗೆ ದೋಷವನ್ನಿಡುವಿರಿ ? ತನ್ನ ಅಚಾತುರ್ಯದ ಮಣಲಕವ:ಗಿ ಗ್ರಜರಿಗೆ ಇಂಥ ವ್ಯಸನವನ್ನು ತಂದಿಟ್ಟ ಬಾಬಾಸಾಹೇಬನೇ ದೊ ಮು; {{3} =YTಾ…? ತits, ಸುಲಿಗೆಯ ಗೊಂದಲವು ಸಿ * ಬಂದಿ ವಗೆ ಬಾಭ" ಸಾಹೇಬನ ಮನೆಯ ಹೆಂಗಸರನ್ನು ಬ೦ದಿಗಳನ್ನಗಿ ಮಾಡಿ ತರಬೇಕೆಂದು ಸೇನಾಧಿ ಕಾರಿಯ ಅಪ್ಪಣೆಯಾಯಿತು. ಕೇಳುವಟೇನು ? ಹಬಲಿಯು ಅರಮನೆಯ ಕಡೆಗೆ ಮತ್ತೆ ನಡೆದಿತ್ತು. ಬಾಬಾಸಾಹೇಬನ ಪತ್ನಿಯಾದ ಸಾವಿತ್ರಿಬಾಯಿ ಯನ್ನೂ ಆವನ ಮಲತಾಯಿ: ಮಾದ ಯಮುನಾಬಾಯಿಯನ್ನ ಹಿಡಿ ತಂದು ಕೊಟ್ಟವರಿಗೆ ಇನಾಮು ಸಿಕ್ಕುವದಿತ್ತಾದ ಕಾರಣ ಸೈನಿಕರು ಅರಮನೆಯನ್ನು ಬಹುಪರಿಯಾಗಿ ಶೋಧಿಸಿ ನೋಡಿದರು. ಆ ಹೆಣ್ಣುಮಕ್ಕಳು ಸಿಕ್ಕಲೇ ಇಲ್ಲ, ರಾಜನ ಕಾರಭಾರಿ ಪುರೋಹಿತ ಆಿತ ಮುಂತಾದವರ ಮನೆಗಳನ್ನು ಅವರು ಅಗಿದು ನೋಡಿದರು. ಆ ಸ್ತ್ರೀಯರೆಲ್ಲಿಯೂ ಸಿಕ್ಕಲಿಲ್ಲ. ಆ ರಾಜಸ್ತ್ರೀಯರನ್ನು ಹಿಡಿಯು ಮಾನ ತೆಗೆದುಕೊಳ್ಳಬೇಕೆಂಬ ಆಗ್ರಹವು ಇಂಗ್ಲಿಶ್ ಅಧಿಕಾರಿಗಿಲ್ಲದಿದ್ದರೂ ಸ್ವಾಮಿಟ್ರೋಹಿಗಳೂ ಉಂಡಮನೆಯ ಗಳಗಳನ್ನೆಣಿಸುವವರೂ ಆದ ನರಾಧಮರಾದ ಬಾಹ್ಮಣರಿಗೆ ಅ೦ಥ ಆಗ್ರಹವು ಅಧಿಕವಾಗಿತ್ತು. ಆದರೂ ಆ ಪಾಪಿಗಳ ಕೈಗೆ ಆ ಪುಣ್ಯಾತ್ಮಿಯರು ಸಿಕ್ಕಲೇ ವ್ಯ: ಮಂಗಳವಾರ ಮಧ್ಯರಾತ್ರಿಯ ಸುಮಾರಕ್ಕೆ ಯಾರೆಣ? ಇಬ್ಬರು ಕಂಬಳಿಯ ಮುಸುಗಿಟ್ಟು ಕೊಂಡು ನರಗುಂದದಿಂದ ದಕ್ಷಿಣಾಭಿಮುಖಿಗಳಾಗಿ ನಡೆದಿದ್ದರು. ಬೆಳದಿಂಗಳು ಮುಳುಗಿ ಹೋಗಿದೆ; ಜನರು ಹೋಗಿ ಬರುವ ದಾರಿಯಲ್ಲಿಯೂ ಕಾಣಲಿಲ್ಲದು. ಆ ಪ್ರಯಾಣಸ್ಥರು ಬಹು ಕಷ್ಟದೊಂದಿಗೆ ನಡೆದಿದ್ದರು. ಯಾರವರು ? ಎಲ್ಲಿಗೆ ನಡೆದಿರುವರು ? ಅವರ ಆಕೃತಿಗಳನ್ನು ನೋಡಿದರೆ ಅವರು ಹೆಣ್ಣು ಮಕ್ಕಳಾಗಿ ತೋರಿದರು. ಶ್ರೀ ಕೆ. ಅಲ್ಲಿ ನೋಡಿರಿ; ಓರ್ವಳು ದೊಡ್ಡದೊಂದು ಮುಳ್ಳು ಹೆಟ್ಟವನ್ನೆಡವಿ ಧಡಕ್ಕದೆ ಬಿದ್ದಳು. ಮತ್ತೋರ್ವಳು ಅವಳನ್ನು ಎತ್ತಿಕೊಳ್ಳಲು ಯತ್ನ ಮಾಡುತ್ತಿರುವಳು, ಬಿದ್ದವಳು ಸುವಾಸಿನಿಯಾದ ಸ್ತ್ರೀಯು ಅವಳುಟ್ಟಿರುವ ಜರದ ದುಕೂಲದ