ಪುಟ:ಬೆಳಗಿದ ದೀಪಗಳು.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರಗುಂದದ ಸಾವಿತ್ರಿಬಾರ್ ಆಚರ ಐಹಿಕವಾದ ಸಕಲ ಬಂಧನಗಳನ್ನು ದೃಢನಿಶ್ಚಯವೆಂಬ ಶಕ್ಷ್ಯದಿಂದ ಹರಿದು ಚಲ್ಲಿ ವಿಕಾರರಹಿತಳಾಗಿದ್ದ ಸಾವಿತ್ರಿಬಾಯಿಯು ತನ್ನ ಮೇಲೆ ಕಡು ಕೊಂಡು ಬಿದ್ದಿದ್ದ ದುಃಖದ ಪರ್ವತವನ್ನು ತೃಣಪ್ರಾಯ ವಾಗಿ ಲೆಕ್ಕಿಸಿ ಧೈರ್ಯ ನನ್ನ ವಲ೦ಬಿಸಿ ಮಾರ್ಗಕ್ರಮಣವನ್ನು ಮಾಡಲಾರಂಭಿಸಿದಳು. ಮನಸ್ಸು ಎಷ್ಟು ಗಟ್ಟಿಯಾಗಿದ್ದರೇನು, ನಡೆಯಲು ಕಾಲುಗಳಲ್ಲಿ ಪ್ರಾಣ ಬೇಡವೆ ? ಆ ಸಾದ್ವಿಯ ಕೋಮಲವಾದ ಚರಣಕ ಹುಲಗಳು ಕಲ್ಲುಮುಳ್ಳು ಗಳ ಧಕ್ಕಡಿಗೆ ಭಿನ್ನ ವಿಚ್ಛಿನ್ನವಾಗಿ ಹೋಗಿದ್ದವು. ಒಚ್ಛೆ ಬಿಟ್ಟರೆ ಮೈತುಂಬ ಸಾವಿರ ಚೇಳುಗಳು ಕಡಿದಷ್ಟು, ವೇದನೆಯ ಆ ಕೋಮಲಾಂಗಿಗೆ ಆಗು ಕಿತ್ತು. ಆ ಗರತಿ- ಗಂಗಾದೇವಿಯ ಕಣ್ಣುಗಳಿಂದ ಆಶು ಪ್ರವಾಹಗಳು ನಡೆ ದವು. ( ಪರಮಾತ್ಮ, ಕೃಷ್ಣ, ' 8:33 ಇAT' ಎಂದು ಹೇಳುವಾಗ ನಿನಗೆ ಸುಲಭವಾಯಿತು. ಈ ದುಃಖವನ್ನು ಅನುಭವಿಸಲು ಬರ ಬಾರದೆ ? ಆಗಲಿ, ನಿನ್ನಿಚ್ಛೆ ! ” ಎಂದವಳೇ ಆ ಸತಿ ರು ತನ್ನ ಮೈಮೇಲಿನ ಶಾಲನ್ನು ಚರಚರನೆ ಸೀಳಿ ಪಟ್ಟಿಗಳನ್ನು ಮಾಡಿ ತನ್ನ ಪದಗಳಿಗೆ ಮಾದರಕ್ಷದಂತೆ ಸುತ್ತಿಕೊಂಡಳು. ಮುಂಚೆಗಿತ ಕಾಲೂರಿ ನಡೆಯಲು ಕೊಂಚ ಅನುಕೂಲ ವಾಯಿತು. ಅವಳು ಮುಂದಕ್ಕೆ ಹೆಜ್ಜೆ ಯನ್ನಿಟ್ಟಳು. ಸೊಸೆಯ ಕಷ್ಟವನ್ನು ನೋಡಿ ಅತ್ತೆಗೆ ಮಿತಿ ಮೀರಿದ ಖೇದವಾಯಿತು. ಅವಳು ದೇವರ ಹೆಸರಿ ಮಣ್ಣು ತೂರಿ ಹಾದಿ ಹಿಡಿದಳು. ಅವಿಕಾರಿಯಾದ ಪರಮಾತ್ಮನು ಆ ಮಗು ಕೆಯ ಮಾತುಗಳನ್ನು ಹಚ್ಚಿಕೊಳ್ಳಲಿಲ್ಲ; ತನ್ನ ಮೈ ಮೇಲೆ ಅವಳು ತೂರಿದ ಮಣ್ಣನ್ನು ಜಾಡಿಸಿಕೊಳ್ಳಲೂ ಇಲ್ಲ; ತನ್ನ ಸಂಕಲ್ಪವನ್ನೂ ಬಿಡಲಿಲ್ಲ. ಕೊಲ್ಲೂರಿಗೆ ಹೋಗಬೇಕೆಂದು ಹೊರಟವರಾದ ಆ ಸ್ತ್ರೀಯರು ಪಾದೀ ತಪ್ಪಿ ಸಂಗಳವೆಂಬ ಗ್ರಾಮಕ್ಕೆ ಬಂದರು. ಆ ಊರ ಮುಂದೆ ಮಲಪ್ರಭಾ ನದಿಯು ಹರಿಯುತ್ತಿತ್ತು, ಅವರು ಅಲ್ಲಿಗೆ ಬಂದಾಗ ಇನನ್ನಿ ಮರು ಯುಳಿದಿತ್ತು. ಆ ಊರ ಕಣ್ಣು ಮಕ್ಕಳು ಸುಸಜವಾಗಿ ಹಾಡುತ್ತೆ ಧಾನ್ಯ ಗಳನ್ನು ಬೀಸುತ್ತಿದ್ದರು. ಅಲ್ಲಲ್ಲಿ ಕೋಳಿಗಳು ಒಳಿತಾಗಿ ಕೂಗಿ, ಉದ್ಯಮ ಶೀಲರಾದ ಜನರನ್ನು ಆಲಸ್ಯಮಯವಾದ ನಿದ್ರಾವಸ್ಥೆಯಿಂದ ಎಚ್ಚರಗೊಳಿ ಸುತ್ತಿದ್ದವು. ಧಡಧಡನೆ ಹರಿಯುತ್ತಿರುವ ಮಲಪ್ರಭಾ ನದಿಯು ಜನರ ನಾಲ್ಕು ಗಳಿಗೆ