ಪುಟ:ಬೆಳಗಿದ ದೀಪಗಳು.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

ಈಗಿನ ಬುಂದೇಲಖಂಡದಲ್ಲಿ ಚಂದೇಲವಂಶದ ರಾಜರು ಪೂರ್ವಕಾಲದಲ್ಲಿ ಆಳುತ್ತಿದ್ದರು. ಅವರ ರಾಜಧಾನಿಯು 'ಮಹೋಬಾ ' ಎಂಬ ಪಟ್ಟಣವಿದ್ದು, ಆ ರಾಜ್ಯಕ್ಕಾದರೂ ಮಹೋಬಾ ರಾಜ್ಯವೆಂಬ ಹೆಸರಿತ್ತು. ದಿಲ್ಲಿಯಲ್ಲಿ ಪೃಥ್ವೀರಾಜ ಚವ್ಹಾನನು ಆಳುತ್ತಿರುವಾಗ ಮಹೋಬಾದಲ್ಲಿ ಪುರಮಲ್ಲನೆಂಬ ರಾಜನಿದ್ದನು. ಪುರಮಲ್ಲನ ಪೂರ್ವಜರು ಉದಾರರೂ, ಐಶ್ವರ್ಯವಂತರೂ, ವೀರರೂ ಆದ ರಾಜರಾಗಿಹೋದರು. ಪುರಮಲ್ಲನಾದರೂ ತನ್ನ ರಾಜ್ಯದಲ್ಲಿಯ ವೀರರಾದ ಸರದಾರರ ಪುಣ್ಯದಿಂದ ಅನೇಕಯುದ್ಧಗಳಲ್ಲಿ ವಿಜಯವನ್ನು ಸಂಪಾದಿಸಿಕೊಂಡಿದ್ದನು. ಹೀಗೆ ಆಯತ್ತವಾಗಿ ಪ್ರಾಪ್ತವಾದ ವಿಜಯಗಳಿಂದ ಕೊಬ್ಬೇರಿದ ಪುರ ಮಲ್ಲನು ನಿಷ್ಕಾರಣವಾಗಿ ಪರಪೀಡೆಮಾಚಲುದಕನಾದ್ದರಿಂದ ಸುತ್ತಲಿನ ರಾಜರು ಅವನ ನಾಶಮಾಡುವ ಉದ್ಯೋಗ ಮಾಡಿ, ಗೊಂಡರೆಂಬ ಸಂಸ್ಕೃತರಾದ ಜನಾ೦ಗೆದವರನ್ನು ಎಬ್ಬಿಸಿ ಮಕೊರ್ಟಬಾ ರಾಜ್ಯದ ಮೇಲೆ ಅಭಿಯೋಗ ಮಾಡಿಸಿದರು. ಕಾಡು ಜನರೂ ಕರರ ಬಲಾಡ್ಯರೂ ಆದ ಗೊಂಡಜನರು ಪುರಮಲ್ಲನ ಬಲವನ್ನು ತೀತಿರಿವಾಡಿ ಬಡಿದು ಅವನನ್ನು ಒತ್ತಿ ಹಣ್ಣು ಮಾಡಿದರು.

ಆಗ ಪುರನ ಮುಖ್ಯ ಸರದಾರನಾಗಿದ್ದ ಜಸ್ಸರಾಜನೆಂಬ ಅಸಹಾಯ ಶೂರನು ಕ್ಷುದನಾಗಿ ಉದ್ರಿಕ್ತರಾದ ತನ್ನ ಪಟುಭಟರನ್ನು ಕಟ್ಟಿಕೊ೦ಡು ಜನರ ಮೇಲೆ ಸಾಗಿಹೋದನು. ಕಡಗಲಿಯಾದ ಜಸ್ಸರಾಜನು ತನ್ನ ಪ್ರಂಚಡವಾದ ಸೇನೆಯನ್ನು ಕಟ್ಟಿ ಕೊ೦ಡು ತಮ್ಮ ಪಾರಿಪತ್ಯಕ್ಕಾಗಿ ಬರುವನೆಂಬ ವರ್ತಮಾನವನ್ನು ಕೇಳಿ ಗೊಂಡರಾದರೂ ತಮಗೆ ಪ್ರೋತ್ಸಾಕತನವನ್ನು ಕೊಟ್ಟಿರುವ ರಾಜರ ಬೆಂಬಲವನ್ನು ಹೊಂದಿ ಒಳ್ಳೇ ಸಾಹಸದಿಂದ ಕಾದಿದರು. ಆದರೆ ಜಸ್ಟರಾಜನ ಮುಂದೆ ಅವರ ಆಟ ಸಾಗಲಿಲ್ಲ. ಆ ಆ್ಯಂಕರವಾದ ಯುದ್ಧವಲ್ಲಿ ಸಹಸ್ರಾವಧಿ ಜನ ಗೊಂಡರು ರಣದೇವತೆಗೆ ಆಕುಶಿಯಾಗಿ ಹೋದರು, ಅವರ ಮುಖ್ಯ ಪಟ್ಟಣವಾದ ದೇವಗರಾ ಎಂಬ ಭವ್ಯವಾದ ಕೋಟಿಯು ನೆಲಸಮವಾಗಿಹೋಯಿತು.