ಪುಟ:ಬೆಳಗಿದ ದೀಪಗಳು.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

೧೫

ಪುರಹರಕುಲಾಪಸದನ ಮಾತು ಕೇಳಿಕೊಂಡು ಕುದುರೆಯ ನೆವಮಾಡಿ ನೀವು ನಮಗೆ ಪೀಡೆ ಮಾಡಬೇಕೆಂದು ಯೋಚಿಸಿರುವಿರಿ. ಅದಕ್ಕಾಗಿ ನಾನು ಶಪಥದಿಂದ ಹೇಳುವದೇನಂದರೆ, ನೀವು ನಿಮ್ಮ ರಾಜ್ಯವನ್ನು ಕೊಟ್ಟರೂ ಈ ಕುದುರೆಯನ್ನು ನಾನು ನಿಮಗೆ ಕೊಟ್ಟವನಲ್ಲ ; ಏನು ಮಾಡುವದು ಮಾಡಿರಿ !” ಎಂದು ಅಲಾರಾಯನು ದರ್ಪದಿಂದ ನುಡಿದನು.

"ಮಾಡುವದನ್ನು ಮಾಡಬೇ? ಯಾರಲ್ಲಿ! ಸೇವಕರೆ, ಈ ಮೂಢರಾದ ಬಂಧುಗಳನ್ನು ಕಂಬಕ್ಕೆ ಬಿಗಿದು ಕುದುರಿಯನ್ನು ತೆಗೆದುಕೊಂಡು ನಡೆಯಿರಿ" ಎಂದು ನೀತಿಹೀನನಾದ ಆ ರಾಜನು ಆಜ್ಞೆಗೈದನು.

ಅಷ್ಟೊತ್ತಿನ ವರೆಗೆ ಸುಮ್ಮನಿದ್ದ ಉದಿಲ್ಲರಾಯನು ಸುಗಮಲ್ಲನ ಉದ್ದತವಾದ ನುಡಿ ಕೇಳಿ ಸಂತಪ್ತನಾಗಿ ಆವೇಶದಿಂದ ಖಡ್ಗವನ್ನು ಹಿರಿದು, "ಪುರಮಲ್ಲ, ನೀನೀಗ ರಾಜನಲ್ಲ, ಪರಸ್ವವನ್ನು ಬಲಾಕಾರದಿಂದ ಅಪಹರಿಸಬಂದ ಚೋರನು, ಈಗಿಂದೀಗಲೇ ಈ ಕೋಟೆಯ ಹೊರ ಬಿದ್ದು ಹೋಗು. ಜಸ್ಸರಾಜನ ಮಕ್ಕಳ ಕ್ರೋಧವನ್ನು ಪ್ರಜ್ವಲಿಸಿ ಬದುಕಿದವರಿಲ್ಲ !” ಎ೦ದು ರಾಜನನ್ನು ಅಧಿಕ್ಷೇಪಿಸಿ ನುಡಿದನು.

ಹೇಡಿಯು ಕೆಟ್ಟ ಮನಸ್ಸಿನವನಾದರೂ ಅವನು ಹೇಡಿಯೇ ಅಲ್ಲವೆ ? ಉದಿಲ್ಲನು ಚದರಿಸಿ ನುಡಿದ ಮಾತು ಕೇಳಿ ಪುರಮಲ್ಲನ ಎದೆ ಕಂಪಿಸಿತು. ಕಣ್ಣೆತ್ತಿ ಆ ತರ.ಣನ ಮುಖ ನೋಡಲು ಅವನಿಗೆ ಧೈರ್ಯ ಸಾಲಲಿಲ್ಲ. ಮಾತಾಡಲು ಉಸುರು ಬಂದ ಬಳಿಕ ಆ ರಾಜನು ಅಲಾನನ್ನು ಕುರಿತು ಅಂದದ್ದು : "ಪ್ರಜೆಗಳಾದದ್ದಕ್ಕೆ ನೀವು ನಿಮ್ಮ ರಾಜನನ್ನು ಒಳಿತಾಗಿ ಸಂಭಾವಿಸಿದಿರಿ. ಆಗಲಿ, ನೀವಿನ್ನು ನನ್ನ ರಾಜ್ಯದಲ್ಲಿ ಇರಲಾಗದು, ಈಗಿಂದೀಗಲೆ ನೀವು ಈ ಕೋಟೆಯನ್ನು ಬಿಟ್ಟು ನಡೆಯಿರಿ ನಿಮ್ಮ ಉಂಬಳಿಯು ಈ ಕ್ಷಣದಿಂದ ಸರಕಾರಕ್ಕೆ ಸೇರಿತು.”

"ಪುರವಲ್ಲ, ಕವಡೆಯ ನಿನ್ನಿ ಉಂಬಳಿಯನ್ನು ನಾನೆಷ್ಟು ಮಾತ್ರವೂ ಲೆಕ್ಕಿಸುವದಿಲ್ಲ. ಉದಾರಚರಿತಂದ ನಮ್ಮ ಪೂರ್ವಜರು ಈ ಸಿಂಹಾಸನದ ನಿಷ್ಠೆಗಾಗಿ ಇಲ್ಲಿ ನಿಂತು ಕೊಂಡಿದ್ದರಿಂದ ನಾವೂ ಇಲ್ಲಿ ನಿಂತೆವು ಭೂಸ್ವಾಗಳ ಆಶೆಗಾಗಿ ಯಾವ 2೦ಭಿಮಾನಿಯಾದ ನೀರನಾದರೂ ರಣರಂಗದಲ್ಲಿ ತನ್ನ ಶಿರಸ್ಸನ್ನು ಸಮರ್ಪಿಸಲು ಒಪ್ಪಲಾರನು. ರಾಜನಿಷ್ಠೆಗಾಗಿಯೇ ವೀರರು