ಪುಟ:ಬೆಳಗಿದ ದೀಪಗಳು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

೧೯

ಆ ಮಾತು ಕೇಳಿ ಅಲಾರಾಯನು ಕರಕರನ ಹಲ್ಲು ಕರೆದು "ಮಾತಾಡಬೇಡ ಜಗ್‌ನುಷ ! ನೃಪಕುಲಕಲಂಕನಾದ ಆ ಪುರಮಲ್ಲನ ಮೈಗೆ ಕಕ್ಕಡವನ್ನು ಸುತ್ತಿ ಪೃಥ್ವಿರಾಜನು ಅವನನ್ನು ಸುಡುತ್ತಿರುವದನ್ನು ನಾನು ಪ್ರತ್ಯಕ್ಷವಾಗಿ ಕಂಡರೂ ಬಿಡಿಸಿಕೊಳ್ಳುವವನಲ್ಲ ! ಪಿತೃವಿಹೀನನಾದ ಈ ನರಪಶುವನ್ನು ನಮ್ಮ ತಂದೆಯವರು ಎತ್ತಿ ಆಡಿಸಿ ಜೋಕೆ ಮಾಡಿದ್ದರ ಪ್ರತಿ ಫಲವು ನಮಗೆ ವನವಾಸನೆ ? ಕುಗ್ರಾಮದ ಇವನ ರಾಜ್ಯವನ್ನು ಬೆಳಿಸಿ ಘನತೆಗೇರಿಸಿದ್ದರ ಉಪಕಾರವನ್ನು ಇವನು ನಮ್ಮ ಪಿತ್ರಾರ್ಜಿತವಾದ ಆಸ್ತಿಯನ್ನು ಅಪಹರಿಸಿಕೊಂಡು ತೀರಿಸಿದನೆ ? ರಾಜನಿಷ್ಠೆಗಾಗಿ ಪ್ರಾಣವನ್ನು ತೃಣಕ್ಕೂ ಕಡಿಮೆಯಾಗಿಮಾಡಿ ರಣರಂಗದಲ್ಲಿ ಆಹುತಿಯಾಗಿ ಕೊಡುವವರಾದ ನಮ್ಮನ್ನು ಕೀಳರೆಂದು ತಿಳಿದು ಈ ಕೂಳನು ಮಾನಹಾನಿ ಮಾಡಿದನಲ್ಲಿ? ಖಲಭುಜಂಗನಾದ ಆ ಪುರಹರನೇ ನಿಮ್ಮ ರಾಜ್ಯವನ್ನು ಕಾಪಾಡಿಕೊಳ್ಳಲಿ. ನಡೆ; ನಾವು ಬರುವದಿಲ್ಲ ಹೋಗು ” ಎಂದು ನಿರ್ಭರ್ತ್ಸಿಸಿ ನುಡಿದನು.

"ಧೀರರೆ, ಇಂಥ ಪ್ರಜ್ವಲಿತವಾದ ಕ್ರೋಧಾಗ್ನಿಯು ನಿಮ್ಮಂಥ ಪರ ಮೋದಾರರಾದ ಮಹಾತ್ಮರ ಹೃದಯದಲ್ಲಿ ಮಾತ್ರ ವಾಸಿಸುತ್ತಿರುವದೆಂದೇ ಒಳಿತಾಗಿರುವದು. ನೀಚರ ಹೃದಯದಲ್ಲಿ ಅದು ಸೇರಿದ್ದಾದರೆ ಆ ದುರ್ಧರನಾದ ಬೆಂಕಿಯಿಂದ ಆ ಜನರು ತನ್ನಿಂದ ತಾನೇ ಸುಟ್ಟು ಹೋಗುತ್ತಿದ್ದರು. ಈ ಕೋಧಾಗ್ನಿಯನ್ನು ನೀವು ಪುನಮಲ್ಲರಾಜರ ಮೇಲೆ ಪ್ರಯೋಗಿ ಬಹುದಾದರೂ ಮಹಾಮಾತೆಯವರಾದ ಮಂಚದೇವಿಯರಲ್ಲಿ ಇದನ್ನು ನೀನೆಂತು ಪ್ರಯೋಗಿಸುವಿರಿ ? ರಾಣಿಯವರು ವ್ಯಸನಾಕರಃಗಿ ಕಣ್ಣೀರು ಸುರಿಸುತ್ತೆ ನನ್ನನ್ನು ಕುರಿತು ' ಜಗನುಷ, ನನ್ನ ಮಕ್ಕಳಂತಿರುವ ಆ ವೀರ ಬಂಧುಗಳಾದ ಅಲಾ ಉದಿಲ್ಲರೀ ಪ್ರಸಂಗದಲ್ಲಿದ್ದರೆ, ನಮಗೆ ಈ ದುರ್ದಶೆಯು ಪ್ರಾಪ್ತವಾಗುತ್ತಿದ್ದಿಲ್ಲ. ನನ್ನ ತೊಡೆಯ ಮೇಲೆ ಆಡಿ ಬೆಳೆದವರಾದ ಆ ಬಾಲಕರು ನನ್ನ ವಿನಂತಿಯನ್ನು ಸರ್ವಥಾ ನಿರಾಕರಿಸಲಿಕ್ಕಿಲ್ಲ. ಪ್ರಸಂಗದಲ್ಲಿ ಬರದಿದ್ದರೆ ನನ್ನ ಆಣೆಯಾಗಿದೆ ಎಂದು ಅವರಿಗೆ ಹೇಳು. ವೀರಮಾತೆಯವರಾದ ದೇವಲದೇವಿಯರಿಗೂ ನಾನು ಸೆರಗೊಡ್ಡಿ ಬೇಡಿ ಕೊಂಡಿರುವೆನೆಂದು ಹೇಳು.' ಹೀಗೆ ಆಜ್ಞಾಪಿಸಿ ನನ್ನನ್ನು ಕಳಿಸಿದ ರಾಣಿ