ಪುಟ:ಬೆಳಗಿದ ದೀಪಗಳು.pdf/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೨೦
ಸಂಪೂರ್ಣ-ಕಥೆಗಳು

ಯವರು ನಿಮ್ಮ ಮಾರ್ಗ ಪ್ರತಿಕ್ಷೆ ಮಾಡುತ್ತ. ಅರಮನೆಯ ಚಂದ್ರ ಶಾಲೆಯಲ್ಲಿಯೇ ನಿಂತುಕೊಂಡಿರುವರು. ನಿಮ್ಮ ಮೊರೆಯನ್ನು ಕಾಣದೆ ಅವರು ಬಾಯಿಯಲ್ಲಿ ನೀರು ಹಾಕುವದಿಲ್ಲವೆಂದು ಹೇಳಿದ್ದಾರೆ ನಡೆಯಿರಿ, ಉಪೇಕ್ಷೆ ಮಾಡುವ ಸಮಯವಿದಲ್ಲ. ನಿರಾಶೆಯ ಭರದಲ್ಲಿ ಆ ನಮ್ಮ ರಾಣಿಯವರು ಜೀವಕ್ಕೆ ಅಪಾಯವನ್ನು ಮಾಡಿಕೊಂಡರೆ ಮುಂದೆ ನಿಮ್ಮಲ್ಲಿ ಹುಟ್ಟಿದ ಪಶ್ಚಾತ್ತಾಪದ ಬೆಂಕಿಯು ಸಪ್ತ ಸಮುದ್ರಗಳಲ್ಲಿಯ ನೀರು ತಂದು ಹೋಯ್ದರೂ ನೊಂದಲರಿಯದು!”

ತನ್ನ ದೇಶದ ರಾಣಿಯೂ, ಜೀವದ ಗೆಳತಿಯ ಆದ ಶ್ರೀ ಮಲುಂದ ದೇವಿಗೆ ಪ್ರಾಪ್ತವಾಗಿರುವ ದುರವಸ್ಥೆಯ ವೃತ್ತಾಂತವನ್ನು ಕೇಳಿ ಉದಾರ ಚರಿತೆಯಾದ ದೇವಲದೇವಿಯ ಮನಸ್ಸು ಕರಗಿ ನೀರಾಯಿತು. ಉದ್ವೇಗ ದಿಂದ ಅವಳು ದುಃಖಿಸಿ ದುಃಖಿಸಿ ಅತ್ತಳು. ಆವೇಶದಿಂದ ಅವಳು ತನ್ನ ಹಿರಿಯ ಮಗನನ್ನು ಕುರಿತು "ಆಲಾ, ಇನ್ನೊಂದು ಮಾತಾಡದೆ ನೀನೀಗಲೆ ನಿನ್ನ ಕುದುರೆಗೆ ತಡಿ ಹಾಕಿಸು. ಅಕೋ, ದುಃಖಭರಾರ್ತಳಾದ ಮಲುಂದ ದೇವಿಯ ಮೂರ್ತಿಯು ನನ್ನ ಕಣ್ಣೆದುರಿಗೆ ಕಟ್ಟಿದಂತಾಗಿದೆ. ಏಳೆಲ್ಲಿ ! ಸ್ನಾನ ಭೋಜನಾದಿಗಳ ವಿಚಾರವನ್ನು ಮಾಡದೆ ನೀನೀಗಲೆ ಹಾದಿ ಹಿಡಿ ! ” ಎಂದು ಆಜ್ಞಾಪಿಸಿದಳು.

ಆಗ ಉದಿಲ್ಲನೆದ್ದು ತಾಯಿಗೆ ಅಂದದ್ದು : "ಅಮಾ, ಪುರಮಲ್ಲನಿಗೆ ದೇಹಾಂತ ಶಾಸನವನ್ನು ವಿಧಿಸದೆ ಬಿಡುವದಿಲ್ಲೆಂದು ನಾವು ನಿಶ್ಚಯಿಸಿರುತ್ತೇವೆ ಮಗನಿಗೆ ಹಗೆಗಳಾದ ನಾವು ತಾಯಿಗೆ ಹಿತವಂತರಾಗುವ ಬಗೆಹೇಗೆ?”

"ಮಗುವೆ, ಪುರಮಲ್ಲನು ತಪ್ಪುಗಾರನು ಸರಿ, ಆದರೆ ನಾವು ಇಂಥ ದುರ್ಭರವಾದ ಸಮಯದಲ್ಲಿ ರಾಜನ ದೋಷಗಳನ್ನೆಣಿಸದೆ ನಮ್ಮ ಮಾತೃ ಭೂಮಿಯ ಕಡೆಗೆ ಲಕ್ಷ ಕೊಟ್ಟು ಕೆಲಸ ಮಾಡತಕ್ಕದ್ದು, ರಾಜನು ಕರ್ತವ್ಯ ಪರಾಙ್ಮುಖನಾದನೆಂದು ಅಂಥದೇ ತಪ್ಪನ್ನು ನಾವು ಮಾಡತಕ್ಕದ್ದಲ್ಲ."

"ಉದಾರಚರಿತಳಾದ ನನ್ನ ಮಾತೆಯೆ, ನಾವು ಮಹೋಬಾದ ರಾಜ್ಯದಿಂದ ಹೊರಗೆ ಹಾಕಿಸಿಕೊಂಡು ಬರುವಾಗಲೇ ಆ ಸಿಂಹಾಸನದ ನಿಷ್ಠೆಯನ್ನು ಅಲ್ಲಿಯೇ ಹರಿದೊಗೆದು ಬಂದೆವು. ನಾವೀಗ ಪ್ರಜರಲ್ಲ; ಪುರಮಲ್ಲನು ರಾಜನಲ್ಲ, ರಾಜನಿಷ್ಠೆ ಮತ್ತಿನಲ್ಲಿಯದು?”