ಪುಟ:ಬೆಳಗಿದ ದೀಪಗಳು.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೀರಮಾತೆಯಾದ ದೇವಲದೇವಿ

೨೧

"ಛಿಃ! ತಿಳಿಗೇಡಿಗಳಿರಾ, ರಾಜನು ಪ್ರಸನ್ನನಾಗಿ ನಿಮ್ಮ ಬಯಕೆಗಳನ್ನು ಪೂರೈಸುತ್ತಿರುವಾಗ ಮಾತ್ರ ಅವನ ಇಚ್ಛಾನುವರ್ತಿಯಾಗಿ ನಡೆಯುವವನು ರಾಜನಿಷ್ಠನೆಂದು ಹೇಳಬಹುದೆ ? ಇದು ಬಣಜಿಗರ ವ್ಯಾಪಾರವು. ಸಿಂಹಾಸನದಲ್ಲಿರುವ ನಿಶ್ಚಲವಾದ ಪ್ರೇಮಕ್ಕೆ ಮಾತ್ರ ರಾಜನಿಷ್ಠೆಯೆಂಬ ಹೆಸರು. ಆ ಸಿಂಹಾಸನದ ಮೇಲೆ ಕುಳ್ಳಿರಲು ಹುಟ್ಟಿದ ಗೊಂಬೆಯಾದ ಪುರಮಲ್ಲನ ತಪ್ಪುಗಳನ್ನೆಣಿಸಿ ನಾವು ಆ ಸಿಂಹಾಸನದ ಉಪೇಕ್ಷೆ ಮಾಡಕೂಡದು. ನಿಮ್ಮನ್ನು ಹಡೆದವರು ಮಹೋಬಾದ ಸಿಂಹಾಸನವನ್ನು ಜೀವದ ಹಂಗುತೊರೆದು ಭದ್ರವಾಗಿ ಸ್ಥಾಪಿಸಿ, ಅದನ್ನು ಕಾಪಾಡಿಕೊಂಡು ಹೋಗುವ ಭಾರವನ್ನು ನಿಮ್ಮ ಮೇಲೆ ಆಸ್ಥೆಯಿಂದ ಹೊರಿಸಿ ಪರಲೋಕವಾಸಕ್ಕೆ ತೆರಳಿದಾಗ ನೀವಿಂಥ ಪಿತೃದೋಹವನ್ನು ಚಿಂತಿಸುವಿರ ? ವಿಚಾರ ತಿಳಿದು ನೋಡಿರಿ ” ಎಂದು ಆ ಪತಿವ್ರತೆಯಾದ ಮಹಾಸತಿಯು ಬೋಧಿಸಿದಳು.

"ಜಸ್ಸರಾಜರ ವಿಚಾರಗಳೂ ಅವರ ರಾಜನಿಷ್ಟೆಯ ಅವರ ಚಿತೆಯಲ್ಲಿ ಸುಟ್ಟು ಹೋದವು. ಮಾನಧನರಾದ ನಾವು ಪುರಮಲ್ಲನು ಮಾಡಿದ ಅಪರಾಧವನ್ನು ಮರೆಯುವದೂ ಇಲ್ಲ; ಪುರಮಲ್ಲನನು ಕ್ಷಮಿಸುವದೂ ಇಲ್ಲ!"ಎಂದು ಉದಿಲ್ಲನು ಮತ್ತೆ ಸೆಟೆಯಿಂದ ನುಡಿದನು.

ಈ ಮಾತು ಕೇಳಿ ದೇವಲದೇವಿಗೆ ಪರಮಾವಧಿಯ ಸಂತಾಪವಾಯಿತು. ಅವಳು ಭರದಿಂದ ಮುಂದಕ್ಕೆ ಬಂದು ಉದಿಲ್ಲನ ಕೈಯಲ್ಲಿಯ ಖಡ್ಗವನ್ನು ಸೆಳಕೊಂಡು 'ಹೇಡಿಯೆ, ಕ್ಷತ್ರಿಯರ ಆಯುಧವನ್ನು ಧರಿಸಲು ನೀವು ಸರ್ವಥಾ ಅಯೋಗ್ಯನಾಗಿರುವಿ. ಪರಾಕ್ರಮಶಾಲಿಗಳಂತೆ ಯುದ್ಧ ಮಾಡಿ ಜನ್ಮಭೂನಿಗೆ ತಗಲಿರುವ ಕಲಂಕವನ್ನು ದೂರಮಾಡುವ ಸಾಮರ್ಥ್ಯವಿಲ್ಲದಕ್ಕಾಗಿ ನೀನು ಇಲ್ಲದ ನೆವ ಹೇಳಿ ಮೈಗಳ್ಳನಂತೆ ಮನೆಯಲ್ಲಿ ಕುಳ್ಳಿರಬೇಕೆನ್ನುವಿ. ಜಸ್ಸರಾಜರ ವೀರ್ಯಕ್ಕೆ ಹುಟ್ಟಿ, ಮೇಲೆ ನನ್ನ ಹಾಲು ಕುಡಿದು ನೀನಿಂಥ ಅಭದ್ರವಾದ ಮಾತಾಡುನಿಯಾ ? ನಿನ್ನಂಥ ಅಧಮನನ್ನು ಕಂಡು ಇವನು ಜಸ್ಸರಾಜನ ಮಗನಲ್ಲವೆಂದು ಶಂಕಿಸಿ ಯಾರಾದರೂ ನನಗೆ ಜಾರಿಣಿಯೆಂಬ ಅಪಶಬ್ದವನ್ನಿಟ್ಟಾರು. ಮೂರ್ಖಾ, ಬುದ್ಧಿಯನ್ನೆಲ್ಲಿಟ್ಟುರುವಿ ? ನಡೆ ನನ್ನೆದುರಿನಲ್ಲಿ ನಿಲ್ಲಬೇಡ ! ಯಾರಲ್ಲಿ ? ಜವಾನಸಿಂಗ, ನನ್ನ ಕುದುರೆಗೆ ತಡಿ ಹಾಕಿಸಿ ಸಿದ್ಧ ಮಾಡು. ಮುಲುಂದದೇವಿಗೆ ನಾನು ಕೊಟ್ಟಿರುವ ವಚನ