ವಿಷಯಕ್ಕೆ ಹೋಗು

ಪುಟ:ಬೆಳಗಿದ ದೀಪಗಳು.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು
ನೂರಜಹಾನ
೫೧

ಳಿಗೆ ದೇಹಾಂತ ಪ್ರಾಯಶ್ಚಿತ್ತವೇ ಯೋಗ್ಯವಾದದ್ದೆಂದು ಖಾನನು ಬಾದಶಹನಿಗೆ ಹೇಳಿದನು. ಬಾದಶಹರ ಯೋಗ್ಯತೆಯು ದೇವರ ಯೋಗ್ಯತೆಗೆ ಸಮಾನವಾದದ್ದೆಂದು ನಾವೆಲ್ಲರೂ ತಿಳಿಯುತ್ತಿರುವಾಗ, ಇವರು ಉಚ್ಚರು ಇವರು ನೀಚರು ಎಂಬ ಪಕ್ಷಪಾತದಿಂದ ಬಾದಶಹರ ಕೈಯಿಂದ ಅನ್ಯಾಯವಾದರೆ, ಲೌಕಿಕಕ್ಕೆ ಹಾನಿಯುಂಟಾಗುವದೆಂದು ಖಾನನು ಬಾದಶಹನಿಗೆ ನಿಕ್ಷಿಸಿ ಹೇಳಿದನು.

ಭಯಂಕರ ಸಂಕಟದಲ್ಲಿ ತೊಳಲಾಡುತ್ತಿದ್ದ ನನ್ನ ಪ್ರೀತಿಯ ರಾಣಿಯು ಯೋಗ್ಯತೆಯನ್ನಾಗಲೀ, ಅಥವಾ ಶೌರ್ಯ ಎನ್ನಾಗಲೀ ಲಕ್ಷಕ್ಕೆ ತಾರದೆ, ನೂರಜಹಾನಳಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವ ಒಂದು ಕಾಗದದ ಮೇಲೆ ಬಾದಶಹನು ತನ್ನ ಸಹಿಯನ್ನು ಮಾಡಿದನು, ಜಹಾಂಗೀರನ ಈ ನೀಚತನದ ನಿಷೇಧವನ್ನು ಎಷ್ಟು ಮಾಡಿದರೂ ಆದು ಅಲ್ಪವೇ ಈ ಸಮಯದಲ್ಲಾದರೂ ಅವಳು ತುಸು ಸಹ ಗಾಬರಿಯಾಗದೆ ಬಾದಶಹನ ಹುಕುಮನ್ನು ಶಾಂತಚಿತ್ತದಿಂದ ಕೇಳಿಕೊಂಡಳು. ಮರಣದ ಪೂರ್ವದಲ್ಲಿ ಬಾದಶಹನದೂ ತನ್ನದೂ ಒಮ್ಮೆ ಭೆಟ್ಟಿಯಾಗಬೇಕೆಂಬ ವಿನಂತಿಯನ್ನು ಮಾತ್ರ ಮಾಡಿಕೊಂಡಳು. " ರಾಜರು ಅಥವಾ ಬಾದಶಹರು ಒಮ್ಮೆ ***(ಜೈಲಲ್ಲಿ) ಬಿದ್ದರೆಂದರೆ, ಸ್ವಾತಂತ್ರ್ಯದ ಕೂಡ ಅವರ ಜೀವಿತವಾದರೂ ನಷ್ಟವಾಗುತ್ತದೆಂಬ ನಿಯಮ ಉಂಟು. ಶಹನ ಭೆಟ್ಟಿಯೂ ನನಗೆ ಒಮ್ಮೆ ಆಗುವಂತೆ ಮಾಡಿರಿ. ನನ್ನ ದೇಹಾಂತಶಿಕ್ಷೆಯ ಹುಕುಮಿನ ಕಾಗದದ ಮೇಲೆ ಸಹಿ ಮಾಡಿದ ಕೈಯನ್ನು ನನ್ನ ಅಶ್ರುಜಲದಿಂದ ತೊಳೆಯುವದರ ಹೊರತ: ಬೇರೊಂದು ಬೇಡಿಕೊಳ್ಳಲಿಕ್ಕಿಲ್ಲ"

ಮೋಹಬತಖಾನನು ಈ ವಿನಂತಿಯನ್ನು ಮಾನ್ಯ ಮಾಡಿದನು, ನೂರಜಹಾನಳು ಬಾದಶಹನ ಕಡೆಗೆ ನೋಡಿದಳು; ಅವಳ ಮುಖದೊಳಗಿಂದ ಒಂದು ಶಬ್ದ ವು ಸಹ ಹೊರ ಬೀಳಲಿಲ್ಲ ಅವಳ ಆ ಮುದ್ರೆಯನ್ನು ನೋಡಿ ಬಾದಶಹನು ಸದ್ಗದಿತ ಅಂತಃಕರಣವುಳ್ಳವನಾಗಿ, ಖಾನನಿಗೆ ಅಂದದ್ದು:"ಮೋಹಬತ, ಈಸ್ತ್ರೀಯಳನ್ನು ಯಾಕೆ ಬದುಕಿಸಿಕೊಳ್ಳುವದಿಲ್ಲ ? ನೋಡು, ಅವಳ ನೇತ್ರಗಳೊಳಗಿಂದ ಅಶ್ರುಧಾರೆಗಳು ಹಾಗೆ ನಡೆದವೆ ! ” ಮಾತುಗಳಿಂದ ಆ ಉದಾರ ಸರದಾರನ ಅಂತಃಕರಣವು ದಯಯಿಂದ ಕರಗಿ