ಪುಟ:ಭವತೀ ಕಾತ್ಯಾಯನೀ.djvu/೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಕೊಡಲೆ, ಆವನಲ್ಲಿಯೊಂದು ವಿಲಕ್ಷಣವಾದಭಕ್ತಿಯೇ ಹುಟ್ಟುತ್ತದೆ. ಅಂಥ ಭಕ್ತಿಯ ಬೆಳಕು ಮನಸ್ಸಿನಲ್ಲಿ ಬಿದ ಕೂಡಲೆ ಅವನು ಗಾಢಾಂಧಕಾರದಲ್ಲಿ ದೀಪದಲಾಭವಾದಂತ ಪರಮಹರ್ಷ ವನ್ನು ಹೊಂದಿ ಉನ್ಮತ್ತನಂತೆ ಕುಣಿಯುತ ಸತ್ಪುರುಷನ ಚರಣಗಳಲ್ಲಿ ಮಣಿಯುತ್ತ ತನ್ನನ್ನು ಕೃತಕೃತ್ಯನನ್ನಾಗಿ ಭಾವಿಸುತ್ತಾನೆ. ಆಮೇಲೆ ಅವನು, ತನ್ನನ್ನೂ ತನ್ನ ಕಾರ್ಯವನ್ನೂ, ಮರೆತು, ಆ ಸತ್ಪುರುಷರ ಸೇವಾಕಾರ್ಯದಲ್ಲಿಯೇ ತೊಡಗುತ್ತಾನೆ. ಸೇವಾಧುರಂಧರ ನೆನಿಸಿಕೊಂಡು ಸದ್ಗುರುವಿನ ಕೃಪಾಪಾತ್ರನಾಗುವದೇ ಆತನ ಕರ್ತವ್ಯವಾಗುವದು. ಇದೇ ಜನದ ಸಾಫಲ್ಯವು, ಇದೇ ಅನೇಕಜನ್ಮಗಳಿಂದ ಮಾಡುತ್ತಬಂದ ಪುಣ್ಯಕರ್ಮಗಳ ಪರಿ ಪಾಕವು, ಇದೇ ಗುರು-ಹಿರಿಯರ ಆಶೀರ್ವಾದಗಳ ಫಲವು, ಇದೇ ದೇವತಾರಾಧನದ ಮಹಿಮೆಯು! ಇಷ್ಟೊಂದು ಕೃಪಾಪಾತ್ರರಾದ ನಮ್ಮನ್ನು ಬಂಧಮುಕ್ತರನ್ನಾಗಿ ಮಾಡು 'ವದು ಬ್ರಹ್ಮನಿಷ ಗುರುಗಳಿಗೆ ಆಯಾಸವಲ್ಲ. ನಾವು ಅವರ ಸೇವಾಕಾರ್ಯವನ್ನು ಮಾಡುವಾಗ ಅವರ ಸದೂತಿಯನ್ನೂ ನಿರುಪಾಧಿಕವಾದ ಚಿತ್ತವೃತ್ತಿಯನ್ನೂ, ಸತ್ಯ ಪ್ರಯತ್ನ ಮುಂತಾದ ಸದ್ಗುಣಗಳನ್ನೂ, ನೋಡನೋಡಿ ಧನ್ಯರಾಗಿರುವದರಿಂದ, ಬಂಧ ವಿಮೋಚನಸಿತಿಯು ತಾನಾಗಿಯೇ ಒದಗುತ್ತದೆ. ಉಳಿದದ್ದೇನು; ಸ್ವಾನುಭವಗ್ರದರ್ಶ ನವು. ಸದುರವು ಸದಂತಃಕರಣದಿಂದ ಪರಮಶಿಷ್ಯನ ಉದ್ದಾರವಾಗಲೆಂದು ಶಿಷ್ಯನ ತಲೆ ಯಮೇಲೆ ಪರಮಪವಿತ್ರವಾದ ತನ್ನ ಹಸ್ತವನ್ನಿಟ್ಟರೆ ಅದು ಸಾಧಿಸಿ ಹೋಗುತ್ತದೆ. ಮನು ವ್ಯನು ಈ ಸ್ಥಿತಿಗೆ ಮುಟ್ಟಿ ಸದ್ಗುರುವಿನ ಪರಮಾನುಗ್ರಹದಿಂದ ಸ್ವಾನುಭವದಲ್ಲಿ ಮಗ್ನನಾಗಿ ಪರಮಾನಂದ ಪೂರ್ಣನಾದಮೇಲೆ ಮನಸ್ಸಿಗೂ ಇಂದ್ರಿಯಗಳಿಗೂ ಸಂಬಂಧವಿಲ್ಲ? ಇಂದ್ರಿಯಗಳಿಗೂ ವಿಷಯಗಳಿಗೂ ಸಂಬಂಧವೆಲ್ಲಿ? ಇಂಥ ಪ್ರಸಂಗದಲ್ಲಿ ಮನಸ್ಸು ವಿಷ ಯಗಳಿಂದ ತಿರುಗಿ ಸ್ವಾನುಭವಾನಂದದಲ್ಲಿಯೇ ಇರೋಣದರಿಂದ ಈ ಸಂಸಾರವೆಂಬ ದೃಢವಾದ ಬಂಧನವು ತಾನಾಗಿಯೇ ಕಳಚಿಹೋಗುತ್ತದೆಂಬ ತಾತ್ಪರ್ಯವನ್ನು "ಮನ ವಿವ” ಎಂಬ ಮೇಲಿನ ಶ್ರುತಿವಾಕ್ಯವು ತೋರಿಸುತ್ತದೆ.