ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ರಾಮಾಯಣ ಮಹಾ ಕಾವ್ಯ. ೮೧ ನದ ಜೀವವು. ಹೀಗಾಗಿ ಒಳಗೂ ಹೊರತಾ ರಾಮಾಯಣದ ರಹಸ್ಯವು ಪ್ರಪಂಚದ ಸರ್ವಸ್ವವಾಗಿದೆ. ಭರತಖಂಡದಲ್ಲಿ ನಡೆದ ರಾಮಾಯಣವು ಶಾಶ್ವತವೂ, ನಿತ್ಯನ ತನವೂ ಆದ ಕಥೆ. ಆದ ರಲ್ಲಿ ನಮ್ಮ ಸನಾತನ ಸಂಸ್ಕೃತಿಯ , ಪ್ರಪಂಚಕ್ಕೆ ಮೇಲು ಪಂಕ್ತಿ ಯಾಗಿರುವ ನಮ್ಮ ನಡೆನುಡಿಗಳ, ನಮ್ಮ ಬೆಳಗುವ ಭಾವನೆಗಳೂ, ಎಂದೂ ಅಳಿಯದ ನಮ್ಮ ಧರ್ಮ ಬುದ್ಧಿಯ, ಎ೦ದ ಮರೆಯದ ನಮ್ಮ ಜೀವಿತದ ಧೈಯವೂ ಅಡಕವಾಗಿವೆ. ರಾಮಾಯಣವು ಆಯಾ ದೇಶೀಯ ಭಾಷೆಗಳಲ್ಲಿ ಪರಿವರ್ತಿಸಲ್ಪಟ್ಟು, ಆಯಾ ಜನರಿಂದ ದಿನಾಲು ಪ್ರೇಮ ಭರರಿಂದ ಹಾಡಲ್ಪಡುತ್ತಿದೆ. ನಿತ್ಯವೂ ಹಳ್ಳಿ ಹಳ್ಳಿ ಗಳಲ್ಲಿ ಸುಶಿಕ್ಷಿತರೂ, ಅಶಿಕ್ಷಿತರೂ, ಹೆಂಗಸರ , ಗಂಡಸರೂ, ಹುಡು ಗರೂ ತಮ್ಮ ಮನೆಗೆಲಸಗಳನ್ನೆಲ್ಲ ತೀರಿಸಿಕೊ೦ಡು ದಿವಸವಲ್ಲ ದುಡಿದು ಶ್ರಮವನ್ನು ಕಳೆದು ಕೊಳ್ಳಬೇಕೆಂದು ರಾಮಾಯ ಗಾ ಶ್ರವಣವು ನಡೆದ ಪುರಾಣಕೀರ್ತನಕಟ್ಟೆ ಗಳಲ್ಲಿ ಗು೦ಪುಗು೦ಪಾಗಿ ನೆರೆದು ಸಮಾ ಧಾನವನ್ನು ಪಡೆಯುತ್ತಾರೆ. ರಾಮಾಯಣವು ಭಾರತೀಯರಿಗೆ ಶಾ೦ತಿ ಶಕ್ತಿಗಳನ್ನು ಮೈಗೂಡಿಸುವಂಥ ಅಮೃತಪ್ರವಾಹವಾಗಿದೆ. ಸತ್ಯಕ್ಕೆ ಸಾವಿಲ್ಲವೆ೦ಬು ನ ಕಲ್ಪನೆಯನ್ನು ಹೆಪ್ಪುಗಟ್ಟಿಸುವ ಕಾವ್ಯವಿದು. ಈ ಮಹಾ ಕಾವ್ಯದಲ್ಲಿಯೇ ತಮ್ಮ ದೃಷ್ಟಿಯನ್ನಿಟ್ಟು, ಈ ಮಹಾ ಕಾವ್ಯವು ತಮ್ಮ ಜೀವಿತಕೊ೦ದು ನಿತಾಂತ ಸಮಾಧಾನವನ್ನು ಕೊಡುವ ನಾ ಧನ ಎಂದು ಅದನ್ನು ಹಾಡಿ ಹಾಡಿ ನಲಿದಾಡಿ, ತಮ್ಮ ಕಷ್ಟ ಮಯವಾದ ಜೀವಿತಯಾತ್ರೆಯನ್ನು ಸುಖಮಯ ಗೊಳಿಸುವಂಥ ಸಾವಿರಾರು ಕುಟುಂಬಗಳು ಈಗ ಭಾರತ ದೇಶದೊಳಗೆ ಕಾಣಬಹುದು. ಸೀತಾ ರಾಮರ ಪವಿತ್ರ ನಾಮ ದಿಂದ ಪಾವನವಾಗದ ಭೂಮಿಯು ಭರತ ಖಂಡದಲ್ಲಿಯ೦ತ ಕಾಣದು. * ಆದಿ ಕವಿಯಾದ ವಾಲ್ಮೀಕಿ ಋಷಿಗಳ

  • ಪಾತಾಳದೇಶವೆಂದೆನಿಸುವ ದಕ್ಷಿಣ ಅಮೇರಿಕೆಯಲ್ಲಿ ಮಕ್ಷಿಕದೇಶದಲ್ಲಿ ಇನ್ನೂ (ರಾಮ ಸಿತವ' ಹೆಸರಿನಿಂದ ಉತ್ಸವ ನದಿ ಸ೨ರಂಬುದರ ಮೇಲಿಂದ ರಾಮ ಕೀತಿ೯ಯ ಕಲ್ಪನೆಯಾಗಬಹುದು.