ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ ಇತಿಹಾಸವು. ಖ ಬಾಯಿಂದ ಕರುಣರಸವುಕ್ಕಿ ಸ್ವಚ್ಛಂದವಾಗಿ ಹರಿದ ಕಾವ್ಯಗಂಗೆಯಿದು. ರಾಮಾಯಣ ಕಾವ್ಯವನ್ನು ಶ್ರೀರಾಮಾವತಾರವಾಗುವ ಪೂರ್ವದಲ್ಲಿಯೇ ವಾಲ್ಮೀಕಿ ಋಷಿಗಳು ಬರೆರರೆಂದೂ, ಮು೦ದೆ, ಅವರ ನುಡಿಯ ನ್ನೇ ನಿಜ ಮಾಡಿ ತೋರಿಸಲಿಕ್ಕೆಂದು ಭಗವಂತನಿಗೆ ರಾಮಾವತಾರವನ್ನು ತೊಡ ಬೇಕಾಯಿತೆಂದೂ, ಆ ಕಾವ್ಯವನ್ನೆ ವಾಲ್ಮೀಕಿ ಋಷಿಗಳು ಶ್ರೀರಾಮ ಚಂದ್ರನ ಮಕ್ಕಳಾದ ಲವಕುಶರಿಗೆ ಕಲಿಸಿ, ಅವರ ಬಾಯಿಂದ ಶ್ರೀರಾಮ ಚ೦ದ್ರನ ಮುಂದೆ ಹಾಡಿಸಿದರೆಂದೂ ಹಿಂದೂ ಜನರ ವರಂವರ ದ ನಡೆದು ಬಂದ ಭಾವನಾತ್ಮಕವಾದ ನಂಬುಗೆ, ಹೀಗೆ ಎಲ್ಲ ಬಗೆ೦ ದಲ, ರಾಮಾಯಣವೆಂದರೆ ಪ್ರಪಂಚದಲ್ಲಿರುವ ಕಾವ್ಯಗಳಿಗೆ ಕಳಸವೂ ಕಾವ್ಯಲಕ್ಷಣಕ್ಕೆ ಮೇಲು ಪ೦ಕ್ತಿಯ ಆಗಿದೆ. ಸಂಸಾರದ ಜೀವ ನಕ್ಕೆ ಅತ್ಯಂತ ಪ್ರಾಧಾನ್ಯವನ್ನು ಕೊಟ್ಟು, ಮನುಷ್ಯನು ಗೃಹಸ್ಥಾಶ್ರಮ ದಲ್ಲಿ ಹೇಗೆ ಇರಬೇಕೆಂಬದನ್ನು ರಾಮಾಯಣವು ಸ್ಪುಟಗೊಳಿಸುತ್ತದೆ; ಆದ್ದರಿಂದ ರಾಮಾಯಣವೆಂದರೆ, ಅತ್ಯುದಾವಾ ದೊ೦ದು ಸ೦ವಾರ ಚಿತ್ರ. ತಂದೆ ಮಕ್ಕಳು, ಅಣ್ಣ ತಮ್ಮಂದಿರು, ಗಂಡ ಹೆಂಡಿರು ಇವರ ಲ್ಲಿಯ ಅನ್ಯಪ್ರೇಮ, ಕಷ್ಟ ನಷ್ಟಗಳು ಒದಗಿದಾಗ ಮನುಷ್ಯನು ಹೇಗೆ ನಡೆದು ಕೊಳ್ಳಬೇಕು, ಸ೦ವಾರದೊಳಗೆ ಪ್ರತಿಯೊಬ್ಬ ಮನುಷ್ಯ ನಿಗೆ ಸತ್ಯ, ಅಹಿಂಸೆ, ಏಕಪತ್ನಿ ವ್ರತ, ಸೋದರ ಪ್ರೇಮ ಇವೆಲ್ಲವೂ ಎಷ್ಟು ಅವಶ್ಯವಾಗಿವೆ, ಮನುಷ್ಯನು ಅವುಗಳನ್ನು ಎಷ್ಟು ಕರ್ತವ್ಯ ಬುದ್ಧಿ ಯಿ೦ದ ಹೆದರದೆ ಬೆದರದೆ ಸಾಗಿಸಲಿಕ್ಕೆ ಬೇಕೆ೦ಬುವ ಮಾತುಗಳಿಗೆ ರಾಮಾಯಣವು ನಿತ್ಯದಲ್ಲಿಯ ಬೆಳಗುತ್ತಿರುವ ಸೂರ್ಯನಂತಿದೆ. ಶ್ರೀರಾಮಚಂದ್ರನಿಗೆ ತಂದೆಯಾದ ದಶರಥಮಹಾರಾಯನಲ್ಲಿರುವ ವಿಧೇ ಯತೆ, ಕೌಸಲ್ಯಾ, ಸುಮಿತ್ರಾ, ಕೈಕೇಯಿ ಮೊದಲಾದ ತಾಯಂದಿರಲ್ಲಿ ರುವ ಮಾತೃವಾತ್ಸಲ್ಯ, ಲಕ್ಷ್ಮಣ ಭರತ ಶತ್ರುಘಾರಿಗಳಿಗೆ ಶ್ರೀರಾಮನ ವಿಷಯದಲ್ಲಿ ತೋರ್ಪಡುವ ಸ್ವಾರ್ಧ ತ್ಯಾಗ, ವಿಶ್ವಾಮಿತ್ರ ವಸಿಷ್ಠರ ಬಗ್ಗೆ ಗು ರು ಭಕ್ತಿ, ಸೀತಾ ದೇವಿಗೆ ಶ್ರೀರಾಮಚಂದ್ರನಲ್ಲಿರುವ ಲೋಕೋ ತರವಾದ ಪತಿನಿಷ್ಠೆ, ಹನುಮಂತನಿಗೆ ಶ್ರೀರಾಮ ಪ್ರಭುವಿನಲ್ಲಿರುವ ಅಸಾಧಾರಣವಾದ ಪ್ರಭು ಪ್ರೇಮ, ಶ್ರೀರಾಮನ ಬಗ್ಗೆ ಪ್ರಜೆಗಳ ಅತ್ಯಂ