ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ರಾಕ್ಷಸರು 'ಭೂಷಣವೆಂದು ಮನಗಂಡವನಾದ್ದರಿಂದ ಆ ಮುದಿ ಅನಾರರ ಮು೦ದೆ ಅಡ್ಡ ಬಿದ್ದು ಸೆರಗೊಡ್ಡಿ ಕ್ಷಮಾಪಣೆಗಾಗಿ ಕೇಳಿಕೊಂಡನು. ಈತನಿಗೆ ಬೇಕು ಅರಸನೆಂದು ! ಯಾವಾತನ ಮು೦ದೆ ಕಿರೀಟಮುಕುಟಗಳನ್ನು ಧರಿಸಿದ ಮಾಂಡಲಿಕರಾಜರು ನೆಲಕ್ಕೆರಗಿ ಉರುಳಾಡುತ್ತಿದ್ದರೋ, ಅ೦ಥವನು ದಿಕ್ಕಿಲ್ಲದ ವೃದ್ಧ ಜನರ ಮುಂದೆ ನಿಂತು ಚಿಕ್ಕ ಬಾಲಕನಂತೆ ಬೇಡಿಕೊಳ್ಳುವದೆಂದರೆ, ವಿನಯದ ಪರಾಕಾಷ್ಠೆ ಯೇ ಸರಿ! ಇದೇ ರಾಜರ ನಿಜವಾದ ಸಂಪತ್ತು, ನಿಜವಾದ ಶಕ್ತಿಯೆಂಬುದನ್ನು ಪೂರ್ವ ಕಾಲದ ರಾಜರು ತಿಳಿದಿದ್ದರು. ಅದರಂತೆಯೇ , ರಾಮನು ರಾಜ್ಯವಾ ಳುತ್ತಿರಲು, ಒಬ್ಬ ಬ್ರಾಹ್ಮಣನ ಮಗನು ಆ ಕಾಲದಲ್ಲಿಯೇ ಸಾಯಲು, ಆ ಮಡಿವಾಳನು ಅರಸನ ಬಳಿ ಹೋಗಿ ( ರಾಜನೇ, ನಿನ್ನ ರಾಜ್ಯದೊಳ ಗೇನಾದರೂ ಅನ್ಯಾಯ, ದು ರಾಗರಣೆ ನ ದುದರಿಂದ ನನ್ನ ಮಗನು ಮಡಿದನು; ಈ ತಪ್ಪಿಗೆ ನೀನು ಕಾರಣ;” ನೆಂದು ರಾಜನಿಗೆ ಹೊಣೆಗಾರ ನನ್ನಾಗಿ ಹಿಡಿದನಂತೆ! ಒಡನೆಯೇ, ರಾಮನು ಹೊರಹೊರಟು, ಶಂಬೂಕ ನೆಂಬ ಶೂದ್ರನು ತನ್ನ ವರ್ಸೊ ಚಿ ತ ಕಾರ್ಯವನ್ನು ಬಿಟ್ಟು, ತಪಸ್ಸು ಮಾಡುತ್ತಿದ್ದುದನ್ನು ಕ೦ಡು, ರಾಮನು ಅವನನ್ನು ದಂಡಿಸಿದನಂ ತೆ! ಸ್ವ ಧರ್ಮದಿಂದ ನಡೆದು ಕೊಂಡರೇನೇ ಮನುಷ್ಯನಿಗೆ ಬೇಕಾದ್ದು ಶಿಗು ತಿರಲು, ವರ ಧರ್ಮದ ಕಡೆಗೆ ನೋಡುವದೇಕೆ ? ಏನದು ಕರ್ತವ್ಯ ಜಾ ಗ್ರತೆ! ಪ್ರಜೆಗಳ ವಿಷಯದಲ್ಲಿ ಕಂಡು ಬರುವ ಪುತ್ರ ವಾತ್ಸಲ್ಯವೆಷ್ಟದು ? ಪ್ರಜೆಗಳ ಸುಖಕ್ಕಾಗಿ ಮಡದಿ ಮಕ್ಕಳನ್ನೂ, ಸ್ನೇಹವಾತ್ಸಲ್ಯಗಳನ್ನೂ, ಕೊನೆಗೆ ಸ್ವ ಸುಖವನ್ನೂ ತೊರೆಯುವ ಆ ಸತ್ವಶಾಲಿಗಳಾದ ರಾಜರನ್ನು ಎಷ್ಟು ನಾಲಿಗೆಯಿಂದ ಹೊಗಳಲು ನಾ ವ್ಯವು! . ರಾಕ್ಷಸರು:- ರಾಮಾಯಣದೊಳಗೆ ರಾಕ್ಷಸರೆಂಬ ಶಬ್ದವು ಸರ್ವ ಸಾಮಾನ್ಯವಾಗಿದೆ; ರಾಕ್ಷಸರೆಂಬುದೊಂದು ಭೀಕರವಾದ ಬೇರೆ ಜಾತಿಯೇ ಇತ್ತೆಂಬುದು ಹಿಂದೂಗಳಿಗೆ ಆ ಹೆಸರಿನಿಂದಲೇ ಸ್ಪಷ್ಟವಾ ಗುತ್ತದೆ; ರಾಕ್ಷಸರ ಕಲ್ಪನೆಯೆಂದರೆ, ಕಪ್ಪು ಮೈಬಣ್ಣದವರೂ, ನಾಲಿಗೆ ಚಾಚಿದವರೂ, ಕೂದಲು ಬಿಟ್ಟ ವರ, ಕೆಂಡದಂಥ ಕಣ್ಣಿನವರೂ, ಹುಲಿ ಯ೦ಥ ದಾಡೆಯವರೂ, ಇದ್ದಿರಬಹುದೆಂದು ನಾ ಮಾನ್ಯ ತಿಳುವಳಿಕೆ.