ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೦೦
ಭಾರತೀಯರ ಇತಿಹಾಸವು.

ಯಾವ ವಿಷಯದ ಕಡೆಗೆ ಹರಿಯಲಿ, ಕೊನೆಗೆ ಧರ್ಮವೇ ಗತಿಯೆಂಬ ಪಲ್ಲವಿಗೆ ಬಂದಿಳಿಯದೇ ಅವರಿಗೆ ಸಮಾಧಾನವೇ ಇಲ್ಲ; ಜೀವಮಾನದ ಪ್ರವಾಸದೊಳಗೆ ಸುಖದುಃಖಗಳೆ೦ಬ ತೆಗ್ಗುದಿನ್ನೆಗಳೂ, ಹೊಳೆಹಳ್ಳಗಳೂ, ಮನುಷ್ಯನಿಗೆ ಬಿಟ್ಟವುಗಳಲ್ಲ; ಹೊತ್ತು ಬಂದಂತೆ, ಮನುಷ್ಯನು ಪ್ರಸ೦ಗಕ್ಕೆ ಬೆನ್ನು ಕೊಡಲೇಬೇಕು; ಆದರೆ ಹೀಗೆ ಬೆನ್ನುಗೊಟ್ಟು ದಾರಿ ನಡೆಯುತ್ತಿರುವಾಗ್ಗೆ, ಧರ್ಮದ ಮೇಲಿನ ಅವನ ಗುರಿಯು ಎಂದೂ ಸಡಲಿ ಜಾರಲಿಕ್ಕಾಗದು; ಅದನ್ನೊಂದು ಕೈಬಿಟ್ಟರೆ, ಮನುಷ್ಯನ ವೃತವೇ ಹಾಳಾಗುವದು; ಹೊಳೆಯಲ್ಲಿ ಹುಣಸೀಹಣ್ಣು ತೊಳೆದಂತಾಗುವದು; ಆದುದರಿಂದ, ಶ್ರೀವ್ಯಾಸರು "ಇದೋ? ಎರಡೂ ಕೈಗಳನ್ನೆತ್ತಿ ಕೂಗುತ್ತಿರುವೆನು; ಆದರೂ ನನ್ನನ್ನಾರೂ ಲಕ್ಷಿಸುವದಿಲ್ಲವಲ್ಲ! ಧರ್ಮದಿಂದ ಅರ್ಧ, ಕಾಮಗಳು ಕೈಸೇರುತ್ತವೆಂದಮೇಲೆ, ಇ೦ಧ ಧರ್ಮವನ್ನೇಕೆ ಆಶ್ರಮಿಸುವದಿಲ್ಲ?" ಎಂದು ತಿರಿತಿರಿಗಿ ಸಂಕಟಪಟ್ಟು ತಮ್ಮ ಮುಮ್ಮಕ್ಕಳಾದ ಭಾರತೀಯರಿಗೆ ಪ್ರಶ್ನೆ ಕೇಳಿರುವರು !

ಚಂದ್ರವಂಶದ ಚರಿತ್ರೆ:- ಋಗ್ವೇದದಲ್ಲಿ ಚಂದ್ರವಂಶದ ಹೆಸರು ಇದ್ದಂತೆ ತೋರುವದಿಲ್ಲವಾದರೂ, ಚಂದ್ರವಂಶದ ಮೊದಲಿಗರ ಹೆಸರುಗಳು ಅಲ್ಲಿ ಕಂಡುಬರುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ಕಾಣುವ ಹೆಸರುಗಳೆ೦ದರೆ, ನಹುಷ, ಯಯಾತಿ, ಪುರೂರುವಾ, ಆಯಂ ಇವಿಷ್ಟು, ಈ ಚಂದ್ರವಂಶೀಯ ಆರ್ಯರು ಹಿಮಾಲಯದ ಉತ್ತರಕ್ಕಿರುವ ಇಲಾವರ್ಷದ ಕ್ಷತ್ರಿಯರಿದ್ದು ಅಗ್ನಿ- ಉಪಾಸಕರಿದ್ದುದು ಸ್ಪಷ್ಟವಾಗುತ್ತದೆ. ಆದಿಯಲ್ಲಿ ಇವರು ಗಂಗಾನದಿಯ ದರಿಕಂದರದೊಳಗಿ೦ದ ಹಾಯ್ದು, ಸರಸ್ವತೀತೀರಕ್ಕೆ ಬಂದು ತಲ್ಪಿದರೆಂಬುದಕ್ಕೆ ಋಕ್ಕುಗಳೇ ಸಾಕ್ಷಿಯಾಗಿವೆ; ಮಹಾಭಾರತವನ್ನು ಆಧಾರವಾಗಿಟ್ಟುಕೊ೦ಡರೆ, ಅದರ ಮೇಲಿಂದ ಪುರೂರವನೇ ಚಂದ್ರವಂಶೀಯರ ಆದಿಪುರುಷನೆಂದು ಸಿದ್ಧವಾಗುತ್ತದೆ. ಚಂದ್ರವಂಶದೊಳಗೆ ಮುಖ್ಯವಾಗಿ ಕೌರವ, ಪಾಂಚಾಳ, ಯದು, ಚೇದಿ, ಮಗಧ, ಭೋಜ, ಸೌರಾಷ್ಟ್ರ ಇಷ್ಟು ಪಂಗಡಗಳಿದ್ದವು; ಇವರೆಲ್ಲರೂ ಚಂದ್ರವಂಶೀಯ ಕ್ಷತ್ರಿಯ ಆರ್ಯರೇ ಇದ್ದು, ಕೌರವರು ಕುರು ಕ್ಷೇತ್ರದಲ್ಲಿದ್ದರು. ಪಾಂಚಾಳರು ಗಂಗೆಯ ದಕ್ಷಿಣದಂಡೆಯಲ್ಲಿ ವಾಸ