ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ Yಾರತೀಯರ ಇತಿಹಾಸವು. ಪಟ್ಟ ನಾಯಿ ತು. ವಿಚಿತ್ರವೀರ್ಯನ ಮಕ್ಕಳೇ ಧೃತರಾಷ್ಟ್ರ, ಹಾಗೂ ಪಾ೦ಡು, ವಿಚಿತ್ರವೀರ್ಯನ ತರುವಾಯ ಧೃತರಾಷ್ಟ್ರನು ಪಟ್ಟ ವರ ತಕ್ಕವನು; ಆದರೆ ಅವನು ಹುಟ್ಟು ಗು ರುಡನಿದ್ದುದರಿಂದ ಪಾಂಡು ರಾಜನ ಕೈಗೆ ರಾಜ್ಯ ದಾಡಳತವು ಸೇರಿ ತು; ಆದರೆ ಮುಂದೆ ಪ೦ಡು ರಾಜನ ಮೈಯಲ್ಲಿ ಸ್ವಸ್ಥವಿಲ್ಲದ್ದರಿಂದ ಅವನು ಧೃತರಾಷ್ಟ್ರನ ವಶಕ್ಕೆ ರಾಜ್ಯ ಬಿಟ್ಟು, ವನಕ್ಕೆ ತೆರಳಿದನು. ಧೃತರಾಷ್ಟ್ರನಿಗೆ ನೂರು ಮಂದಿ ಮಕ್ಕಳು; ಅವರಲ್ಲಿ ದುರ್ಯೋಧನನೇ ಹಿರಿಯ, ಪ೦ಡು ರಾಜನಿಗೆ ಪುತ್ರ ಸಂತತಿ ಯಿ ರಲಿಲ್ಲ; ಆದರೆ ವೀರ ಪತ್ನಿಯ ರಾದ ಮಾದ್ರಿ ಮತ್ತು ಕು೦ತಿದೇವಿ ಯ ರು ದೇವರನ್ನು ಪ್ರಸನ್ನ ಪಡಿಸಿಕೊಂಡು ಅವರ ಪ್ರಸಾದದಿಂದ ಕು೦ತಿದೇವಿಯು ಧರ್ಮ, ಭೀಮ, ಅರ್ಜುನ ಹೀಗೆ ಮೂವರನ್ನೂ, ಮಾಗ್ರಿ ದೇವಿಯು ನಕುಲ, ಸಹದೇವರಿಬ್ಬರನ್ನೂ ಹತ್ಯರು. ವೀರ ಮಾತೆಯರ ಹೊಟ್ಟೆಯಿಂದ ಹುಟ್ಟಿದ ಈ ಜ್ಯೋತಿಗಳು ವೀರರ ಮರಿ ಗಳೇ ಆಗಿದ್ದರು; ಸಿ೦ಹದ ಹೊಟ್ಟೆಯಲ್ಲಿ ಸಿಂಹಗಳೇ ಹುಟ್ಟು ವವಷ್ಟೆ! ಪಾಂಡವರು ಚಿಕ್ಕಂದಿನಲ್ಲಿ ಹಿಮಾಲಯದ ಅದ್ಭುತವೂ, ರಮ್ಯವೂ, ಆದ ಸ್ವರ್ಗೀಯ ವಾತಾವರಣದೊಳಗೆ ಕಾಲಕಳೆದರು, ಸಂಡು ರಾಜನು ಮ ಡಿಯಲು, ಮಾದ್ರಿ ದೇವಿಯ ಪ೦ಡು ರಾಜನೊಡನೆ ಸತಿ ಹೋದಳು; ಮಕ್ಕಳೆಲ್ಲರೂ ಚಿಕ್ಕವರಿದ್ದುದರಿಂದ ಕು೦ತಿದೇವಿಯೊಡನೆ ಅವರನ್ನೆಲ್ಲ ಹಿಮಾಲಯ ದೊಳಗಿನ ಬ್ರಾಹ್ಮಣರು ಹಸ್ತಿನಾಪುರಕ್ಕೆ ಧೃತರಾಷ್ಟ್ರನ ಬಳಿಗೆ ತಂದು ಬಿಟ್ಟರು. ಪಾಂಡವರು ಸಂಡು ರಾಜನ ಹೊಟ್ಟೆಯ ಮಕ್ಕಳಲ್ಲವೆಂದು ಆಗ್ಗೆ ಕೌರವರು ತಿಳಿದುದರಿಂದ, ಕೌರವರಿಗೂ ಅವ ರಿಗೂ ಅಗಿನಿಂದಲೇ ಜಗಳಕ್ಕೆ ಮೊಳಕೆಹಾಕಿ ತು; ಹಿಮಾಲಯದ ಶುದ್ಧವೂ, ಅಮೃತಪ್ರಾಯವೂ ಆದ ಹವೆಯೊಳಗೆ ಹುಟ್ಟಿ ಬೆಳೆದವರಾದ ಪಾ೦ಡವರು ದೇಹದಿಂದಲೂ, ಬುದ್ಧಿಯಿಂದಲೂ ಬಹು ತೇಜಃ ಪುಂಜರಾಗಿದ್ದರಿಂದ, ಕೌರವರಾದ ದುರ್ಯೋಧನಾದಿಗಳಿಗೆ ಪಾಂಡ ವರನ್ನು ಕಂಡರೆ ಕೆಂಡವನ್ನು ಕ೦ಡ೦ತಾಗುತ್ತಿದ್ದಿತು. ಈ ಮರೆಗೆ ತಂದೆಯಿಲ್ಲದ ತಬ್ಬಲಿಗಳಾಗಿ ಪಾಂಡವರು ಕಕ್ಕನ ಮನೆಯಲ್ಲಿ ಕಾಲಕಳೆಯುತ್ತಿರಲು, ಅವರು ಅನೇಕ ಕಷ್ಟ ಪರಂಪರೆಗಳಿಗೀಡಾಗ.