ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೦೩ ಮೊದಲನೇ -ನವಾಸ ಬೇಕಾಯಿತು; ಈ ಕಷ್ಟ ಪರಂಪರೆಗಳು ಕೊನೆಯ ವರೆಗೂ ಪಾ೦ಡವರ ಬೆಂಬಿಡದ್ದರಿಂದ ಯುದ್ಧಕ್ಕೆ ಮೊ ಳಿಕೆ ಹಾಕಿತು. ಪಾಂಡವರ ಬಾಲ್ಯ ಶಿಕ್ಷಣ:- ಈ ದ್ವೇಷವು ಮೊಳಕೆಯಲ್ಲಿ ಬೆಳೆ ಯುತ್ತಿದ್ದು ಕಣ್ಣಿಗೆ ಬೀಳದೆ, ಪಾಂಡವರ ಮತ್ತು ಕೌರವರ ವರಾ ಧ್ಯಯನವೂ, ಅಸ್ತ್ರವಿದ್ಯೆಯ ಹಿಂದೆಡೆಯಲ್ಲಿಯೇ ಕೃಪಾ ಚಾರ್ಯರ ಮುಖಾ೦ತರವಾದವು. ಆದರೆ, ಭರದ್ವಾಜಪುತ್ರರಾದ ದ್ರೋಣಾಚಾ ರ್ಯರು ದ್ರುಪದರಾ ಜನ ಸ೦ಗಡ ಜಗಳಾಡಿ ತಮ್ಮ ಅಸ್ಕರಾದ ಕೃಪಾ ಚಾರ್ಯರ ಬಳಿಗೆ ಬಂದು ನಿಂತರು. ದ್ರೋಣಾಚಾರ್ಯರು ಧನು ರ್ವಿದ್ಯೆಯಲ್ಲಿ ಪರಶುರಾಮನ ಶಿಷ್ಯರು; ಇ೦ಥ ಶ್ರೇಷ್ಠರಾದ ಅಸ್ತ್ರವಿದ್ಯಾ ಕುಶಲರು ಕರೆಕಳಿಸದೆ ಮನೆಯ ವರೆಗೆ ನಡೆಯುತ್ತ ಬಂದ ಒಳ್ಳೆ ಸಂಧಿಯನ್ನು ಸಾಧಿಸಿ, ಪಿತಾಮಹರಾದ ಭೀಷ್ಮಾಚಾರ್ಯರು ಅವರನ್ನು ತಮ್ಮ ಮೊಮ್ಮಕ್ಕಳಾದ ಪಾಂಡವ-ಕೌರವರಿಗೆ ಶಸ್ತ್ರವಿದ್ಯೆ ಕಲಿಸಲಿಕ್ಕೆ ತಮ್ಮಲ್ಲಿಯೇ ಇರಿಸಿಕೊಂಡು ಎಲ್ಲ ರಾಜಪುತ್ರರನ್ನು ದ್ರೋಣಾಚಾ ರ್ಯರ ಸ್ವಾಧೀನ ಪಡಿಸಿದರು. ಎಲ್ಲರ ಶಿಕ್ಷಣವು ಮುಗಿದ ನಂತರ ಹಿಂದಕ್ಕೆ ಒ೦ದಾನೊಂದು ಕಾಲಕ್ಕೆ ತಮ್ಮ ಗುರುಗಳ ಮಾನ ಭಂಗಪಡಿಸಿದ ದ್ರುಪದ ರಾಜನನ್ನು ಕೌರವ ಪಾಂಡವರು ಗುರುವಿನ ಆಜ್ಞೆಯ ಮೇರೆಗೆ ಸೋಲಿಸಿ, ಗು ರು ಗಳ ಮುಂದೆ ತಂದು ನಿಲ್ಲಿಸಿದರು. ಆಗ ದ್ರೋಣರು ದ್ರುಪದರಾ ಜ್ಯದೊಳಗಿನ ಕೆಲ ಭಾಗವನ್ನು ತೆಗೆದು ಕೊಂಡು ಅವನನ್ನು ಬಿಟ್ಟರು. ಮೊದಲನೇ ವನವಾಸ:- ಧೃತರಾಷ್ಟ್ರನು ಹಿರಿಯವನಾದ ಧರ್ಮ ರಾಜನಿಗೆ ಪಟ್ಟಗಟ್ಟಿದನು; ಧರ್ಮ ರಾಜನಲ್ಲಿ ಬೆಳಗುತ್ತಿದ್ದ ಪ್ರಭಾವಶಾಲಿ ಯಾದ ಧರ್ಮಬುದ್ಧಿಯೂ, ತಾಳ್ಮೆಯ, ಮಿಕ್ಕ ಬ೦ಧುಗಳಲ್ಲಿ ಎದ್ದು ಕಾ ಣಿಸಿ ಪರರ ಕಣ್ಣುಗಳನ್ನು ಮ೦ಜು ಮ೦ಜು ಗೊಳಿಸುತ್ತಿರುವ ಪರಾ ಕ್ರಮ ನೌಶೀಲ್ಯಾಧಿಗುಣಗಳೂ ಕೌರವರ ಮನಸಿನಲ್ಲಿ ನೆಡಲಾರಂಭಿಸಿ, ಅವರ ಬಗ್ಗೆ ಮತ್ಸರವನ್ನುಂಟು ಮಾಡಲು ಕಾರಣವಾದವು; ಈ ಮತ್ಸರ ವನ್ನು ರೇಗಿಸುವ ಕಾರ್ಯದೊಳಗೆ ದುರ್ಯೊಧನ ದುಃಶಾಸನಾದಿಗಳು ಮುಂದಾಳಾಗಿ ನಿಂತು ಒಂದಿಲ್ಲೊಂದು ಹಂಚಿಕೆ ಮಾಡಿ, ಪಾಂಡವ