ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜೀವಮಾನವು. ೧೨೩ ಭಾರತೀಯರ ಬಣ್ಣ:- ಆರ್ಯರಲ್ಲಿ ಶ್ಯಾಮ, ಗೌರ, ಹಾಗೂ ವೇತ (ಹಳ ದಿ) ಹೀಗೆ ಮೂರು ಬಣ್ಣದ ಜನರು ಇರುವರೆಂದು ವಿಂಗ ಡಿಸಿದ್ದಾರೆ; ಅರ್ಜುನ, ದೌಪದಿ, ಕೃಷ್ಣ ಇವರೆಲ್ಲರ ಮೈ ಬಣ್ಣವು ನಾದ ಗಪ್ಪು. ಈ ಬಗ್ಗೆ ಮಹಾಭಾರತದೊಳಗೆ ಆಶ್ರಮವಾಸಿ ಪರ್ವದೊಳಗೆ ಪಾಂಡವರ ವರ್ಣನೆಯಿದೆ; ಅದರ ಮೇಲಿಂದ ಯುಧಿಷ್ಠಿರನು ಚೊಕ್ಕ ಚಿನ್ನದಂತೆ ಕೆಂಪಗೆ, ಎತ್ತರ ನಿಲುವಿಕೆಯ ಬಲಕಟ್ಟಿನವನೂ, ದೊಡ್ಡ ಕಣ್ಣುಳ್ಳವನೂ, ನಿಡು ದಾದ ಮಗಿನವನೂ ಆಗಿದ್ದನು; ತಪ್ತ ಸುವರ್ಣ ದಂತೆ ಮೈ ಬಣ್ಣ, ಹರವಾದ ಎದೆ, ಪುಷ್ಟವಾದ ಹಗಲು, ಮೊಳಕಾಲಿನ ವರೆಗೆ ಉದ್ದ ಹಾಗೂ ಗಡು ತರ ತೋಳುಗಳುಳ್ಳ ಭೀಮಸೇನನು; ತಿಳೆ ಗಪ್ಪಿನವನ, ಸಿಂಹದಂತೆ ಎತ್ತರವಾಗಿರುವ ಎದೆಯ ವಸೂ, ತಾವರೆ ಗಣ್ಣಿನವನೂ ಆದ ವೀರ ಅರ್ಜುನನು. ರೂ ಸ ದಿಂದಲೂ ಬಲದಿಂದಲೂ ಅಸಮರೆನಿಸಿಕೊ೦ಡ೦ಥ ನಕುಲಸಹದೇವರು, ನೀಲೋತ್ಪಲದಂಥ ಮೈ ಬಣ್ಣದ ಕಮಲಪತ್ರಾಕ್ಷಿಯಾದ ಸದಿಯು; ಶುದ್ಧ ಸುವರ್ಣ ದ೦ತೆ ಮಿ೦ಚುವ ಸುಭದ್ರೆ, ಈಗಲೂ ನಮ್ಮ ಭಾರತದೊಳಗೆ ಮೇಲ್ಯಾ ಣಿಸಿದಂತೆ ಎಲ್ಲ ಬಣ್ಣದ ಜನರು ಕಾ ಣಿಸು ತ್ತಾರೆ. ಜೀವನಾನವು:- ಭಾರತ ಕಾಲಕ್ಕೆ ಆರ್ಯರಾಷ್ಟ್ರವು ಧನಧಾನ್ಯ ಸಂಪನ್ನವಾಗಿತ್ತೆಂದು ಹಿಂದೆ ಹೇಳಿದ್ದೇವೆ. ಬರಗಾಲ, ಅನಾವೃಷ್ಟಿ ಎಂಬೀ ತೆರದ ವಿಪತ್ತು ಗಳು ಈಗಿನವರಂತೆ ಅವರಿಗೆ ಪ್ರತಿಯೊಂದು ವರ್ಷ ಬಂದು ಬೆನ್ನು ಹತ್ತುತ್ತಿರಲಿಲ್ಲ; ಪ್ರಾಯಶಃ ಸು ಕಾಲವೇ ಹೆಚ್ಚು. ಹೊರ್ತಾಗಿ ಭಾರತೀಯ ಆರ್ಯರು ಇರುವ ಗ೦ಗಾಯ ಮು ನೆಗಳ ಕೊಳ್ಳವು ಮನುಷ್ಯನ ಶರೀರಸ್ವಾಕ್ಕೆ ಪುಷ್ಟಿ ಕರವಾಗಿರೋದರಿ೦ದ ಸಾಧಾರಣವಾಗಿ ಭಾರತೀಯ ಆರ್ಯರು ದೀರ್ಘಾಯುಷಿಗಳಿದ್ದರು; ತಪಶ್ಚರ್ಯೆಯ ಬಲದಿಂದ ಸಾವಿರಾರು ವರ್ಷ ಬಾಳುತ್ತಿರುವಂಥ ಹಲವು ಜನರನ್ನು ಬಿಟ್ಟರೂ ಸಾಮಾನ್ಯ ಜನರು ೧೦೦-೧೨೫ ವರ್ಷ ಬಾಳೆಯೆ ಬಾಳುತ್ತಿದ್ದರು. ಭಗವಾನ್ ಶ್ರೀ ಕೃಷ್ಣನ ವಯ ಾ ಯುದ್ಧ ಕಾಲದಲ್ಲಿ ೮೩ ವರ್ಷವಿದ್ದಿ ತು; ಅರ್ಜುನನ ವಯಸ್ಸು ೬೩; ೬೩ ನೇ ವರ್ಷವೆಂದರೆ, ನಮ್ಮಲ್ಲೇಗ ಮನುಷ್ಯನು ರಣಾಂಗಣದ ಹೆಸರೆತ್ತುವದಂತೂ