ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರ್ಯರ ವರ್ಣವ್ಯವಸ್ಥೆ, ೧of ರಾಮಾಯಣ ಮಹಾಭಾರತದಂಥ ಮಹಾ ಕಾವ್ಯಗಳೂ ಇವೆಲ್ಲವು ಅಮೂಲ್ಯವಾದ ಕೊಹಿನೂರ' ವಜ್ರಗಳಾಗಿವೆ; ಈ ಪಿತ್ರಾರ್ಜಿತ ವಾದ ಆಸ್ತಿಯನ್ನು ಹಲವು ಸಾವಿರ ವರ್ಷಗಳಿ೦ದ ಕ೦ಠಸ್ಥವಾಗಿಟ್ಟು ಕೊಂಡು, ಅದನ್ನು ನಮಗೀಗ ಕೊಟ್ಟಿದ್ದಕ್ಕಾಗಿ ಬುನಾದಿಯ ಆರ್ಯ ಬ್ರಾಹ್ಮಣರಿಗೆ ಪ್ರತಿಯೊಬ್ಬ ಆರ್ಯನು ಖು ೬ನೆಯಾಗಿರಲಿಕ್ಕೆ ಬೇಕು; ಇರಲಿ, ಪ್ರತಿಯೊಂದು ಸಮಾಜದೊಳಗೆ ಒಂದಿಲ್ಲೊಂದು ವಿಧವಾಗಿ ವರ್ಣ ವ್ಯವಸ್ಥೆಯ ಬೀಜವು ಇದ್ದೆ ಇರುವದು. ಆದರೆ ಕೆಲ ವಡೆಯಲ್ಲಿ ಅದು ಕಟ್ಟು ನಿಟ್ಟಾಗಿ ನಿರ್ಬ೦ಧವಾಗಿರುತ್ತದೆ; ಕೆಲವೆಡೆ ಯಲ್ಲಿ ಅಷ್ಟು ಕಟ್ಟಾಗಿರುವದಿಲ್ಲ; ಮನುಪೈನು ರೂಢಿ ಪ್ರಿಯನು; ಪ್ರಾಯಿ ಕವಾಗಿ ತ೦ದೆ ಮಾಡುತ್ತಿರುವ ಕಸಬನ್ನೆ ಮನುಷ್ಯನು ಕೈಕೊಳ್ಳು ವನು; ಒಂದು ದೃಷ್ಟಿ ಬಿ ದ ಅಜ್ಜ ಮುತ್ತಾತಂದಿರು ಮಾಡುತ್ತಿರುವ ಉದ್ಯೋಗವನ್ನೆ ಮಕ್ಕಳು ಮುಮ್ಮಕ್ಕಳು ಮಾಡುತ್ತಿದ್ದರೆ, ಅವರ ರಕ್ತದಲ್ಲಿ ಪಿತ್ರಾರ್ಜಿತವಾಗಿ ನೆಲೆಸಿರುವ ಅನುವಂಶಿಕವಾದ ಸಂಸ್ಕಾರ ಗಳು ಅವರ ಬುದ್ಧಿವಿಕಾಸಕ್ಕೆ ಆಸ್ಪದವಾಗುತ್ತದೆ. ಋಗ್ವದ ಕಾಲಕ್ಕೆ ಎರಡೇ ಜಾತಿಗಳಿದ್ದವು; ಹೀಗಿದ್ದರೂ ಆಗ ಆ ಬಗ್ಗೆ ಕಾದ ನಿರ್ಬಂಧ ಗಳಾಗಿರಲಿಲ್ಲ; ಮು೦ದೆ ಜನಸಂಖ್ಯೆಯು ಬೆಳೆದು ಹಲವು ಜನರದೊಂದು ವ್ಯವಸಾಯವೆ೦ಬ ನಿಯಮವಾಗುವ ವರೆಗೆ ಹೀಗೆ ನಡೆದಿತ್ತು. ಮುಂದೆ ವೈಶ್ಯ ವರ್ಣವೊಂದು ಉತ್ಪನ್ನವಾಯಿತು. ಆ ಕಾಲದಲ್ಲಿ ಬ್ರಾಹ್ಮಣರು ಎರಡೂ ವರ್ಗದವರ ಹೆಂಗಸರನ್ನು ಮದುವೆಯಾಗಬಹುದಾಗಿತ್ತು; ಕ್ಷತ್ರಿಯರು ಬ್ರಾಹ್ಮಣ ಹಾಗೂ ವೈಶ್ಯ ಹೆಂಗಸರನ್ನು ಮದುವೆಯಾಗು ತಿದ್ದರು. ವೈಶ್ಯರು ಮಾತ್ರ ವೈಶ್ಯರನ್ನೇ ಲಗ್ನ ಮಾಡಿಕೊಳ್ಳಬೇಕೆಂದು ನಿರ್ಬ೦ಧವಿತ್ತು; ಶೂದ್ರವೆಂಬು ದೊ೦ದು ವರ್ಣವು ಆರ್ಯಸಮಾಜದೊ ಳಗೆ ತಲೆಯೆತ್ತಿರ ಕೂಡಲೇ, ಶೂದ್ರ ಸ್ತ್ರೀಯರನ್ನು ಆರ್ಯರು ವಿವಾಹ ಮಾಡಿಕೊಳ್ಳ ಬಹು ದೊ, ಕೂಡರೋ ಎಂಬ ಬಗ್ಗೆ ಘನವಾದ ಚರ್ಚೆ ನಡೆಯಿತು. ಬಹು ತರವಾಗಿ ಆರ್ಯರೆಲ್ಲರೂ ಇದಕ್ಕೆ ವಿರೋಧಿಗಳಾ ಗಿಯೇ ಇದ್ದರು; ವೈಶ್ಯರು ಬಹು ತರವಾಗಿ ಒಕ್ಕಲತನದ ಬೇಸಾಯ ವನ್ನೇ ಕೈ ಕೊಂಡು ತಮ್ಮ ಬದುಕನ್ನೆಲ್ಲ ಹೊಲಗದ್ದೆಗಳಲ್ಲಿಯೇ ನಾಗಿಸಿ