ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಾಮಾಜಿಕ ಪರಿಸ್ಥಿತಿ ೧೨೧ ಧರ್ಮದ ಪಲ್ಲವಿಯು, ಮತ್ತು ಮನಸು ಯಾವಾಗಲೂ ವಿಷಯಗಳ ಕಡೆಗೆ ಧಾವಿಸುತ್ತಿರುವದರಿಂದ ಅದರ ಮಬ್ಬಿಗೆ ಬೀಳದೆ, ನಮ್ಮೊಡನೆ ಕಣ್ಣು ಮುಚ್ಚಾಲೆಯಾಡುತ್ತಿರುವ ಭಗವಂತನನ್ನು ಎಡೆಬಿಡದೆ ಹೃದಯ ದೊಳಗಿಟ್ಟು ಕೊಂಡು ಭಜಿಸುತ್ತಿರುವದೇ ಜೀವಮಾನದ ಅತ್ಯಂತ ಶ್ರೇಷ್ಠವಾದ ಗುಟ್ಟೆಂದು ಆರ್ಯ ಋಷಿಗಳು ನಾರಿ ನಾ ಡಂಗುರ ಹೊಯ್ತಿರುವರು. ಅರ್ಯ ಹಾಗೂ ಬೇರೆ ಜನಾ೦ಗಗಳಲ್ಲಿ ಒಡೆದು ಕಾಣಿಸುವ ಹತ್ತು ಕಡಿಮೆ ಇದೊ೦ದೇಆರ್ಯಸಂಸ್ಕೃತಿಯ ವೈಶಿಷ್ಟವ. ಇವೆರಡ ಆಶ್ರಮಗಳು ಆರ್ಯ ಧರ್ಮವೆಂಬ ವೃಕ್ಷದ ಸವಿ ಸವಿಯಾದ ಹಣ್ಣು ಹಂಪಲಗಳನ್ನು ಸವಿದು ತೇಗುವ ಸುಗ್ಗಿಯ ಕಾಲಗಳಾಗಿವೆ. ಈ ಮೇರೆಗೆ ಆರ್ಯರ ವರ್ಣಾಶ್ರಮದ ಪಡಿಯಚ್ಚು ಮನುಷ್ಯ ಜಾತಿಯ ತಿದ್ದುಪಡಿಗೆ ಅತ್ಯಂತ ನಾ ಧಕವೂ, ಸಹಕಾರಿಯ ಆಗಿದೆ. ಭಾರತ ಕಾಲಕ್ಕೆ ಈ ಸ್ಥಿತಿಯು ನಾರೊ (ದ್ವಾರವಾಗಿಯೂ, ಎಡೆ ಬಿಡದೆಯ, ನಡೆದಿತ್ತು. ಆದರೆ ಅದು ಕಲಿಕಾಲದ ಉಗ್ರಪ್ರಭಾ ವಕ್ಕೆ ಬೆದರಿ ಬಿಕ್ಕಿ ಬಿದ್ದಿದೆ. ಈಗಣ ಆರ್ಯಸಮಾಜದೊಳಗೆ ಈ ತೆರದ ಪೂರ್ವದ ಆಶ್ರಮ ಪದ್ಧತಿಯು ಬಿದ್ದು ನೆಲಸಮವಾಗಿದ್ದರೂ, ಇದ್ದು ಬಿದ್ದ ಚೂರು ಕಾರು ಧರ್ಮ ಬಂಧನಗಳಿಂದಲೇ ಜೀವ ಹಿಡಿದು ಕೊಂಡಿದೆ ಹೊ ರ್ತು ಬೇರೆ ಆಧಾರವಿಲ್ಲ. ಸಾಮಾಜಿಕ ಪರಿಸ್ಥಿತಿ:-ಆರ್ಯರ ಸಮಾ ಜದ ಸ್ಥಿತಿಯು ಪೂರ್ವ ಕಾಲದಿಂದಲೂ ಬದಲಾಗುತ್ತ ಬಂದಿದೆ. ಋ ಗೋರಕಾಲದಿಂದಲೂ ಆರ್ಯಸಮಾಜದ ಸ್ಥಿತಿಯು ಹೀಗೆ ಮಾರ್ಪಡುತ್ತ ಬಂದಿದ್ದರೂ, ಬಹು ಕಾಲದ ವರೆಗೆ ಸಮಾಜವು ಬಾಳು ವದಿದ್ದರೆ, ಅದು ಯಾವ ಸ್ಥಿತಿಯಲ್ಲಿರ ತಕ್ಕದ್ದು, ಎ೦ದ ನಿಯಮ ನಿರ್ಬ೦ಧಗಳಿಂದ ಕಟ್ಟಲ್ಪಟ್ಟಿರಲಿಕ್ಕೆ ಬೇಕೆ೦ ಬುದು ಆರ್ಯರ ಮೆಲು ನಂಕ್ತಿಯಿಂದ ಸ್ಪಷ್ಟವಾಗಿದೆ. ಆರ್ಯಸಮಾಜ ದೊಳಗೆ ಅದರ್ಶ ಭೂ ತವಾದ ಸಾಮಾಜಿಕ ಪದ್ಧತಿಯ ಉ೦ಟು. ಅದು ದರಿಂದ ಪ್ರತಿಯೊಬ್ಬರೂ ಪ್ರತಿಯೊಂದು ಕಾಲದಲ್ಲಿ ಆರ್ಯರು ನಡೆದ ನಡೆಯಲ್ಲಿಯೇ ಹೆಜ್ಜೆಯಿಟ್ಟು ನಡೆಯುತ್ತಾರೆ. ಪರಸಂಸ್ಕೃತಿಯ ವರ ಸಂಸರ್ಗದಿಂದ ಒಂದು ವೇಳೆ ನಮ್ಮ ಜನರು ತಮ್ಮ ಸಾಮಾಜಿಕ ಸ್ಥಿತಿಯ