ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೨೨
ಭಾರತೀಯರ ಇತಿಹಾಸವು.

ವಿಷಯದಲ್ಲಿ ಕೆಲಮಟ್ಟಿಗೆ ಕಲುಷಿತದೃಷ್ಟಿಯವರಾಗಿದ್ದರೂ, ಅರ್ಯರ ಸಮಾಜ ಪದ್ಧತಿಯಿಂದ ಹಿಂದೂದೇಶದೊಳಗೆ ಎಷ್ಟು ಪತಿವ್ರತೆಯರು ಮೈದೋರಿರುವರೋ, ಅ೦ಧವರು, ಅಥವಾ ಅವರಿಗೆ ಸರಿಗಟ್ಟುವಂಥವರು ಯಾವ ಜನಾ೦ಗದ ಇತಿಹಾಸದೊಳಗೆ ನೋಡಿದರೂ ದುರ್ಲಭರೇ ಸರಿ! ಅಂದಮೇಲೆ ಅ೦ಥ ಸಮಾಜಸ್ಥಿತಿಯು ಮಿಕ್ಕ ಜನಾಂಗದವರಿಗಾಗಲಿ, ಆರ್ಯರಿಗಾಗಲಿ ಮೇಲುಪಂಕ್ತಿಯಾಗಲಿಕ್ಕೆ ತಕ್ಕದುದಲ್ಲವೆಂದು ಯಾವ ನಾಲಿಗೆಯಿ೦ದಾಡುವದು ? ಅರ್ಥಾತ್, ಆರ್ಯಸಮಾಜದ ನಡೆಗಳು ಸಮಾಜದ ಬೆಳುವೆಗೆ ಪೋಷಕವೂ, ಬೇರೆ ಜನಾಂಗದವರಿಗೆ ಅನುಕರಣೀಯವೂ ಆಗಿದ್ದವೆನ್ನಲಿಕ್ಕೇನೂ ಅಡ್ಡಿಯಿಲ್ಲ..

ವಿವಾಹ ಪದ್ಧತಿ:- ವಿವಾಹ ಪದ್ಧತಿಯು ಸಮಾಜ ಸಂಸ್ಕರಣೆಯ ಮೊದಲನೇ ಅಂಗವಾಗಿದೆ. ಭಾರತಕಾಲದಲ್ಲಿ ಆರ್ಯರ ವಿವಾಹ ಪದ್ಧತಿಯು ಹೇಗಿತ್ತು; ಮು೦ದೆ ಅದು ಹೇಗೆ ಬದಲಾಗುತ್ತ ಹೋಯಿತೆಂಬುದರ ವಿವರಣೆಯನ್ನು ಮಾಡಿ, ಅದರಿಂದೇನು ಫಲನಿಷ್ಪತ್ತಿಯಾಯಿತೆಂಬುದನ್ನು ನಮಗೀಗ ನೋಡಬೇಕಾಗಿದೆ. ಉದ್ದಾಲಕಋಷಿಯ ಮಗನಾದ ಶ್ವೇತುಕೇತುವೇ ಎಲ್ಲಕ್ಕೂ ಪ್ರಾರಂಭದಲ್ಲಿ ವಿವಾಹದ ಮರ್ಯಾದೆಯನ್ನು ಕಲ್ಪಿಸಿದನು. ಅಂದಿನಿಂದ ಮದುವೆಯ ನಡತೆಯು ಬಳಿಕೆಯಲ್ಲಿ ಬಂದಿತು. ಭಾರತೀಯಕಾಲದ ಮದುವೆಯ ಆಚಾರವನ್ನು ಮಹಾಭಾರತಾದಿಗಳ ಮೇಲಿಂದ ಓದಿ ತಿಳಿದುಕೊಳ್ಳಲು, ಆಗ್ಗೆ ಪ್ರಾಯಿಕವಾಗಿ ಹೆಣ್ಣುಮಕ್ಕಳು ದೊಡ್ಡವರಾಗುವ ತನಕ ತ೦ದೆ ಅಥವಾ ಸೋದರರು ಅವರನ್ನು ಜೋಕೆಮಾಡಿ, ಅವರಿಗೆ ಓದಲಿಕ್ಕೂ ಬರೆಯಲಿಕ್ಕೂ ಕಲಿಸುವದಲ್ಲದೆ, ರಾಜರ ಮಕ್ಕಳಿಗೆ ಲಲಿತಕಲೆಯ ಅಂದರೆ ಸಂಗೀತ, ನೃತ್ಯ, ವಾದ್ಯ ಮೊದಲಾದವುಗಳನ್ನು ಕಲಿಸುತ್ತಿದ್ದರು. ಸ್ತ್ರೀಯರಿಗೆ ವೈದಿಕವಿದ್ಯೆಯನ್ನು ಅಭ್ಯಾಸಿಸುವ ಅಧಿಕಾರವಿಲ್ಲದಿದ್ದರೂ, ಸ್ತ್ರೀಯಿಲ್ಲದೆ ಪುರುಷನಿಗೆ ಯಜ್ಞಯಾಗಾದಿಗಳನ್ನು ನಡೆಯಿಸಲಿಕ್ಕೆ ಅಧಿಕಾರವಿರಲಿಲ್ಲ. ಮಹಾಭಾರತದೊಳಗೆ ಕ೦ಡುಬರುವ ವಿವಾಹಗಳೆಲ್ಲ ಪ್ರೌಢವಿವಾಹಗಳೇ ಆಗಿವೆ. ಸ್ವಯ೦ವರದ ನಡುವಳಿಕೆಯೂ ಒಳ್ಳೇ ಭರದಲ್ಲಿತ್ತು. ಆರ್ಯಸ್ತ್ರೀಯರಿಗೆ ಪತಿಯೇ ಹೆಚ್ಚಿನ ದೇವತೆಯೆಂಬ