ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೨೪
ಭಾರತೀಯರ ಇತಿಹಾಸವು.

ಅಥವಾ ಗಂಧರ್ವಪದ್ಧತಿಯಿಂದಲೋ, ಸ್ವಯ೦ವರಪದ್ಧತಿಯಿಂದಲೋ ಮದುವೆ ಮಾಡಿಕೊಳ್ಳುತ್ತಿದ್ದರು. ಇವುಗಳಿಗೆ ಶಕುಂತಲೆದುಷ್ಯಂತ, ಸಾವಿತ್ರಿ ಸತ್ಯವಾನ, ದ್ರೌಪದಿಪಾ೦ಡವ, ನಲದಮಯ೦ತಿ ಮೊದಲಿಗರ ಉದಾಹರಣೆಗಳೇ ಸಾಕು. ಅಸುರವಿವಾಹವೆಂದರೆ, ಕನ್ಯೆಯನ್ನು ಕೊ೦ಡುಕೊಳ್ಳುವದು. ಈ ಪದ್ಧತಿಯು ನಿಜವಾಗಿಯೂ ಮೊದಲು ಅಸುರರೆಂದು ಹೆಸರು ಪಡೆದ ಇರಾಣೀಜನರಿಂದ ನಮ್ಮಲ್ಲಿ ಸೇರಿಕೊ೦ಡಿತು. ಈ ಅಸುರಕನ್ಯೆಯರು ಅತಿಶಯ ರೂಪಲಾವಣ್ಯಸಂಪನ್ನರಿರುವ ಮೂಲಕ ಅನೇಕ ಅರಸರು ಅವರನ್ನು ಮದುವೆಯಾಗುತ್ತಿದ್ದರು. ಮಾದ್ರೀ, ಹಾಗೂ ಕೇಕಯರಾಜರು ಅಸುರವಂಶಕ್ಕೆ ಸಂಬಂಧಪಟ್ಟವರಾದರೂ ರೂಪ ಸಂಪನ್ನರಾದ್ದರಿ೦ದ ಆರ್ಯಕುಲ ಕ್ಷತ್ರಿಯರು ಅವರನ್ನು ಮದುವೆ ಮಾಡಿಕೊಂಡಿದ್ದರು. ದಶರಥನು ತನ್ನ ರಾಜ್ಯದೊಳಗಿನ ಎಷ್ಟೋ ಭಾಗವನ್ನು ಕೈಕೇಯಿಯ ತಂದೆಗೆ ಕೊಟ್ಟು ಮದುವೆಯಾಗಿದ್ದನೆಂದು ತಿಳಿಯುತ್ತದೆ. ಭೀಷ್ಮನು ಶಲ್ಯದೇಶದ ಮಾದ್ರಿಯನ್ನು ಪ೦ಡುರಾಜನಿಗೆ ಮದುವೆ ಮಾಡಿ, ಶಲ್ಯನಿಗೆ ಹೇರಳವಾಗಿ ದುಡ್ಡು, ಆಭರಣ, ಆನೆ, ಒಂಟೆ, ಮುತ್ತು ರತ್ನಾದಿಗಳನ್ನು ಅರ್ಪಿಸಿದ ಸ೦ಗತಿಯು ಭಾರತದಲ್ಲಿದೆ; ಹೀಗಿದ್ದರೂ, ಈ ವಿವಾಹ ರೂಢಿಯು ನಿಂದ್ಯವಾಗಿ ಪರಿಣಮಿಸಲ್ಪಟ್ಟತ್ತೆಂದು ಹಲವರ ಈ ಉದ್ಗಾರಗಳಿಂದ ತಿಳಿಯುತ್ತದೆ. ಇನ್ನು ಳಿದದ್ದು ರಾಕ್ಷಸವಿವಾಹ; ಈ ನಡೆಯು ವಿಶೇಷವಾಗಿ ರಾಕ್ಷಸಕುಲದವರಲ್ಲಿಯೇ ಇದ್ದುದರಿಂದ ಅದಕ್ಕೀ ಹೆಸರು ಬಂದಿದೆ; ಕನ್ಯೆಯ ಮನೆಯವರೊಡನೆಯೂ, ನೆಂಟರೊಡನೆಯೂ ಬಡಿದಾಡಿ ಕಡಿದಾಡಿ, ಅವರು ಅಳುತ್ತಿರುವಾಗ ಕನೈಯನ್ನು ಎಳೆದುಕೊ೦ಡೊಯ್ಯುವ ಈ ವಿವಾಹಕ್ಕೆ ರಾಕ್ಷಸವೆಂದು ಹೆಸರು ಬಂದಿರುವಲ್ಲೇನೂ ಆಶ್ಚರ್ಯವಿಲ್ಲ. ನರಮಾಂಸ ಭಕ್ಷಿಸುತ್ತಿರುವ ಮೂಲನಿವಾಸಿಗಳಾದವರೇ ರಾಕ್ಷಸರು; ಅವರಲ್ಲಿಯೇ ವಿಶೇಷವಾಗಿ ಇದು ಹರಡಿಕೊಂಡಿತ್ತೆಂಬುದಕ್ಕೆ ರಾವಣನ ಉದಾಹರಣೆಯೇ ಸಾಕಿದೆ. ಪ್ರಾಚೀನ ಕಾಲದಲ್ಲಿ ಅರ್ಜುನ ಮೊದಲಾದವರು ರಾಕ್ಷಸೀರೀತಿಯಿಂದ ಕನ್ಯೆಯನ್ನು ತಮ್ಮ ಮನೆಗೆ ಎಳೆದು ಕೊಂಡು ಬಂದರೂ, ವಿವಾಹವು