ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೨೫
ಪತಿಪತ್ನಿಯ ಸಂಬಂಧ

ಬ್ರಾಹ್ಮಪದ್ಧತಿಯಿಂದಲೇ ಆಯಿತೆಂಬುದನ್ನು ಮರೆಯಲಾಗದು. ಅರ್ಯವಿವಾಹದೊಳಗೆ 'ಸಪ್ತಪದಿ'ಯೇ ಮುಖ್ಯವಿದ್ದು, ಅದಾಗದಿದ್ದರೆ, ಕನ್ಯೆಗೆ ಮತ್ತೊಬ್ಬ ವರನನ್ನು ಆರಿಸಲಿಕ್ಕೆ ಬರುತ್ತದೆ.

ಪತಿಪತ್ನಿಯ ಸ೦ಬ೦ಧ:- ಭಾರತ ಕಾಲದೊಳಗೆ ಸ್ತ್ರೀಯರು ದೊಡ್ಡವರೂ ತಿಳಿದವರೂ ಇರುತ್ತಿದ್ದುದರಿಂದಲೇ ಅವರಿಗೆ ಸ್ವಯಂವರದ ಅಧಿಕಾರವನ್ನು ಕೊಟ್ಟಿದ್ದರು; ಮತ್ತು ಅದರ೦ತೆ ಮದುವೆಯಾಗಿ, ಅವರು ಗಂಡನ ಮನೆಗೆ ಬಂದೊಡನೆ, ಅವರಿಗೆ ಸ್ವಾತಂತ್ರ್ಯವಿರುತ್ತಿತ್ತು. ಅವರನ್ನು ಎಲ್ಲರೂ ಆದರದಿಂದ ಕಾಣುತ್ತಿದ್ದರು. ದ್ರೌಪದಿಯ ಮಾತನನ್ನೇ ದೃಷ್ಟಾಂತಕ್ಕೆಂದು ಇಟ್ಟುಕೊ೦ಡರೆ, ಮದುವೆಯ ಕಾಲಕ್ಕೆ ಅವಳು ದೊಡ್ಡವಳಿದ್ದು ಎಷ್ಟೆಷ್ಟೂ ಅ೦ಜದೆ ಅಳುಕದೆ ರಾಜ ಸಭೆಯಲ್ಲಿ ಬಂದಳೆಂದು ಭಾರತದಲ್ಲಿದೆ. ಭಾರತದೊಳಗೆ ವ್ಯಾಸರು ದೌಪದಿಗೆ 'ಬ್ರಹ್ಮವಾದಿನೀ ಪಂಡಿತಾ' ಎಂಬ ಬಿರುದು ಕೊಟ್ಟಿದ್ದೇನೂ ಚಂದಕ್ಕಲ್ಲ; ಅವಳಲ್ಲಿ ಅಂಥ ಯೋಗ್ಯತೆ ಇದ್ದಿತು; ರಾಜಕೀಯ ವಿಷಯ, ಧಾರ್ಮಿಕ ವಿಷಯಗಳನ್ನು ಕುರಿತು ನದಿಯು ಹಲವು ಸಾರೆ ಧಾರಾಳವಾಗಿ ಪತಿಗಳೊಡನೆ ಚರ್ಚೆ ಮಾಡಿದ್ದಾಳೆ; ಹೊತ್ತು ಬಂದಾಗ್ಗೆ ಹಕ್ಕಿನಿಂದ ಅತ್ಯಂತ ಸ್ಪೂರ್ತಿ ಬರುವ೦ಥ ಬೋಧನೆಯನ್ನು ಮಾಡಲಿಕ್ಕೆ ಹಿಂದು ಮುಂದೆ ನೋಡಲಿಲ್ಲ. ಆರ್ಯಸ್ತ್ರೀಯರು ಪತಿಗಳೊಡನೆ ಕೆಲ ಹೊತ್ತು ಹೆಂಡತಿಯ೦ತೆಯ, ಕೆಲಕಾಲ ಯೋಚನೆ ಹೇಳುವ ಮಂತ್ರಿಯಂತೆಯೂ, ಗೆಳೆಯನಂತೆಯೂ, ಶಿಷ್ಯನಂತೆಯೂ ಇರಬೇಕೆಂದು ಹೇಳಿದ ಮಾತಿಗೆ ದ್ರೌಪದಿಯು ಮೆಲು ಪಂಕ್ತಿಯಾಗಿದ್ದಳು. ಪ್ರತಿ ಪತ್ನಿಯ ಸ೦ಬ೦ಧವು ದೃಢವಾಗಿರಲಿಕ್ಕೆ ಬಹುಅ೦ಶದಿ೦ದ ಸ್ತ್ರೀಯರ ಪತಿವ್ರತಾ ಧರ್ಮವೇ ಕಾರಣವು. ಅದು ಪತಿಪತ್ನಿಯರ ಸೌಹಾದ್ರ್ಯವು ಬೆಳೆಯಲಿಕ್ಕೆ ನೀರೆರೆದಂತಾಗುತ್ತದೆ. ಆದುದರಿ೦ದ ಪತಿಗಳು ಒಂದು ವೇಳೆ ಕೆಟ್ಟರೂ, ಪತ್ನಿಯರ ಪತಿವ್ರತಾ ಧರ್ಮವು ಕೆಡಕೂಡದೆಂದು ಆರ್ಯರ ನಿರ್ಬ೦ಧ; ಪತಿಯ ಆರ್ಯಮಹಿಳೆಯರ ಜೀವನ ಸರ್ವಸ್ವ. ಆರ್ಯಮಹಿಳೆಯು ತನ್ನ ಪತಿಯ ರೂಪಲಾವಣ್ಯಾದಿ ಹೊರಗಣ ಸೌಂದರ್ಯಕ್ಕೆ ಬೆಲೆ ಕೊಡುವದಿಲ್ಲ. ಅವಳು ಒಳಗಿನ ಆತ್ಮಕ್ಕೆ ಬೆಲೆ