ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೨೮ ಭಾರತೀಯ ಇತಿಹಾಸವು. ಈ ತರದ ಚರ್ಚೆಯು ನಡೆದು ಯಜ್ಞದ ವಿಷಯದಲ್ಲಿ ಒಂದು ವಿಧವಾಗಿ ತಿರಸ್ಕಾರಭಾವವುಂಟಾಗಹತ್ತಿ ಹೊಡನೆ, ಅದಕ್ಕೆ ಅನುಕೂಲವಾಗು ವಂಥ ಅನೇಕ ಸಂಗತಿಗಳು ಒದಗಲಾರಂಭಿಸಿದವು. ಒಂದಾನೊಂದು ಕಾಲಕ್ಕೆ ಇಂದ್ರನು ಯಜ್ಞ ಹೂಡಿದ ಸಮಯದಲ್ಲಿ, ಸಬ ವನ್ನು ಕೊಲ್ಲುವ ವೇಳೆ ಬಂದಿತು; ಆಗ್ಗೆ ಆ ವಧ್ಯ ಪಶುವು ಬಹು ಕಳವಳ ಗೊ೦ಡು ತನ್ನನ್ನು ಕೊಲ್ಲುವ ಋಷಿಗಳ ಕಡೆಗೆ ನೋಡಹತ್ತಿತು. ಆಗ ಋಷಿ ಗಳಿಗೆ ಕನಿಕರ ಒಡೆದು, ಈ ಯಜ್ಞ ವು ಧಾರ್ಮಿಕವಲ್ಲೆಂದು ಇಂದ್ರನಿಗೆ. ಹೇಳಿ, ಯಜ್ಞ ಮಾಡಬೇಕಾದರೆ ಮೂರು ವರ್ಷದ ಹಳೆಧಾನ್ಯದಿಂದ ಯಜ್ಞ ಮಾಡೆಂದು ಹೇಳಿದರು. ಅದು ಇಂದ್ರನಿಗೆ ಸರಿ ತೋರದೆ, ಅದೊಂದು ವಾದಕ್ಕೆ ಕಾರಣವಾಯಿ ತು; ಮು೦ದೆ ಈ ಪ್ರಶ್ನವು ವಸು ರಾ ಜನ ಕಡೆಗೆ ತೀರ್ಮಾನಕ್ಕಾಗಿ ಹೋಗಲು, ಅವನು ಸಿದ್ಧವಿರುವ ಅನ್ನ ದಿಂದ ಯಜ್ಞ ಕಾರ್ಯ ನೆರವೇರಿಸಬೇಕೆಂದು ಹೇಳಿ ರು ವನು. ಆದರೂ ಯಜ್ಞ ರೊಳಗೆ ಮಾಡಿದ ಹಿಂಸೆಯು ಹಿಂಸೆಯ ಲ್ಲವೆಂದು ಋಷಿ ಗಳ ತಿಳಿವಳಿಕೆಯಿದ್ದುದರಿಂದ ಅವು ಪೂರ್ಣವಾಗಿ ನಿಲ್ಲಲಿಲ್ಲ. ಅ೦ತೂ ಭಾರತದ ಕಾಲಕ್ಕೆ ಇನ್ನೂ ಸಾಮಾನ್ಯ ಬ್ರಾಮ್ಮಣ, ಕ್ಷತ್ರಿಯ, ವೈಶ್ಯರಲ್ಲಿ ಮಾಂಸ ತಿನ್ನುವದರ ಕಡೆಗೆ ಮನಸ್ಸು ಹರಿಯುತ್ತಿದ್ದರೂ ತಿನ್ನ ಬಾರ ದೆಂಬು ವ ಂದು ಪಕ್ಷವು ಅಗ ಮೆಲ್ಲಗೆ ಬೆಳೆಯುತ್ತಿತ್ತು; ಇದು ಅಧ್ಯಾ ತಿಕವಾದಿಗಳ ಪಕ್ಷವಿತ್ತು; ಭಾರತೀಯ ಆರ್ಯರು ಮಾ೦ಸಕ್ಕೆ ಎಂದು ಬಹಿಷ್ಕಾರ ಹಾಕಿದರೆ, ಅ೦ದಿನಿ೦ದ, ಅವರ ಅವನತಿಗೆ ಮೊಳಕೆ ಹಾಕಿತೆಂದು ಒಬ್ಬ ಪಾಶ್ಚಾತ್ಯ ಇತಿಹಾಸಗಾರನು ನುಡಿದಿರು ವನು. ಕಾತ್ರವೃತ್ತಿಯ ಜನರು ಮಾಂಸಾಹಾರವನ್ನು ಮಾಡಲಿಕ್ಕೇನೂ ಅಡ್ಡಿಯಿಲ್ಲವೆಂದು ಸ್ವಾಮಿ ವಿವೇಕಾನಂದಾ ದಿಗಳು ಸಹ ಹೇಳಿರುವರು? ಕ್ಷತ್ರಿಯ ರಲ್ಲಿ ಮದ್ಯವನ್ನು ಕುಡಿಯುವವರು ಕೆಲವರಿದ್ದರೂ, ಬ್ರಾಮ್ ಣರು ಮದ್ಯ ಕುಡಿಯುವದೆಂದರೆ ಪ೦ಚಮಹಾ ಪಾಪಗಳಲ್ಲೊಂದು ಎಂದು ಜರಿಯುತ್ತಿದ್ದರು. ಮೇಲಿನ ವಿಷಯವನ್ನು ಬಿಟ್ಟು, ಇನ್ನು ನಾಧಾರಣವಾಗಿ ಎಲ್ಲ ಜನರು ತಿನ್ನುಣ್ಣುವ ಆಹಾರವೇನೆಂಬುದನ್ನು ನೋಡುವಾ- ಅಕ್ಕಿ,