ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೩೦
ಭಾರತೀಯರ ಇತಿಹಾಸವು.

ಧೋತರವು. ಎರಡೇ ನಾದಾಧೋತರಗಳಿಂದ ಇಡೀ ಮೈಯನ್ನೆಲ್ಲ ಮುಚ್ಚುವ ಈನಡವಳಿಕೆಯು ಗ್ರೀಕ, ರೋಮನ್ನಜನರಲ್ಲಿಯೂ ಇದ್ದಿತು. ಅದರೂ, ಇದು ಬಹು ಕಾಲದಿಂದಲೂ ನಡೆದುಬಂದ ಅರ್ಯರ ಉಡಿಗೆಯು; ಮತ್ತು ನಮ್ಮಲ್ಲಿ ಈಗಲೂ ಹಳ್ಳಿಪಳ್ಳಿಗಳಲ್ಲಿಯೂ, ಕೇವಲ ಧರ್ಮಪರ ಜನರಲ್ಲಿಯೂ, ಇದೇ ನಡೆವಳಿಯು ದೃಗ್ಗೋಚರವಾಗುತ್ತದೆ. ಈ ಧೋತರವನ್ನು, ಆರ್ಯಬ್ರಹ್ಮಚಾರಿಗಳು ಬಲಗೈಯನ್ನೊಂದು ಹೊರಗೆ ತೆಗೆದು ಕ೦ಕುಳೊಳಗಿಂದ ಹಾಯಿಸಿ ಅದಕ್ಕೆ ಗಂಟು ಹಾಕಿ ಹೊಡೆಯುತ್ತಿದ್ದರೆಂಬುದು ಅನೇಕ ಉದಾಹರಣೆಗಳ ಮೇಲಿ೦ದ ಕ೦ಡುಬರುತ್ತದೆ. ಆದರೂ ಇದೇ ಧೋತರದಿಂದಲೇ ಯುದ್ಧ ಮೊದಲಾದವುಗಳನ್ನು ಹೇಗೆ ಮಾಡುತ್ತಿದ್ದರೆಂಬುದೊಂದು ಪ್ರಶ್ನವು ಹಾಗೇ ಉಳಿದುಕೊಳ್ಳುತ್ತದೆ. ಆಗಿನ ಕಾಲಕ್ಕೆ ಬಟ್ಟೆ ಹೊಲಿಯುವ ಕೈಗಾರಿಕೆಯೇ ಇರಲಿಲ್ಲ. ಬಟ್ಟೆ ಹೊಲಿಯವ ಕೈಗಾರಿಕೆಯು ಪಾಶ್ಚಾತ್ಯ ಜನರಿಂದ ಬಂದಿದೆ. ಗ೦ಡಸರ ತಲೆಯ ಮೇಲೆ ಕೂದಲಗಳಿದ್ದು, ನಾಲ್ಕುಜನರೊಳಗೆ ಹೋಗಬೇಕಾದರೆ ತಲೆಯ ಮೇಲೆ ಮುಂಡಾಸಿನ೦ತಹದೊಂದನ್ನು ಹಾಕಿಕೊಳ್ಳುತ್ತಿದ್ದರು. ಇದಕ್ಕೆ ಭಾರತದೊಳಗೆ 'ಉಷ್ಣೀಷ' ವೆಂದು ಅಂದಿದ್ದಾರೆ. ಈ 'ಉಷ್ಣೀಷ' ವೆಂದರೆ, ಈಗಣ ಕಾಲದ ಮರಾಟಗರ ಮು೦ಡಾಸಿನಂತಿರದೆ, ತಲೆಗೆ ಬರಿಯದೊ೦ದು ಪಾವುಡವನ್ನಾಗಲಿ, ಕೈವಸ್ತ್ರವನ್ನಾಗಲಿ ಸುತ್ತಿಕೊ೦ಡ೦ತೆ ಇರುತ್ತಿತ್ತು. ಭೀಷ್ಮ, ದ್ರೋಣರು ಯುದ್ಧಕ್ಕೆನಿಂತಾಗ ತಲೆಗೆ ಇ೦ಥ ವಸ್ತ್ರಗಳನ್ನು ಸುತ್ತಿಕೊಂಡಿರುವರಾಗಿ ವರ್ಣನೆಯಿದೆ. ಉದಾಹರಣೆಗಾಗಿ "ದ್ರೋಣಾಚಾರ್ಯರು ಬಿಳೇ ಬಣ್ಣದ ಕವಚ, ವಸ್ತ್ರ ಹಾಗೂ 'ಉಷ್ಣೀಷ' ಗಳನ್ನು ಧರಿಸಿ ಧನುಷ್ಯದ ಟಣತ್ಕಾರವನ್ನು ನಡಿಸಿದ್ದರಂತೆ! ಆದರೆ, ದುರ್ಯೋಧನಾದಿರಾಜರು ಕಿರೀಟಗಳನ್ನು ಧರಿಸುತ್ತಿದ್ದರು . ಅಗ, ಭರತಖಂಡದಲ್ಲಿ ಹತ್ತಿ, ರೇಶ್ಮೆಯು ಹುಟ್ಟುತ್ತಿದ್ದುದರಿಂದ ಈ ವಸ್ತ್ರಗಳೆಲ್ಲವೂ ಹತ್ತಿ, ರೇಶೆಗಳಿಂದಲೇ ಮಾಡಲ್ಪಟ್ಟಿರುತ್ತಿದ್ದವು. ಕಾಲೊಳಗೆ ಈಗಿನ ಕಾಲದ ಕೆರವಿನ೦ತಹ ಒಂದು ವಿಧದ ಮೊಟ್ಟೆಯನ್ನು ಹಾಕಿಕೊಳ್ಳುತ್ತಿದ್ದರು. ಕ್ಷತ್ರಿಯರು ವಾಡಿಕೆಯಾಗಿ, ತಲೆಯ ಮೇಲೆ