ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಮುನ್ನುಡಿ.


"ಮಹತ್ವಕ್ಕೇರುವ ಮನುಷ್ಯನು ಇತಿಹಾಸ, ಪುರಾಣ ಹಾಗು ವೀರಕಾರ್ಯಗಳ ಕಥೆಗಳನ್ನು ಕೇಳಬೇಕು; ಈ ಮಾತನ್ನರಿಯುವವನು ಇತಿಹಾಸ, ಪುರಾಣ ಮತ್ತು ವೀರ್ಯವತ್ತರವಾದ ಕಾರ್ಯಗಳನ್ನೇ ತನ್ನ ಪ್ರಿಯ ಸ್ಥಾನಗಳನ್ನಾಗಿ ತಿಳಿಯುತ್ತಾನೆ.”

(ಅಥರ್ವವೇದಕಾಂಡ)

ಇತಿಹಾಸದ ಬಗ್ಗೆ ಆರ್ಯರ ಮೇಲಣ ಕಲ್ಪನೆಯೆತ್ತ? ಈಗಿನ ವರ ಕಲ್ಪನೆಯತ್ತ? ಒಂದು ವೇಳೆ ಈಗಣವರ ಕಲ್ಪನೆಯ ಮೇಲಿನಂತೆಯೇ ಇದ್ದರೂ, ಆಚರಣೆಯಲ್ಲಿ ಮಾತ್ರ ಈಗಣ ಕಾಲದ ಇತಿಹಾಸಗಳೆಂದರೆ, ರಾಜವಂಶಾವಳಿಗಳ ಪಟ್ಟಿ ಹಾಗೂ ಯುದ್ಧದ ವರ್ಣನೆಗೆಳನ್ನು ಹೇಳುವ ಹಾಳು ಕ೦ತೆಗಳು. ಒಂದರಲ್ಲಿ ಪ್ರಾಚೀನ ಕಾಲದ ಜನ ಜೀವನದ ಚಿತ್ರವಿಲ್ಲ; ಭಾರತೀಯರ ಸಂಸ್ಕೃತಿಯ ಕುರುಹಿಲ್ಲ; ಭಾರತೀಯರ ಬೇರೆ ಬೇರೆ ರಾಜಕೀಯ ಸಾಮಾಜಿಕ ಧಾರ್ಮಿಕ ಸಂಸ್ಥೆಗಳ ಸಂಗತಿಯಿಲ್ಲ. ನಿರ್ಜೀವವಾದ ಇಂತಹ ಚರಿತ್ರೆಗಳಿಂದ ಯುವಕರಲ್ಲಿ ತಮ್ಮ ನಾಡು, ತಮ್ಮ ನುಡಿ, ತಮ್ಮ ಪೂರ್ವಿಕರು, ತಮ್ಮ ಸಂಸ್ಕೃತಿ ಅವೆಲ್ಲವುಗಳ ದೆಸೆಯಿಂದ ಅಭಿಮಾನವು ಮೈದೊರುವದೆ೦ತು! ಚರಿತ್ರೆಯ ವಿಷಯದಲ್ಲಿರುವ ಈ ಕಾಮ ಕಾಲವನ್ನು ಕೆಲಮಟ್ಟಿಗಾದರೂ ಹೋಗಲಾಡಿಸುವಂಥದೊ೦ದು ಜನಜೀವನದರ್ಶಕವಾದ ಚರಿತ್ರೆಯನ್ನು ಬರೆಯಬೇಕೆ೦ಬುದೊಂದು ವಿಚಾರವು ಬಹು ದಿನಗಳಿಂದಲೂ ಮನಸಿನಲ್ಲಿ ಕುದಿಯುತ್ತಿದ್ದಿತು. ಧಾರವಾಡ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ. ದೇನಾಯರು ಈ ತೆರನಾದೊಂದು ಚರಿತ್ರೆಯು ನಮ್ಮ ತರುಣರಿಗೆ ಬೇಕೆಂದು ಆಗಾಗ್ಗೆ ನುಡಿಯುತ್ತಿದ್ದರು; ಆದರೆ ಕಾಲಕ್ಕೂ ಕರ್ಮಕ್ಕೂ ಕೂಡಿ ಬರುವಂಥ ಹದಗಾಲವು ಬರದೇ ಮನುಷ್ಯನಿಂದಾವ ಕಾರ್ಯ ತಾನೇ ಆಗಬಲ್ಲದು? ಒಂದು ದಿನ ನಾವಿರ್ವರು ತಿರುಗಾಡಲಿಕ್ಕೆ ಹೋದಾಗ ಇದರದೇ ಪ್ರಸ್ತಾಪ ನಡೆದು