ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

(೨)

"ಇನ್ನು ಮಾತ್ರ ಚರಿತ್ರೆಯ ಬರೆವಣಿಗೆಯ ಕಾರ್ಯಕ್ಕೆ ಕೈಹಾಕಲಿಕ್ಕೇಬೇಕೆ೦ದು ” ಮಾತನಾಡಿಕೊಂಡೆವು. ಶಿ. ದೇಸಾಯರೂ ಶಿಕ್ಷಣಸಮಿತಿಯ ಸಭಾಸದರ ಅನುಮತಿ ಪಡೆದು ಬರೆಯಬಹುದೆಂದು ಕೊನೆಮಾತು ಹೇಳಿದರು. ಇಷ್ಟು ನಿಷ್ಕರ್ಷೆಯಾಯಿತು. ನಾನಾದರೂ ಅದಕ್ಕೆ ಬೇಕಾಗುವ ಆಧಾರ ಗ್ರಂಥಗಳನ್ನು ಶೇಖರಿಸಲಿಕ್ಕೆ ಮೊದಲು ಮಾಡಿದೆನು.

ಭಾರತೀಯರ ಇತಿಹಾಸದಲ್ಲಿ "ಭಾರತೀಯರು ಇಲ್ಲಿಯವರ ಹೊರ್ತು ಅವರ ಬೇರೊಂದು ದೇಶದಿಂದ ಬಂದವರಲ್ಲವೆಂಬ ಭಾವನೆಯಿಂದ ಭಾರತೀಯರ ಆನಂದಕ್ಕೆ ಹೇಗೆ ಉಕ್ಕು ಬರುವದೋ ಹಾಗೆ ಅವರು ಮಧ್ಯ ಏಸಿಯದಿಂದ ಬಂದವರು, ಉತ್ತರ ಧ್ರುವದಿ೦ದ ಬ೦ದವರೆಂಬ ಕಲ್ಪನೆಗಳಿ೦ದ ಬಾರದಷ್ಟೇ! ಇದುವರೆಗಾದ ಇತಿಹಾಸಗಳಲ್ಲೆಲ್ಲ "ಭಾರತೀಯ ಆರ್ಯರು ಮಧ್ಯಏಸಿಯದಿಂದ ಬಂದವರೆಂಬ ಸಿದ್ಧಾಂತವನ್ನು ಮುಂದಿಟ್ಟುಕೊ೦ಡೇ” ನಮ್ಮ ಇತಿಹಾಸಗಾರರು ಮು೦ದೆ ಸಾಗಿದ್ದಾರೆ; ಆದರೆ ಈ ಸಿದ್ಧಾಂತವನ್ನು ಖಂಡಿಸಿ ( ಭಾರತೀಯ ಆರ್ಯರು ಇಲ್ಲಿಯವರು; ಪ್ರಪಂಚಕ್ಕೆ ಭಾರತೀಯ ಜನಾ೦ಗವು ತೊಟ್ಟಿಲು” ಎಂಬೀ ಸಿದ್ಧಾಂತವನ್ನು, ಸಾಧಿಸಲಿಕ್ಕೆ ಅನುವಾದ ಹೊಸ ಗ್ರಂಥಗಳು ಸಿಕ್ಕರೆ ಎಷ್ಟು ಚೆನ್ನಾದೀತೆಂದು ನನ್ನಷ್ಟಕ್ಕೆ ನಾನೇ ಮನಸಿನಲ್ಲಿ ಅ೦ದುಕೊ೦ಡು ಅಲ್ಲಲ್ಲಿಯ ಇತಿಹಾಸಗಳನ್ನು ಓದಿ ನೋಡುತ್ತಿದ್ದೆನು; ಒಂದು ದಿನ ಧಾರವಾಡ ರಾಷ್ಟ್ರೀಯ ಶಾಲೆಯ ಪುಸ್ತಕ ಸಂಗ್ರಹಾಲಯದಲ್ಲಿ ಎಷ್ಟು ತರದ ಇತಿಹಾಸಗಳಿರುವವೋ ನೋಡಬೇಕೆಂದು ಹುಡುಕುತ್ತಿರುವಾಗ್ಗೆ “Rig-Vedic India” ಎಂಬುದೊಂದು ಇಂಗ್ಲೀಷ ಗ್ರಂಥವು ಕೈಗೆ ಸಿಕ್ಕಿತು. ಇದರಲ್ಲೇನೀರುವದೋ ಎಂದು ಓದಿ ನೋಡುವಷ್ಟರಲ್ಲಿ "ಭಾರತೀಯ ಆರ್ಯರು ಇಲ್ಲಿಯವರೇ, ಇಲ್ಲಿಂದಲೇ ಜನಗಳು ಬೇರೆ ಬೇರೆ ಜನಾ೦ಗಗಳಿಗೆ ಒಕ್ಕಲಾಗಿರಲಿಕ್ಕೆ ಹೋದರೆ"೦ಬ ಸಿದ್ಧಾಂತವನ್ನು ಪ್ರೊ. ಅವಿನಾಶ ಚಂದ್ರರಾಸರವರು ಸಿದ್ಧಪಡಿಸಿದ್ದನ್ನು ಕಂಡು ನನಗೆ ಹಿಡಿಸಲಾರದಷ್ಟು ಅನಂದವಾಯಿತು. ಇತಿಹಾಸ ಬರೆಯಬೇಕೆಂಬ ಹಸಿವುಳ್ಳ ನನಗೆ