ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

081 5 ಭಾರತೀಯ ಇತಿಹಾಸವು. ವದಿಲ್ಲವೋ ಅವನು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದು ದೇ ಭಾರ! ಇ೦ಥ ಹೇಡಿತನವನ್ನು ಬೀನಾಡಿ, ರಣಾಂಗಣವನ್ನು ಹೊಕ್ಕು ವೈರಿ ಗಳ ಹೊಟ್ಟು ಹಾರಿಸಿ ಬಾ; ಅ೦ದರೆ ಬದುಕಿದ್ದಕ್ಕೆ ವಾರ್ಧಕ.” ಈ ರೀತಿ ಯಾಗಿ ಉತ್ಸಾಹ ಕಳೆ ತುಂಬಿಸಿ ಗಂಡು ಗೊಳಿಸುವ ತಾಯಿಯ ಬಾಯಿಂದ ಹೊರಟ ಉಪದೇಶಾಮೃತವನ್ನು ೦ಡು ಸಂಜಯನು ಪ್ರೋತ್ಸಾಹ ಗೊ೦ಡವನಾಗಿ ತಿರಿಗಿ, ರಣಾಂಗಣವನ್ನು ನುಗ್ಗಿ ಶತ್ರುಗಳನ್ನು ಮುರಿ ಬಡಿದು ಕಳಕೊಂಡ ರಾಜ್ಯವನ್ನು ಮರಳಿ ಗಳಿಸಿದನು. ಮನುಷ್ಯನು ಸ೦ಾರದಲ್ಲಿ, ರಾಜನು ವೈರಿಗಳಿಗೆ ಸೋ ತಾ ಗಲಿ, ಜನಾ೦ಗವು ಅದೃಷ್ಟವಶ ದಿ೦ದಾಗಲಿ, ದೈನ್ಯಾವಸ್ಥೆಗೆ ತುತ್ತಾದರೆ, ರಣಹೇಡಿಯಂತೆ ಕೈ ಮುಚ್ಚಿಕೊಂಡಿರದೆ, ಸತತ ಉದ್ಯೋಗಬಲದಿಂದಲೂ, ಧೈರ್ಯ ದಿ೦ದಲೂ ಎಲ್ಲರೂ ತಮ್ಮ ತಮ್ಮ ದಾರಿಯನ್ನು ಹುಡುಕಿಕೊಳ್ಳತಕ್ಕು ದೆಂದು ಈ ಕಥೆಯಿಂದ ಕಲಿಯ ತಕ್ಕ ಸಂಗತಿಯಾಗಿದೆ. ಯುದ್ಧ ಹಾಗೂ ಸೈನ್ಯ :- ಭಾರತೀಯ ಕಾಲಕ್ಕೆ ಪ್ರತಿಯೊಂದು ರಾಷ್ಟ್ರದಲ್ಲಿ ಯಾವಾಗಲೂ ಸೈನ್ಯವು ಸಿದ್ಧವಿರುವ ಪದ್ಧತಿ ತು; ಯುದ್ಧ ಶಾಸ್ತ್ರವು ಬಹು ಮುಂದುವರಿದುದರಿಂದ ಮನ ಬಂದಂತೆ ಎಲ್ಲರಿಗೂ ಸೈನಿ ಕರಾಗಲಿಕ್ಕೆ ಬರುತ್ತಿರಲಿಲ್ಲ. ಸೈನಿಕರಾಗಬೇಕಾದರೆ ಸೈನ್ಯದೊಳಗೆ ಅನೇಕ ವರ್ಷದ ಶಿಕ್ಷಣ ಪಡೆಯ ಬೇಕಾಗುತ್ತಿತ್ತು. ಸೈನ್ಯದೊಳಗೆ ಕಾಲಾಳು, ಕುದುರೆ ಬಲ, ಆನೆಬಲ, ರಥ ಬಲ ಹೀಗೆ ನಾಲ್ಕು ಭಾಗಗಳಿ ದ್ದ ವು; ಇರಕ್ಕೆ ಚತುರಂಗ ಬಲವೆಂದು ಹೆಸರು. ಶೀಪಾಯಿಗಳಿಗೆ ಧಾನ್ಯ ರೂಪದಿ೦ದಾಗಲಿ, ಭ೦ಗಾರದ ರೂಪದಿ೦ದಾಗಲಿ ಸಂಬಳ ಕೊಡು ತಿದ್ದರು; ರಣದೊಳಗೆ ಮಡಿದ ವೀರಾಳು ಗಳ ಕುಟುಂಬ ಪೋಷಣೆಯ ಭಾರವು ರಾಜನಮೇಲಿತ್ತು; ಹತ್ತು, ನೂರು, ನಾವಿರ ಕಾಲಾಳು ಗಳಿ ಗೊಬ್ಬೊಬ್ಬ ಮುಖ್ಯಸ್ಥನಿರುತ್ತಿದ್ದನು; ಸೇನಾ ಸತಿಯು ಇಡೀ ಸೈನ್ಯದ ನಾಯಕ ನಿದ್ದು ಆತನು ಧೈರ್ಯಶಾಲಿಯ, ಗಟ್ಟಿಗನೂ, ಶೂರನೂ, ಬುದ್ಧಿವಂತನೂ, ಕುಲೀನನೂ, ಆಚಾರಸಂಪನ್ನನೂ, ದಕ್ಷನೂ ಇರಲಿಕ್ಕೇ ಬೇಕೆಂದು ನಿಯಮವಿತ್ತು; ಮೇಲಾಗಿ ಅವನು ವ್ಯೂಹ ರಚನೆ. ಯ೦ತ್ರ, ಆಯುಧಗಳ ಉಪಯೋಗ ಇವನ್ನು ಅರಿತವನಾಗಿರಲಿಕ್ಕೆ