ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೫೩
ಸೈನ್ಯರಚನೆ.

ಮೇಲೆ ಆನೆಯ ಸರಪಳಿಧ್ವಜ, ಯುಧಿಷ್ಠಿರನ ರಥಕ್ಕೆ ಗ್ರಹಗಳಿ೦ದ ಶೋಭಿಸುವಚಂದ್ರನಧ್ವಜವಿತ್ತು; ಅಲ್ಲದೆ ರಥದಲ್ಲಿ ಒಂದೊಂದುಮದ್ದಳೆ, ಕಹಳೆಗಳೂ ಇರುತ್ತಿದ್ದವು. ರಥವನ್ನು ನಡೆಸಹತ್ತಿದೊಡನೆ ಈ ಮದ್ದಳೆಗಳು ತಮ್ಮಷ್ಟಕ್ಕೆ ತಾವೇ ಯ೦ತ್ರದಿ೦ದ ಸಪ್ಪಳ ಮಾಡುತ್ತಿದ್ದವು. ರಥಗಳಿಗೆ ಎ ಡೇ ಗಾಲಿಗಳು ಇರುತ್ತಿದ್ದವು. ಶಾಲ್ವರಾಜನು ದ್ವಾರಕೆಯ ಮೇಲೆ ಸಾಗಿಹೋಗಿ, ಮುತ್ತಿದಾಗ ವಿಮಾನದಿ೦ದ ದ್ವಾರಕೆಯ ಮೇಲೆ ಕಲ್ಲಿನ ಮಳೆ ಸುರಿಸಿದ ಸಂಗತಿಯನ್ನೋದಿದರೆ, ಪೂರ್ವಕಾಲಕ್ಕೆ ವಿಮಾನದ ಉಪಯೋಗವು ಗೊತ್ತಿತ್ತೆಂಬುದು ನಿದರ್ಶನಕ್ಕೆಬರುತ್ತಿದೆ. ಈ ವೇಳೆಯಲ್ಲಿ ದ್ವಾರಕೆಯೊಳಗೆ ಅಲ್ಲಲ್ಲಿ ತೋಫು ಹಾಗೂ ಯಂತ್ರಗಳು ಇಡಲ್ಪಟ್ಟಿದ್ದವಂತೆ! ಭಾರತೀಯ ಯುದ್ಧಶಾಸ್ತ್ರದೊಳಗೆ ಧರ್ಮಯುದ್ಧ, ಕೂಟಯುದ್ಧ, ಸಂಕುಲಯುದ್ಧ ಎಂದು ಮರು ಪ್ರಭೇದಗಳು. ಭಾರತೀಯರಿಗೆ ಧರ್ಮಯುದ್ಧವೆಂದರೆ ಬಲುಪ್ರೀತಿ. ಧರ್ಮಯುದ್ಧದೊಳಗೆ ದಯಾಗುಣವೇ ಮುಖ್ಯವಾಗಿರುತ್ತಿತ್ತು. ಕೂಟಯುದ್ಧವೆಂದರೆ ಕಪಟಯುದ್ಧವು; ಅವಶ್ಯವಿದ್ದಲ್ಲಿ ಕೂಟಯುದ್ಧವನ್ನೂ ನಡಿಸಬೇಕೆಂದು ಹೇಳಿದೆ.

ಸೈನ್ಯರಚನೆ:-ಕಾಲಾಳಿನ ಮು೦ದೆ ಆನೆಯದಳ; ಆನೆಯ ದಳದ ನಟ್ಟನಡುವೆ ರಧಗಳು; ರಥಗಳ ಹಿಂಭಾಗದಲ್ಲಿ ಕುದುರೆ ಸವಾರರು. ಕುದುರೆ ಸವಾರರ ನಡುವೆ ಕವಚಗಳನ್ನು ಧರಿಸಿದ ಕಾಲಾಳುಗಳು. ಈ ವಿಧವಾಗಿ ಸೈನ್ಯರಚನೆ ಮಾಡುತ್ತಿದ್ದರು. ಈ ಸೈನ್ಯವು ಅನೇಕ ಹರ ದಾರಿಗಳ ತನಕ ಹರಡಿಕೊಂಡಿರುತ್ತಿತ್ತು. ಬೇರೆ ಬೇರೆ ದಿವಸಗಳಲ್ಲಿ ಬೇರೆ ಬೇರೆ ವಿಧದಿಂದ ಸೈನ್ಯವನ್ನು ಮಂಡಿಸುತ್ತಿದ್ದರು. ಇದರಲ್ಲಿ ಚಕ್ರವ್ಯೂಹ, ಗರುಡವ್ಯೂಹ, ಕ್ರೌಂಚವ್ಯೂಹ, ಅರ್ಧಚಂದ್ರವ್ಯೂಹ ಹೀಗೆ ವಿಧಗಳಿವೆ; ಒಟ್ಟು, ಕುರು-ಪಾಂಡವರ ಯುದ್ಧದೊಳಗೆ ೧೮ ಅಕ್ಷೌಹಿಣಿ ದಳವಿದ್ದು, ೧೮ ನೇ ದಿನ ೩ ಲಕ್ಷ ಕುದುರೆಸವಾರರೂ, ೩ ಕೋಟಿ ಕಾಲಾಳುಗಳೂ ಕೌರವರ ಪಕ್ಷದಲ್ಲಿ, ಹತ್ತು ಸಾವಿರ ಸವಾರರು ಮತ್ತು ೨ ಕೋಟ ಕಾಲಾಳುಗಳೂ ಪಾಂಡವರ ಪಕ್ಷದಲ್ಲಿ ಇದ್ದ ರೆಂದು ವರ್ಣನೆಯಿದೆ. ಈ ಸಂಗ್ರಾಮದೊಳಗೆ ೬೬ ಕೋಟಿ ೧ ಲಕ್ಷ ೩೦ ಸಾವಿರ ಜನರು ಮಡಿದರ೦ತೆ!