ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
(೩)

ಹೊಸ ಶೋಧನೆಯ ಈ ಸಂಗತಿಯಿಂದ ಮೊದಲನೇ ತುತ್ತಿಗೇನೇ ಮುತ್ತು ಕೈಗೆ ಬಂದಷ್ಟು ಅನಂದವಾಗಿ ನನ್ನ ಹುರುಪು ಇಮ್ಮಡಿಯಾಗಿ ಕೆಲಸಕ್ಕೆ ದುಮ್ಮಿಕ್ಕಿದೆನು. ಮುಂದೆ ಶಿಕ್ಷಣಸಮಿತಿಯ ಕಾರ್ಯದರ್ಶಿಗಳಾದ ಶ್ರಿ. ದೇಸಾಯರೂ ನನಗೆ ಬೇಕಾದ ಆಧಾರ ಗ್ರಂಥಗಳನ್ನೆಲ್ಲ ಸಾಧ್ಯವಿರುವಮಟ್ಟಿಗೆ ಹುಡುಕಿ ಒದಗಿಸಿಕೊಟ್ಟರು. ಇದೀಗ ಕಾರ್ಯ ಸಿದ್ಧತೆಯ ಪುರಾಣವು.

ಸಾಂಸ್ಕೃತಿಕ ಹಾಗೂ ಜನಜೀವನದ ಚಿತ್ರವನ್ನೊಳಗೊಂಡಿರುವ ಚರಿತ್ರೆಯನ್ನು ಬರೆಯಬೇಕೆಂದು ಮೊದಲು ನಾನು ಹವಣಿಸಿರುವಂತೆ, ಪ್ರಕೃತಕ್ಕೆ ಮುದ್ರಿತವಾಗಿರುವ ಸಾಧ್ಯವಿದ್ದ ಗ್ರಂಥಗಳನೆಲ್ಲ ಓದಿಕೊ೦ಡು ಋಗ್ವೇದಕಾಲದಿಂದಲೂ ಹಿಂದೂದೇಶಕ್ಕೆ ಅರಬರು ಬರುವವರೆಗಿನ ಭಾರತೀಯರ ಚರಿತ್ರೆಯನ್ನು ಕೈಲಾದಮಟ್ಟಿಗೆ ಅಚ್ಚುಕಟ್ಟಾಗಿ, ಹುರಿಕಟ್ಟಾಗಿ, ಹಸನಾಗಿ, ಹುರುಳಾಗಿ ಬರೆಯಲು ಎತ್ತುಗಡೆ ಮಾಡಿದ್ದೇನೆ. ನಿಜವಾಗಿಯೂ, ಭಾರತದಂಥ 'ದಿವ್ಯ' ಜನಾ೦ಗದ ಹಿಂದಣ ಚರಿತ್ರೆಯನ್ನು ಬರೆಯಲು ಎದೆಗೊಳ್ಳುವವನು ಆರ್ಯಸಂಸ್ಕೃತಿಯ ಮಟ್ಟುಗುಟ್ಟುಗಳನ್ನರಿತ ಮಿಗಿಲಾದ ಗೊತ್ತುಗಾರಿಯೂ, ಗೊತ್ತಿದ್ದುದನ್ನು ಕಣ್ಮುಟ್ಟಿ ನೋಡಿದಂತೆ, ಆ ನೋಟವು ಓದುಗರ ಕಣ್ಣಿಗೆ ಕಟ್ಟುವಂತೆ ಬರೆಯುವ ಎಲ್ಲ ಬರಹಗಾರನೂ ಇದ್ದೇ ತೀರಬೇಕು; ಆದರೆ ಕಂಡವರ ಪಾಲಿಗೆ ಬರುವ ಮಾತಲ್ಲವರು! ವರ ಬರಹಗಾರನಿಗೆ ಮೀಸಲು ಕಟ್ಟಿದ ಭಾಗ್ಯವದು! ಅಂಥದನ್ನು ಬೇಡಿ ಪ್ರಪಂಚಕ್ಕೆ ನೀಡಲು ಬ೦ದ ಚರಿತ್ರೆಯ ಚಿತ್ರಗಾರನು ಕನ್ನಡನಾಡಿನಲ್ಲಿ ಎಂದು ಮೈಗೊಂಡು ಬರುವನೋ ಬರಲಿಮನಸಿನೊಳಗಿನ ಈ ಕ೦ದು ಅಳಿವು ದೆಂದೋ ಅಳಿಯಲಿ !! ಆ ಕ೦ದುಕುಂದಿನಿ೦ದ ಕುಗ್ಗದೆ ಮುಗ್ಗದೆ, ನಾನಂತೂ ಕೈಲಿದ್ದ ಸಾಮಗ್ರಿಗಳನ್ನೆಲ್ಲ ಅಳವಡಿಸಿಕೊಂಡು ಬೆಳೆಗನ್ನಡಿ, ಗರಿಗಾಗಿ, ಬೆಳುಗನ್ನಡದೊಳಗೀ ಭಾರತೀಯರ ಬೆಳಗುವ ಜನಜೀವನದ ಚರಿತ್ರೆಯನ್ನು ಬರೆಯಲು ಸಾಹಸಗೊಂಡಿದ್ದಾಯಿತು

ಹೊಸ ವಿಷಯವು ಸ್ಪಷ್ಟವಾಗಲಿಕ್ಕೆ ಅಲ್ಲಲ್ಲಿ ಹಲಕೆಲ ಟಿಪ್ಪಣಿಗಳನ್ನು ಕೊಟ್ಟಿದ್ದೇನೆ. ದಿನದಿನಕ್ಕೆ ಐತಿಹಾಸಿಕ ಹೊಸ ಹೊಸ