ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೬೪ ಭಾರತೀಯರ ಇತಿಹಾಸವು. ಯಿಸಲಿಕ್ಕೆಂದು ಕೃತ, ತ್ರೇತಾ, ದ್ವಾಪರ, ಕಲ್ಕಿ ಎಂಬ ನಾಲ್ಕು ಯು ಗಗಳನ್ನಾಗಿ ಮಾಡಿ, ಕಲಿಯುಗದ ಕಾಲಮಾನವು ೪,೩೨೦೦೦ ವರ್ಷವೆಂದೂ, ದ್ವಾಪರದ್ದು ಇದರ ಎರಡಕ್ಕೆ ಂದೂ, ತ್ರೇತಾಯು ಗದ್ದು ಮೂರರಷ್ಟೆಂ ದೂ, ಕೃತಯು ಗದ್ದು ನಾಲ್ಕರಷ್ಟೆಂದೂ ನಿರ್ಣ ಯಿಸಿದ್ದಾರೆ. - ಷಡರ್ಶನಗಳು:- ಆರ್ಯರ ಮೆದುಳಿನ ಬಲವ, ಹಾಗೂ ಓಜಸ್ಸು ಎಷ್ಟು ಸೂಕ್ಷ್ಮವಾಗಿರುವದೆಂಬದನ್ನು ತೋರಿಸಲಿಕ್ಕೆ ಷಡ್ಡ ರ್ಶ ನಗಳೇ ನಾ ತ್ರಿಯಾಗಿವೆ. ಆರ್ಯರ ಗ್ರ೦ಧಭಾ೦ಡಾ ರದೊಳಗೆ ಷಡ್ಡ ರ್ಶ ನಗಳ೦ಧ ತರ್ಕ ಹಾಗೂ ಬುದ್ಧಿ ಪ್ರದಾನವಾದ ಬೇರೆ ಗ್ರಂಧಗಳೇ ಇಲ್ಲ ವೆಂದರೂ ಅತ್ಯುತಿಯಾಗದು; ಷಡರ್ಶನಗಳಿಗೆ ಉಪನಿಷತ್ತುಗಳ ಬೆ೦ಬ ಲವಿದೆ. ದರ್ಶನಕಾರರು ಉಪನಿಷತ್ತುಗಳನ್ನು ಪೂಜ್ಯವೆಂದೆಣಿಸುತ್ತಾರೆ. ಷಡರ್ಶನಗಳು ಯಾವುವೆಂದರೆ, ಸಾಂಖ್ಯ, ಯೋಗ, ನ್ಯಾಯ, ವೈಶೇ ಷಿಕ ಪೂರ್ವಮೀಮಾಂಸೆ, ಉತ್ತರ ಮೀಮಾಂಸೆ ಇವುಗಳೇ. ಇವೆಲ್ಲವೂ ಸೂತ್ರಬದ್ಧವಾಗಿವೆ. ಈ ಕಾಲಕ್ಕೆ ಭಾರತೀಯ ರಿಗೆ ಯಾವುದೆಂದು ಮಹತ್ವದ ಗ್ರಂಥವನ್ನು ಬರೆಯುವರಾದರೆ ಸೂತ್ರರೂಪವಾಗಿಯೇ ಬರೆಯ ಬೇಕೆಂಬುದೊಂದು ಗಾಳಿ ಬೀಸಿತ್ತು. ಮನುಷ್ಯನ ವಿಚಾರ ಸಾಮರ್ಥ್ಯವಾಗಲಿ, ಭಾಷೆಯಾಗಲಿ, ಎಷ್ಟು ಉಚ್ಚ ಸ್ಥಿತಿಗೆ ಮುಟ್ಟಿದ್ದು ವೆಂಬುದಕ್ಕೆ ಈ ಸೂತ್ರಗಳ ಕಾಲವೂ ಒ೦ದು ಬಗೆ೦ದ ಮಹತ್ವ ದ್ದಾಗಿದೆ. ಒಳ್ಳೆ ವಿಸ್ತ್ರತವೂ, ಮಹತ್ವವೂ ಆದ ತತ್ವ ವಿಚಾರ ಗಳನ್ನು ಅರ್ಯರು ಸೂತ್ರರೂ ವದೊಳಗೆ ಅಡಗಿಸಲಿಕ್ಕೆ ಮಾಡಿದ ಪ್ರಯತ್ನ ವು ಜಗತ್ತಿನ ಭಾಷಾಶಾಸ್ತ್ರದೊಳಗೇ ಹಿರಿದೂ ಅರಿದಾದುದೂ ಆಗಿದೆ. ಈ ಕಾಲದೊಳಗಾದ ಧರ್ಮಗ್ರಂಥಗಳೂ, ತತ್ವ ಶಾಸ್ತ್ರಗ್ರಂಧ ಗಳೂ, ಸೂತ್ರರೂಪವಾಗಿಯೇ ಆದವು. ಸಾಂಖ್ಯ:- ತತ್ವ ಶಾಸ್ತ್ರಗಳನ್ನು ವಿವರಿಸುವಂಥ ಆರು ಮತಗಳಲ್ಲಿ ನಾ೦ಖ್ಯವೇ ತೀರ ಪ್ರಾಚೀನ ಮ ತವು. ನಾ೦ಖ್ಯಶಾಸ್ತ್ರ ಪ್ರತಿಪಾದಕ ಕಪಿಲ ಋಷಿಗಳೂ ಅವರ ಶಿಷ್ಯರಾದ ಪಂಚಶಿಖರೂ, ಈ ಮತವನ್ನು ಹುಟ್ಟಿ ಸಿ ಬೆಳಿ ಸಿದರು, ಭಾವನಾ ಪ್ರಧಾನಗಳಾದ ವೇದಗಳು ವಿಚಾರ