ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಗೃಹ್ಯ ಸೂತ್ರಗಳು - ೧೬೭ ಶಾಸ್ತ್ರದ ಕರ್ತ ರು. ಇದು ಉಪನಿಷತ್ತುಗಳ ಸಾರವಾಗಿದೆ. ಇದು ರೊಳಗೆ ಬಾದರಾಯಣ ಮುನಿಗಳು ಸಾ೦ಖ್ಯ ಹಾಗೂ ಯೋಗ ಪಕ್ಷದವರನ್ನು ಖಂಡಿಸಿದ್ದಾರೆ. ಬಾದರಾಯಣ ಮುನಿಗಳ ವೇದಾ೦ತ ಮಿ ಮಾಂಸೆಯ ಮೇಲೆ ಬೋಧಾಯನ ಮುನಿಗಳ ಭಾಷ್ಯವಿದೆ. ಇದಕ್ಕೆ ಉತ್ತರಕಾಂಡವೆಂದ ವೇದಾಂತಸೂತ್ರವೆಂದೂ ಹೆಸರು. ಧರ್ನು ಶಾಸ್ತ್ರಗಳು:- ತಾನು ಜನ್ಮವೆತ್ತಿದ ಕುಲದೊಳಗೆ ಯಾವ ಯಾವ ಸಂದರ್ಭಗಳಲ್ಲಿ ಹೇಗೆ ಹೇಗೆ ತನ್ನ ಧರ್ಮಕ್ಕನುಗುಣವಾಗಿ ತನ್ನ ಅಕಾರಾದಿಗಳ ನ್ನಿಟ್ಟು ಕೊಳ್ಳಬೇಕೆಂದು ಹೇಳುವದೇ ಧರ್ಮ ಶಾಸ್ತ್ರವು, ಧರ್ಮ ಶಾಸ್ತ್ರವೆಂದರೆ, ಗೃಹಸ್ಥಿತಿಯನ್ನೂ, ಸಿತ್ರದ ವಿಚಾರ ಗಳನ್ನೂ, ತಿನ್ನುಣ್ಣುವ ನಿಯಮಗಳನ್ನೂ, ಮನಃಸcಯ ಮವನ್ನೂ, ಲೋಕಶಿಕ್ಷಣವನ್ನೂ, ಸ್ತ್ರೀವಾತ್ಸಲ್ಯವನ್ನೂ, ಮಾತೃ ಸೇವೆಯನ್ನೂ, ಪಿತೃ ಭಕ್ತಿ, ಈಶ್ವರ ನಿಷ್ಠೆ, ನೀತಿ ನೈಪುಣ್ಯ, ವ್ಯವಹಾರ ಚಾತುರ್ಯ ಇವುಗಳನ್ನು ವಿವರಿಸುವ ಗ್ರ೦ಧ. ಈ ಧರ್ಮ ಶಾಸ್ತ್ರದೊಳಗೆ ಮರು ವಿಧವಾದ ಸೂತ್ರ ಗಳಿರುವವು; ತಸೂತ್ರಗಳು, ಧರ್ಮ ಸೂತ್ರಗಳು, ಗೃಹ್ಯ ಸೂತ್ರಗಳು. ಶೃತ ಸೂತ್ರಗಳು:- ಶ್ರುತಿಯ ಅ೦ದರೆ ವೇದದ ಆಧಾರದಿಂದ ಮಾಡುವ ಯಜ್ಞ ಕರ್ಮಗಳಿಗೆ ತಕರ್ಮಗಳೆಂದು ಹೆಸರು. ಶೃತ ಸೂತ್ರಗಳಲ್ಲಿ ಅಗ್ನಿಯ ಮೇಲೆ ನಡೆಯಿಸತಕ್ಕ ಕಾರ್ಯಗಳನ್ನೂ, ಅವು ಗಳ ವಿಷಯಕವಾದ ಮಂತ್ರಗಳನ್ನೂ ಕೊಟ್ಟಿದ್ದು, ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಆಚರಿಸತಕ್ಕೆ ಇಷ್ಟಿ, ಋ ತುಯಜ್ಞ, ಪಶು ಯಜ್ಞ, ಸೋಮಯಜ್ಞ ಮುಂತಾದವುಗಳಿಗೆ ಸಂಬಂಧಿಸಿರುವ ಮಂತ್ರಗಳಿವೆ; ಇವುಗಳಿಂದ ಭಾರತೀಯ ರ ಯಜ್ಞ ಸಂಸ್ಕಾರದ ಸಂಗತಿ ಯು ವಿಶದವಾಗಿ. ತಿಳಿಯುವದು. ಗೃಹ್ಯ ಸೂತ್ರಗಳು:- ಗೃಹ್ಯ ಸೂತ್ರಗಳೆಂದರೆ, ಮನೆತನಕ್ಕೆ ಸಂಬಂಧಿಸಿದ ನಿಯಮ ನಿರ್ಬಂಧಗಳನ್ನು ತಿಳಿಸುವ ಕರ್ತವ್ಯ ಸೂತ, ಗಳು, ಗೃಹ್ಯಸೂತ್ರದೊಳಗಿನ ಸೂತ್ರಗಳು ಬಹು ಚಿತ್ತಾಕರ್ಷಕ ವಾಗಿವೆ. ಪುರಾತನ ಕಾಲದ ಆರ್ಯರು ಒ೦ದೇ ಅಗ್ನಿಯ ಮೇಲೆ ತಮ್ಮ ಮನೆತನದ ವಿಧಿ ಕಾರ್ಯಗಳನ್ನು ಹೇಗೆ ನಡಿಸುತ್ತಿದ್ದರೆಂಬುದಕ್ಕೆ U = )