ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಧರ್ಮ ಸೂತ್ರಗಳು. ೧೬೯ ಖುಷಿ ಮಹರ್ಷಿಗಳನ್ನು ಒಂದು ಸಲವಾದರೂ ಸ್ಮರಿಸದ ಮನುಷ್ಯನ ಜನ್ಮವು ನರ ಜನ್ಮವಲ್ಲ; ಹುಳ ಜನ್ಮ. - ಪಿತೃಯ ಜ್ಞ:- ಗುರು ಹಿರಿಯರ ಆಶೀರ್ವಾದವಿಲ್ಲದೆ ಯಾವ ಕಾರ್ಯವೂ ನಡೆಯದೆಂದು ನಮ್ಮ ಆರ್ಯರ ದೃಢಭಾವನೆ; ಅದಕ್ಕನು ಗುಣವಾಗಿ, ಪ್ರತಿಯೊಬ್ಬ ಆರ್ಯನು ದಿನಾಲು ತನ್ನ ತಾತ, ಮುತ್ತಾತ, ತಾಯಿ, ಮುತ್ತಾಯಿ, ಚಿಗವ್ವ, ದೊಡ್ಡಪ್ಪ, ಅಣ್ಣ ತಮ್ಮ, ಅಕ್ಕ ತ೦ಗಿ, ಸೋದರಮಾವ, ಸೋದರತ್ತೆಯನ್ನು ನೆನಿಸಿ ಅವರಿಗೆ ನೀರು ಬಿಡ ಬೇಕೆಂದು ನಿಯಮ ಪಡಿಸಿದ್ದಾರೆ. ಭೂತ ಯಜ್ಞ:- ಪ್ರಾಣಿಗಳನ್ನೂ, ಪತಿತರನ್ನೂ, ರೋಗಪೀಡಿತ ರನ್ನೂ, ಅ ಸಹಾಯ ರನ್ನೂ ಕರೆದು ಸತ್ಕರಿಸಿ, ತಾನುಣ್ಣುವ ಮೊದಲು ಗೃಹಸ್ಥರು ಅನ್ನ ನೀರು ಬೇಕೆಂದು ಆರ್ಯರ ನಿರ್ಬ೦ಧ. ಇದರಿಂದ ಮನುಷ್ಯನಲ್ಲಿ ದುಃಖಿತರಾದವರ ಬಗ್ಗೆ ಸಹಾನುಭೂತಿ ಯು c ವಾಗಿ, ನರೋ ನಕಾ ರ ಒಪ್ಪಿಗೆ ಪುಷ್ಟಿ ದೊರೆಯುತ್ತಿತ್ತು, ದಯೆಯು ಹೆಚ್ಚು ಸರಳವಾಗಿ ಹರಿಯಲಿಕ್ಕೆ ಅನುಕೂಲವಾಗುತ್ತಿತ್ತು; ಗೃಹಸ್ಥನ ಬಾಳಿಕೆಯು ಇವರುಗಳಿಗಾಗಿಯೇ! ಇವರುಗಳ ಸೇವೆ ೦ದಲೇ ಅವನ ಜನ್ಮನಾರ್ಧಕ ! ಆದರೆ ಅದೀಗ ಸ್ವಾರ್ಥಕ್ಕೆಡೆಯಾಗಿದೆ. ಅತಿಥಿಯ ಜ್ಞ:- ಮನುಷ್ಯ ಜಾತಿಯ ಕಲ್ಯಾಣಕ್ಕಾಗಿ ಸನ್ಯಾಸ ವೃತ್ತಿಯನ್ನವಲಂಬಿಸಿ, ಕೇವಲ ಪರೋಪಕಾರಾರ್ಥವಾಗಿ, ಒದುಕಿ ಕೊ೦ಡಿರುವವರು ಹೊತ್ತು ಕಾಲವನ್ನರಿಯದೆ, ಗ್ರಹಸ್ತನ ಮನೆಗೆ ಅನ್ನ ಕ್ಕಾಗಿ ಬಂದರೆ, ಅವರನ್ನು ಆದರಿಸಿ, ಅನ್ನವನ್ನಿಯು ವದೇ ಅತಿಥಿಯ ಜ್ಞ. ಧರ್ಮಸೂತ್ರಗಳು:- ಧರ್ಮಸೂತ್ರಗಳಲ್ಲಿ ಎಲ್ಲಕ್ಕೂ ವುರಾತನ ವೆಂದರೆ, ಮನು ಋಷಿಗಳದು; ಅಲ್ಲದೆ ವಸಿಷ್ಠ, ಗೌತಮ, ಬೋಧಾ ಯನ, ಆಪಸ್ತ೦ಭ ಮೊದಲಾದವರ ಧರ್ಮಸೂತ್ರಗಳಿವೆ; ಅದರ ಅವುಗಳಲ್ಲೆಲ್ಲ ಯಾಜ್ಞ ವಲ್ಕ, ಪರಾಶರ, ಮತ್ತು ನಾ ರದ ಸ್ಮೃತಿಗಳು ವಿಶೇಷ ಚನ್ನಾಗಿವೆ; ಈ ಸ್ಮತಿಗಳಲ್ಲಿ ಮನು ಖುಷಿ ಪ್ರಣೀತವಾದ ಮನುಸ್ಮೃತಿಯು ಮನುಷ್ಯ ಜಾತಿಗೇನೇ ಆಧಾರ ಭೂ ತವಾದ ಧರ್ಮ ಶಾಸ್ತ್ರವೆಂದು ಎಣಿಸಲ್ಪಟ್ಟಿದೆ. ಮನುವು ಕ್ಷತ್ರಿಯ ರಾಜನು; ಸಮಾಜದ