ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭಾರತೀಯರ ಇತಿಹಾಸವು. ಬುದ್ದ ಜನ್ಮ:- ಈಗಣ ನೇಪಾಳದ ಗಡಿಯಲ್ಲಿ ಅನಾರ್ಯ ಸ೦ಗ ಡಕ್ಕೆ ಸೇರಿದ ಅನೇಕ ಜನರು ಚಿಕ್ಕ ಚಿಕ್ಕ ರಾಜ್ಯಗಳನ್ನು ಕಟ್ಟಿ ಕೊ೦ಡು ಆಳುತ್ತಿದ್ದರು. ಹೀಗೆ ಆಳಿಕೊ೦ಡು ಚಿಕ್ಕದೊಂದು ರಾಜ್ಯಕ್ಕೆ ಅಧಿಪತಿಯಾಗಿರುವವರಲ್ಲಿ ಶಾ ಕ್ಯರೆಂಬ ಜನರು ರೋಹಿಣೀನ ದಿಯ ದಂಡೆಯಲ್ಲಿ ಕಪಿಲವಸ್ತುವೆ೦ಬ ರಾಜಧಾನಿಯನ್ನಾಗಿ ಮಾಡಿಕೊ೦ಡಿ ದ್ದರು. ಈ ಮನೆತನದಲ್ಲಿಯ ಶುದ್ಧೋದನನೆಂಬ ಅರಸನ ಹ೦ಡತಿ ಯಾದ ಮಾಯಾದೇವಿಯ ಹೊಟ್ಟೆಯಲ್ಲಿ 1 ಲುಂಬಿನಿ' ಎಂಬೆಸರಿನ ಉಪ ವನದೊಳಗೆ ಕ್ರಿ. ಶ. ಪೂ. ೫೬೦ ರಲ್ಲಿ ಶಾ ಕೃಸಿಂಹ ಗೌತಮ ಬುದ್ಧನು ಜನ್ಮವೆತ್ತಿದನು; ಈ ಕಪಿಲವಸ್ತುನಗರದ ಕುರುಹು ಈಗಲೂ ನೇವಾ ಳದ ದಟ್ಟಾದ ಅರಣ್ಯದೊಳಗೆ ಉಳಿದುಕೊಂಡಿದೆ. ಆ ಶೋಕಮ ಹಾ ರಾಯನು ಬುದ್ಧ ಜನ್ಮಸ್ಥಾನವನ್ನು ನೋಡಹೋಗಿ, ಬುದ್ಧನಲ್ಲಿರುವ ತನ್ನ ಅಪಾರವಾದ ವಿಶ್ವಾಸಕ್ಕಾಗಿ ಇದು : ಬುದ್ದ ಜನ್ಮಾನ' ವೆಂದು ಹೇಳಲಿಕ್ಕೆ ಅಲ್ಲಿಯೊಂದು ಶಿಲಾಸ್ತಂಭ ನಿಲ್ಲಿಸಿ, ಬೌದ್ದ ಪ೦ಥದವರ ಮೇಲೂ, ಬುದ್ಧನ ಅನುಯಾಯಿಗಳ ಮೇಲೂ ಬಹು ಉಪಕಾರ ಮಾಡಿದ್ದಾನೆ. ಬುದ್ದನ ಬಾಲ್ಯ:- ಬುದ್ಧನು ಹುಟ್ಟಿದ ಏಳು ದಿವಸಕ್ಕೆ ನೇ ತಾಯಿಯಾದ ಮಾಯಾವತಿಯು ಮ ಡಿದುದರಿಂದ, ಆಗ ಆತನ ಅಬಚಿ ಯಾದ ಗೌತಮಿ ಎಂಬುವಳು ಸಿದ್ಧಾರ್ಥನನ್ನು ಮೊಲೆಯುಣಿಸಿ ಜೋಕೆ ಮಾಡಿ ದೊಡ್ಡವನನ್ನಾಗಿ ಮಾಡಿದಳು. ಸಿದ್ದಾರ್ಥನು ಬಹು ರೂಪ ಸಂಪನ್ನ ನು. ತಂದೆಯಾದ ಶುದದನನು ಸಿದ್ದಾರ್ಥನ ಜನ್ಮ ಪತ್ರಿಕೆ ಯನ್ನು ಮಾಡಿಸಬೇಕೆಂದು ಜೋಯಿಸರನ್ನು ಕರೆಯಿಸಲು, ಜೋಯಿ ಸರು ಸಿದ್ಧಾರ್ಥನ ಕಂಡಲಿಯನ್ನು ನೋಡಿ " ಸಂಸಾರದೊಳಗಿನ ದುಃಖವನ್ನು ಕ೦ಡು ಈ ತನು ಸಂಸಾರ ತ್ಯಾಗಿಯಾಗುವನು” ಎಂದು ಹಳಿದ ಮಾತಿಗೆ ರಾಜನು ಅಗಲೇ ಬಹು ಗಾಬರಿಯಾದನು; ಅದರೂ ಅದಕ್ಕೆ ತಕ್ಕ ಯೋಚನೆಗೈದು ಮಗನ ಕಣ್ಣಿಗೆ ಸಂಸಾರದೊಳಗಿನ ದುಃಖವು ಬೀಳ ಗೊಡದಂತೆ ಜಾಗರೂಕನಾಗಿರಲು ನಿರ್ಧರಿಸಿದನು; ಇತ್ತ ಬಾಲನಾದ ಸಿದ್ದಾರ್ಥನು ಕ್ರಣ ದೊಡ್ಡವನಾಗುತ್ತೆ ನಡೆ