ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬುದ್ಧನ ಮದುವೆ ಮತ್ತು ವೈರಾಗ್ಯ, ೧೮೫ ದನು. ತಂದೆಯು ಅವನಿಗಾಗಿ ಉಪಾಧ್ಯಾಯರನ್ನು ನಿಯಮಿಸಿ ಶಿಕ್ಷಣ ಕೊಡಿಸಿದನು; ಆದರೂ ಬಾಲ್ಯದೊಳಗೆ ಸಿದ್ದಾರ್ಥನು ಸ್ವಾಭಾವಿಕ ವಾಗಿ ಬಹು ಚಂಚಲವಿದ್ದರೂ, ಆತನ ಮನಸ್ಸು ಆಗಾಗ್ಗೆ ಆಧ್ಯಾತ್ಮಿಕ ವಿಷಯದ ಕಡೆಗೆ ಓಡಿ ಏಕಾ೦ತದೊಳಗೆ ಆಸರ ಪಡೆಯುತ್ತಿತ್ತು; ಹೀಗೆ ಹಗಲಿರಳು ಯಾವುದೋ ಒಂದು ಬಗೆಯ ಚಿಂತನೆಯಲ್ಲಿಯೇ ಆತನ ಮನಸ್ಸು ರಮಿಸುತ್ತಿರುವಂತೆ ಕಾಣಿಸುತ್ತಿತ್ತು; ಆದರಂತೆ, ಸಿದ್ಧಾರ್ಥನ ತ೦ದೆಯಾದರೂ ಮಗನ ಕಣ್ಣಿಗೆ ಜಗತ್ತಿನ ದುಃಖಮಯ ವಾದ ನೋಟವನ್ನು ಬೀಳಗೊಡಬಾರದೆಂದು ಮನುಷ್ಯ ಮೀರಿ ಪ್ರಯತ್ನ ಪಡುತ್ತಿದ್ದನು; ಸಿದ್ರಾರ್ಧನು ವಿದ್ಯಾಭ್ಯಾಸವನ್ನು ಮುಗಿಸಿ, ಶಾಸ್ತ್ರ, ರಾಜನೀತಿ ಮೊದಲಾದವುಗಳಲ್ಲಿ ಮೀಲಾದನು. ಬುದ್ದನ ಮದುವೆ ಮತ್ತು ವೈರಾಗ್ಯ:- ಪ್ರಪಂಚದೊಳಗಿನ ಪದ್ಧತಿ ಯ೦ತೆ ರಾಜನು ತನ್ನ ನೆರೆಯ ಅರಸು ಮನೆತನದೊಳಗಿನ ಕನೈಯನ್ನಾ ರಿಸಿ ಮಗನ ಮದುವೆ ಮಾಡಿದನು. ಸಿದ್ದಾರ್ಥನ ಹೆಂಡತಿಯ ಹೆಸರು ಯ ಶೋಧರೆ, ರೂಪದಲ್ಲಿ ಲಾವಣ್ಯವತಿಯ, ಗುಣದಲ್ಲಿ ಸುಗುಣೆಯ, ಪತಿಸೇವೆಯಲ್ಲಿ ಮನವಿಟ್ಟಿರುವ ಪತಿವೃತೆಯೂ ಅದ್ದರಿಂದ, ಈ ಹೊಸ ಗೆಳತಿಯಿ೦ದ ಸಿದ್ದಾರ್ಥನ ಮನಸ್ಸು ಸ೦ಸಾರ ದೊಳಗೆ, ಬಲುಮಟ್ಟಿಗೆ. ಮುಳುಗಿ ತು; ಮತ್ತು ರಾಜನಿಗಾದರೂ ಸಾಧ್ಯವಾದಷ್ಟು ಪ್ರಪಂಚದ ಲ್ಲಿನ ಸುಖಮಯವಾದ ಅ೦ಶವನ್ನಷ್ಟೇ ಮಗನ ಕಣ್ಣಿಗೆ ಹಾಕಬೇ ಕೆಂಬ ಹುಚ್ಚು ಹಂಬಲವಿರುವದರಿಂದ೦ತೂ, ಈ ತನ ಮನ ಮರುಳು ಗೊಳಿಸಲಿಕ್ಕೂ, ಮನಸನ್ನು ವಿಷಯಗಳ ಕಡೆಗೆ ಎಳೆದು ಅಲ್ಲಿಯೇ ಯಾವಾಗಲೂ ತೊಡಗಿರುವಂತೆ ಮಾಡಲಿಕ್ಕೂ ಆತನ ಸುತ್ತುಮುತ್ತು ಹೆಣ್ಣು, ಹೊನ್ನು, ಮಣ್ಣು, ನೃತ್ಯ, ಗೀತ, ವಾದ್ಯ ಮೊದಲಾದ ಮನ * ನೈಳೆಯುವ ಭದ್ರವಾದ ಕೋಟೆಯನ್ನೆ ರಚಿಸಿದ್ದನೆಂದರೆ ಸಲ್ಲುವರು. ಅದರೆ, ಮನುಷ್ಯ ಪ್ರಯತ್ನದ ಓಟವು ಎಲ್ಲಿಯ ವರೆಗೆ ? ಕೇವಲ ದುಃಖ ಮಯ ವಾಗಿರುವ ಪ್ರಪಂಚದಲ್ಲಿ ಸುಖಮಯ ಸ್ವರೂಪದ ಪರಿಮಾಣ ವೆಂದರೆ, ಸಮುದ್ರದೊಳಗೆ ಮಳಲಿನ ಕ ಣದಷ್ಟು; ಅ೦ದಮೇಲೆ ಅದನ್ನು ಮರೆಮಾಜು ವದೆಷ್ಟು ದಿವಸ ? ಬಾಲ್ಯರೊಳಗೆ ಇಣಿಕಿ ಹಾಕಿದ ವಿರಾಗ